Bengaluru Crime: ಜಗಳಕ್ಕೆ ಅಜ್ಜಿ ಬಲಿ: ಖಿನ್ನತೆಗೀಡಾಗಿದ್ದ ಮಹಿಳೆ ಆತ್ಮಹತ್ಯೆ
* ಮಗು ಸಾವಿಂದ ಖಿನ್ನತೆ: ಅಜ್ಜಿ ಕೊಂದು ತಾನೂ ಆತ್ಮಹತ್ಯೆ
* ಜ್ಞಾನಭಾರತಿ ಠಾಣಾ ವ್ಯಾಪ್ತಿ ಘಟನೆ
* ಒಂದೂವರೆ ತಿಂಗಳ ಹಿಂದೆ ಮಗು ಸಾವು
ಬೆಂಗಳೂರು(ಫೆ.26): ಮೂರೂವರೆ ತಿಂಗಳ ಮಗು ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ಮಹಿಳೆಯೊಬ್ಬರು(Women) ಅಜ್ಜಿಯನ್ನು ಕೊಂದು(Murder) ಬಳಿಕ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಾರುತಿ ನಗರದ ಜಯಮ್ಮ(70) ಕೊಲೆಯಾದ ವೃದ್ಧೆ. ಕೊಟ್ಟಿಗೆಪಾಳ್ಯದ ಮಮತಾ(24) ಆತ್ಮಹತ್ಯೆ ಮಾಡಿಕೊಂಡವರು. ಗುರುವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಮಮತಾ ಪತಿ ಸಂಜೆ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಗಳನ್ನು ಕೊಂದ ತಂದೆ, ಕಾರಣ ಕೇಳಿದ್ರೆ ಕಣ್ಣಂಚಿನಲ್ಲಿ ನೀರು ತರಿಸುತ್ತೆ
ವೃದ್ಧೆ ಜಯಮ್ಮ ಅವರು ಪುತ್ರಿ ಮಂಜುಳಾ ಹಾಗೂ ಮೊಮ್ಮಗ ಚೇತನ್ ಜತೆಗೆ ಮಾರುತಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಮಂಜುಳಾ ಅವರ ಪುತ್ರಿ ಎಂಕಾಂ ಪದವೀಧರರಾದ ಮಮತಾ ಅವರನ್ನು ಕೊಟ್ಟಿಗೆಪಾಳ್ಯದ ಮಂಜುನಾಥ್ ಎಂಬುವವರಿಗೆ ವಿವಾಹ(Marriage) ಮಾಡಿಕೊಡಲಾಗಿತ್ತು. ದಂಪತಿಗೆ ಮೂರೂವರೆ ತಿಂಗಳ ಹಿಂದೆ ಮಗುವೊಂದು ಜನಿಸಿತ್ತು. ಒಂದೂವರೆ ತಿಂಗಳ ಹಿಂದೆಯಷ್ಟೇ ಆ ಮಗು ಮೃತಪಟ್ಟಿತ್ತು. ಹೀಗಾಗಿ ಮಮತಾ ಕೊಂಚ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.
ಈ ನಡುವೆ ಗುರುವಾರ ಮಂಡ್ಯದಲ್ಲಿ ಸಂಬಂಧಿಕರೊಬ್ಬರ ವಿವಾಹಕ್ಕೆ ಮಂಜುಳಾ ಹಾಗೂ ಅವರ ಪುತ್ರ ಚೇತನ್ ಹಾಗೂ ಪುತ್ರಿ ಮಮತಾ ತೆರಳಬೇಕಿತ್ತು. ಹೀಗಾಗಿ ಬುಧವಾರವೇ ಮಮತಾ, ಪತಿಯ ಮನೆಯಿಂದ ಮಾರುತಿನಗರದ ತವರು ಮನೆಗೆ ಬಂದಿದ್ದರು. ಗುರುವಾರ ವಿವಾಹಕ್ಕೆ ಹೊರಡಬೇಕು ಎನ್ನುವಷ್ಟರಲ್ಲಿ ಮಮತಾಗೆ ಮಾಸಿಕ ಋುತುಸ್ರಾವವಾದ ಹಿನ್ನೆಲೆಯಲ್ಲಿ ಆಕೆಯನ್ನು ಮನೆಯಲ್ಲಿಯೇ ಬಿಟ್ಟು ಮಂಜುಳಾ ಹಾಗೂ ಚೇತನ್ ಮಂಡ್ಯಕ್ಕೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ವೃದ್ಧೆ ಜಯಮ್ಮ ಹಾಗೂ ಮಮತಾ ಮಾತ್ರ ಇದ್ದರು.
ಗೋಡೆಗೆ ವೃದ್ಧೆ ತಲೆ ಡಿಕ್ಕಿ:
ಗುರುವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಯಾವುದೋ ವಿಚಾರಕ್ಕೆ ವೃದ್ಧೆ ಜಯಮ್ಮ ಹಾಗೂ ಮಮತಾ ನಡುವೆ ಜಗಳ ಆರಂಭವಾಗಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಮಮತಾ, ವೃದ್ಧೆ ಜಯಮ್ಮ ಅವರನ್ನು ಜೋರಾಗಿ ಗೋಡೆ ಕಡೆಗೆ ತಳ್ಳಿದ್ದಾರೆ. ಈ ವೇಳೆ ತಲೆ ಗೋಡೆಗೆ ಬಡಿದು ತೀವ್ರ ರಕ್ತಸ್ರಾವವಾಗಿ ಜಯಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ(Death). ಈ ಸಾವಿನಿಂದ ಆತಂಕಗೊಂಡ ಮಮತಾ ಫ್ಯಾನಿಗೆ ವೇಲ್ ಕಟ್ಟಿ ನೇಣು ಬಿಗಿದುಕೊಂಡ ಮೃತಪಟ್ಟಿದ್ದಾರೆ ಎಂದು ಪೊಲೀಸರು(Police) ತಿಳಿಸಿದ್ದಾರೆ.
ಪತಿ ಮನೆಗೆ ಬಂದಾಗ ಕೃತ್ಯ ಬೆಳಕಿಗೆ:
ಇತ್ತ ಮಂಡ್ಯಕ್ಕೆ ಮದುವೆ ಹೋಗಿದ್ದ ಚೇತನ್, ಮಧ್ಯಾಹ್ನ 3.30ರ ಸುಮಾರಿಗೆ ತಂಗಿ ಮಮತಾ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಆದರೆ, ಕರೆ ಸ್ವೀಕರಿಸಿಲ್ಲ. ಹಲವು ಬಾರಿ ಪ್ರಯತ್ನಿಸಿದರೂ ಕರೆ ಸ್ವೀಕರಿಸಿಲ್ಲ. ಹೀಗಾಗಿ ಗಾಬರಿಗೊಂಡ ಚೇತನ್ ನೆರೆಯ ಮನೆಯವರಿಗೆ ಕರೆ ಮಾಡಿದ್ದಾರೆ. ಬಳಿಕ ಮಮತಾ ಪತಿ ಮಂಜುನಾಥ್‌ಗೂ ಕರೆ ಮಾಡಿ ಕರೆ ಸ್ವೀಕರಿಸದಿರುವ ವಿಚಾರ ತಿಳಿಸಿದ್ದಾರೆ. ಬಳಿಕ ಮಂಜುನಾಥ್ ಹಲವು ಬಾರಿ ಮಮತಾಗೆ ಕರೆ ಮಾಡಿದ್ದು, ಸಂಪರ್ಕಕ್ಕೆ ಸಿಕ್ಕಿಲ್ಲ. ಹೀಗಾಗಿ ಆತಂಕಗೊಂಡು ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Suicide Cases: ಡ್ಯಾಂಗೆ ಹಾರಿ ಪ್ರೇಮಿಗಳಿಬ್ಬರು ಆತ್ಮಹತ್ಯೆ: ಕಾರಣ?
ಪಿಎಸ್‌ಐ ಪುತ್ರನ ಹತ್ಯೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ವಿಜಯಪುರ: ಪಿಎಸ್‌ಐ ಪುತ್ರನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ.
ಪಾಲಿಕೆ ಮಾಜಿ ಸದಸ್ಯ ರೌಫ ಶೇಖ, ರೌಫ ಪುತ್ರ ಆತೀಫ್ ಶೇಖ, ವಿಲಾಸ ರಾಠೋಡ, ಅನಿಲ ಚವ್ಹಾಣ ಬಂಧಿತ ಆರೋಪಿಗಳು. ಪಾಲಿಕೆ ಮಾಜಿ ಸದಸ್ಯ ರೌಫ ಶೇಖ ಅವರ ಪುತ್ರಿ ಅತೀಕಾಳನ್ನು ಗಾಂಧಿ ಚೌಕ ಕ್ರೈಂ ಪಿಎಸ್‌ಐ ರಿಯಾಜ ಕೂಡಗಿ ಅವರ ಪುತ್ರ ಮುಸ್ತಕಿನ್ ಕೂಡಗಿ ಪ್ರೇಮಿಸಿ ಮದುವೆಯಾಗಿದ್ದ. ಈ ಸಿಟ್ಟಿನಿಂದಾಗಿ ಫೆ.15ರಂದು ವಿಜಯಪುರ(Vijayapura) ನಗರದ ರೇಡಿಯೋ ಕೇಂದ್ರದ ಬಳಿ ಮುಸ್ತಕಿನ್ ಕೂಡಗಿ ಭೀಕರ ಹತ್ಯೆ ನಡೆದಿತ್ತು. ಇದು ವಿಜಯಪುರ ನಗರದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ(Arrest) ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ ಅವರು ಮಾಹಿತಿ ನೀಡಿದ್ದಾರೆ.