ಮುಗಳಖೋಡ(ಅ.08): ಆಸ್ತಿ ವಿವಾದ ಹಿನ್ನಲೆಯಲ್ಲಿ ತಂದೆಯೇ ಪುತ್ರನ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖನದಾಳ ಗ್ರಾಮದ ತೋಟದ ಮನೆಯಲ್ಲಿ ಬುಧವಾರ ನಡೆದಿದೆ.

ಅಲಗೌಡ ಚೆನ್ನಪ್ಪ ಅಜೂರೆ(38) ಕೊಲೆಯಾದ ದುರ್ದೈವಿಯಾಗಿದ್ದಾನೆ. ತಂದೆ ಚೆನ್ನಪ್ಪ ಅಜೂರೆ(80) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಪೊಲೀಸರು ಈತನನ್ನ ಬಂಧಿಸಿದ್ದಾರೆ. 

ಇಬ್ಬರು ಹೆಂಡಿರು ಆದರೂ ವಿರಹ ವೇದನೆ...ಬೆಳಗಾವಿ ಜೋಡಿ ಕೊಲೆ ರಹಸ್ಯ!

ಆರು ಎಕರೆ ಆಸ್ತಿ ವಿವಾದ ಹಾಗೂ ನಗದು ಹಣದ ವ್ಯವಹಾರ ಕುರಿತಂತೆ ತಂದೆ, ಮಗನ ಮಧ್ಯೆ ವಾದ ವಿವಾದ ಮೇಲಿಂದ ಮೇಲೆ ನಡೆಯುತ್ತಿತ್ತು ಎನ್ನಲಾಗಿದ್ದು, ಮಗ ಮಲಗಿದ್ದ ಸಂದರ್ಭದಲ್ಲಿ ಬೆಳಗಿನ ಜಾವ ತಂದೆ ಚೆನ್ನಪ್ಪ ಮಗನ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ಇದರಿಂದ ಮಗ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಸಂಬಂಧ ಹಾರೂಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.