ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಸಿಟ್ಟು: 12 ಕಾರುಗಳ ಮೇಲೆ ಆಸಿಡ್ ಆಟ್ಯಾಕ್
ಕಾರು ವಾಷಿಂಗ್ ಕೆಲಸ ಸರಿಯಾಗಿ ಮಾಡುತ್ತಿಲ್ಲ ಎಂದು ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಕೆಲಸಗಾರನೋರ್ವ ಅಲ್ಲಿದ್ದ 12ಕ್ಕೂ ಹೆಚ್ಚು ಕಾರುಗಳ ಮೇಲೆ ಆಸಿಡ್ ಎಸೆದು ಹಾನಿಗೊಳಿಸಿದ ಘಟನೆ ಉತ್ತರಪ್ರದೇಶದ ನೋಯ್ಡಾದಲ್ಲಿ ನಡೆದಿದೆ.
ನೋಯ್ಡಾ: ಕಾರು ವಾಷಿಂಗ್ ಕೆಲಸ ಸರಿಯಾಗಿ ಮಾಡುತ್ತಿಲ್ಲ ಎಂದು ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಕೆಲಸಗಾರನೋರ್ವ ಅಲ್ಲಿದ್ದ 12ಕ್ಕೂ ಹೆಚ್ಚು ಕಾರುಗಳ ಮೇಲೆ ಆಸಿಡ್ ಎಸೆದು ಹಾನಿಗೊಳಿಸಿದ ಘಟನೆ ಉತ್ತರಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ರಾಮ್ ರಾಜ್ ಎಂಬಾತನನ್ನು ನೋಯ್ಡಾ ಪೊಲೀಸರು ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದಾರೆ. ನೋಯ್ಡಾದ ಸೊಸೈಟಿಯೊಂದರಲ್ಲಿ ರಾಮ್‌ರಾಜ್ ಕಾರು ಕ್ಲೀನರ್ (Car cleaner) ಆಗಿ ಕೆಲಸ ಮಾಡುತ್ತಿದ್ದ, ಸೊಸೈಟಿಯ ಕೆಲ ನಿವಾಸಿಗಳು ಈತ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರಿದ್ದರು. ಈ ಹಿನ್ನೆಲೆಯಲ್ಲಿ ಈತನನ್ನು ಆಡಳಿತ ಮಂಡಳಿ ಕೆಲಸದಿಂದ ತೆಗೆದು ಹಾಕಿತ್ತು. ಇದರಿಂದ ಸಿಟ್ಟಿಗೆದ್ದ ಆತ ಕಾರುಗಳ ಮೇಲೆ ತನ್ನ ದ್ವೇಷ ತೀರಿಸಿಕೊಂಡಿದ್ದಾನೆ.
ನೋಯ್ಡಾದ ಸೆಕ್ಟರ್ 75ರಲ್ಲಿ ಬರುವ ಮ್ಯಾಕ್ಸ್‌ಬ್ಲಿಸ್ ವೈಟ್ ಹೌಸ್ ಸೊಸೈಟಿಯಲ್ಲಿ ಬುಧವಾರ ಈ ಘಟನೆ ನಡೆದಿದೆ. ಘಟನೆ ನಡೆದ ಸ್ಥಳವೂ ಸೆಕ್ಟರ್ 113ರ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರುತ್ತದೆ. ನಿವಾಸಿಗಳ ದೂರಿನಿಂದ ತನ್ನ ಕೆಲಸ ಹೋಯ್ತು ಎಂದು ಸಿಟ್ಟಿಗೆದ್ದ ರಾಮ್‌ರಾಜ್ ಆಸಿಡ್ ತೆಗೆದುಕೊಂಡು ಬಂದು ಅಲ್ಲಿ ಪಾರ್ಕಿಂಗ್‌ನಲ್ಲಿ ನಿಲ್ಲಿಸಲಾಗಿದ್ದ ಡಜನ್‌ಗೂ ಹೆಚ್ಚು ಕಾರುಗಳ ಮೇಲೆ ಆಸಿಡ್ ಸುರಿದು ತನ್ನ ಪ್ರತಾಪ ತೋರಿದ್ದಾನೆ ಎಂದು ಸೆಕ್ಟರ್ 113ರ ಪೊಲೀಸ್ ಠಾಣೆಯ ಎಸ್‌ಹೆಚ್‌ಒ ಜಿತೇಂದ್ರ ಸಿಂಗ್ (Jitendra singh) ಹೇಳಿದ್ದಾರೆ.
2.5 ಲಕ್ಷ ರೂ, ಒಂದು ಕಾರು, ವರದಕ್ಷಿಣೆ ತರದ ಸೊಸೆಗೆ ಆ್ಯಸಿಡ್ ಕುಡಿಸಿದ ಅತ್ತೆ!
ಇತ್ತ ತಮ್ಮ ಕಾರುಗಳು ಸಡನ್ ಆಗಿ ಹಾನಿಗೊಳಗಾಗಿರುವುದನ್ನು ಗಮನಿಸಿದ ಕಾರಿನ ಮಾಲೀಕರು ಸೊಸೈಟಿಯ ಪಾರ್ಕಿಂಗ್ ಸ್ಥಳದ ಸಿಸಿಟಿವಿಯನ್ನು ಪರಿಶೀಲಿಸಿದಾಗ, ರಾಮ್‌ರಾಜ್‌ನ ಈ ಕರಾಳ ಕೃತ್ಯ ಬೆಳಕಿಗೆ ಬಂದಿದೆ. ಮಾರ್ಚ್ 15 ರಂದು ಬೆಳಗ್ಗೆ 9.15ರ ಸುಮಾರಿಗೆ ಆತ ಈ ಕೃತ್ಯವೆಸಗಿದ್ದಾನೆ.
ನಂತರ ಸೊಸೈಟಿಯ ಆಡಳಿತ ಮಂಡಳಿ ರಾಮ್‌ರಾಜ್‌ನ್ನು (Ramraj) ಹುಡುಕಿ ಸ್ಥಳಕ್ಕೆ ಕರೆತಂದಿದ್ದಾರೆ. ಈ ವೇಳೆ ಆತ ತಪ್ಪು ಮಾಡಿರುವುದನ್ನು ಒಪ್ಪಿಕೊಂಡಿದ್ದು, ಆತನ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ನಂತರ ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ ಗಳಿಗೆಗೊಂದು ಹೇಳಿಕೆ ನೀಡಿ ಪೊಲೀಸರನ್ನು ಗೊಂದಲಕ್ಕೀಡು ಮಾಡಿದ್ದಾನೆ. ,ಮೊದಲಿಗೆ ಯಾರೋ ತನಗೆ ಆಸಿಡ್ ನೀಡಿದರೆಂದು ಆತ ಹೇಳಿದ್ದು, ನಂತರ ವ್ಯತಿರಿಕ್ತವಾದ ಹೇಳಿ ನೀಡಿ ದಾರಿ ತಪ್ಪಿಸಲು ಯತ್ನಿಸಿದ್ದಾನೆ.
ಕನಕಪುರ: ಯುವತಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದ ಪಾಗಲ್ ಪ್ರೇಮಿ ಬಂಧನ
ಘಟನೆಗೆ ಸಂಬಂಧಿಸಿದಂತೆ ಕಾರು ಮಾಲೀಕರು ದೂರನ್ನಾಧರಿಸಿ ಎಫ್‌ಐಆರ್ (FIR) ದಾಖಲಿಸಲಾಗಿದೆ. ಆರೋಪಿ ರಾಮರಾಜ್ 25 ವರ್ಷ ಪ್ರಾಯದ ಆಸುಪಾಸಿನಲ್ಲಿದ್ದು, 2016 ರಿಂದಲೂ ಆತ ಈ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 427 ರ ಅಡಿ ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಆತನನ್ನು ಜೈಲಿಗೆ ಕಳುಹಿಸಿದೆ.