ಅನಾಮಧೆಯ ಮಹಿಳೆಯ ಶವ ಪತ್ತೆ| ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ವಟ್ಲಹಳ್ಳಿ ಗ್ರಾಮದಲ್ಲಿ ನಡೆದ ಘಟನೆ| ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು| 

ಹರಪನಹಳ್ಳಿ(ಅ.15): ಅನಾಮಧೆಯ ಮಹಿಳೆಯ ಶವ ತಾಲೂಕಿನ ವಟ್ಲಹಳ್ಳಿ ಗ್ರಾಮದ ದೊಡ್ಡ ಹಳ್ಳದ ಹತ್ತಿರ ಬುಧವಾರ ಬೆಳಗ್ಗೆ ಕಂಡು ಬಂದಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಸ್ತೆ ಪಕ್ಕದಲ್ಲಿ ದೊಡ್ಡ ಹಳ್ಳದ ಬಳಿ ಅಂದಾಜು 30-35 ವರ್ಷದ ಮಹಿಳೆಯನ್ನು ಯಾರೋ ಕೊಲೆ ಮಾಡಿ ಬೆಂಕಿ ಹಚ್ಚಿ ಅರ್ಧಂಬರ್ಧ ಸುಟ್ಟು ಹಾಕಿದ್ದಾರೆ. ಈ ಮಹಿಳೆಯ ಹೆಸರು ವಿಳಾಸ ತಿಳಿದು ಬಂದಿಲ್ಲ, ಮೇಲ್ನೋಟಕ್ಕೆ ಬಂಜಾರ ಜನಾಂಗದ ಮಹಿಳೆ ಇರಬಹುದು ಎಂದು ಪೊಲೀಸರು ಊಹಿಸಿದ್ದಾರೆ. 

ಬೆಳಗಾವಿ: ಆಸ್ತಿಗಾಗಿ ಮಗನ ಮೇಲೆ ಕಲ್ಲು ಎತ್ತಿಹಾಕಿ ಕೊಂದ ತಂದೆ..!

ಶವವನ್ನು ದಾವಣಗೆರೆ ನಗರದ ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ, ಆಕೆಯ ವಿಳಾಸ ತಿಳಿದು ಬಂದಲ್ಲಿ ಹಲುವಾಗಲು ಪೊಲೀಸ್‌ ಠಾಣೆಗೆ ಅಥವಾ ಹರಪನಹಳ್ಳಿ ಸಿಪಿಐ ಅವರಿಗೆ ತಿಳಿಸಲು ಸ್ಥಳೀಯ ಪೊಲೀಸರು ಕೋರಿದ್ದಾರೆ.

ಇದನ್ನೂ ನೋಡಿ | ಗದಗ; ಗೋವಾಕ್ಕೆ ಹೋದ ಆಂಟಿಗೆ ಬ್ರಹ್ಮಚಾರಿ ಸಹವಾಸ.. ಗಂಡ ಸತ್ತು ಬಿದ್ದ!

"