ಮಗಳನ್ನು ಕೊಂದ ತಂದೆ, ಕಾರಣ ಕೇಳಿದ್ರೆ ಕಣ್ಣಂಚಿನಲ್ಲಿ ನೀರು ತರಿಸುತ್ತೆ

*ತನ್ನ ಮುಂದಿನ ಮಗಳನ್ನು ಕೊಂದ ತಂದೆ
* ಮಗಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ
* ಘಟನೆಗೆ ಕಾರಣ ಕೇಳಿದ್ರೆ ಕಣ್ಣಂಚಿನಲ್ಲಿ ನೀರು ಬರುತ್ತೆ

A Man commits suicide after killed-his-daughter at Bengaluru rbj

ಬೆಂಗಳೂರು, (ಫೆ.25): ಆರ್ಥಿಕ ಸಂಕಷ್ಟದಿಂದ ಬೇಸತ್ತ ತಂದೆಯೊಬ್ಬ ಮಗಳನ್ನು ಕೊಂದು ತಾನು ನೇಣು ಹಾಕಿಕೊಡು ಆತ್ಮಹತ್ಯೆ(Suicide) ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಬೆಂಗಳೂರಿನ(Bengaluru) ಹೆಬ್ಬಗೋಡಿ ನಿವಾಸಿ  39 ವರ್ಷದ ವಿಜಯಕುಮಾರ್  ತನ್ನ 7 ವರ್ಷದ ಮಗಳು (Daughter) ಸಮೀಕ್ಷಾಳನ್ನು ಕೊಂದು ನೇಣಿಗೆ ಶರಣಾಗಿದ್ದಾರೆ.

ತಮಿಳುನಾಡು ಮೂಲದ ವಿಜಯ್ ಕುಮಾರ್ 20 ವರ್ಷದ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಫ್ಯಾಬ್ರಿಕೇಶನ್ ಫ್ಯಾಕ್ಟರಿ  ನಡೆಸುತ್ತಿದ್ದ ವಿಜಯ್ ಕುಮಾರ್ ಗೆ ಕೋವಿಡ್ ಲಾಕ್ ಡೌನ್ ಸಮನಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿತ್ತು.  ಇದರಿಂದ ಖಿನ್ನತೆಗೊಳಗಾಗಿದ್ದ ವಿಜಯ್ ಕುಮಾರ್ 2ನೇ ತರಗತಿಯಲ್ಲಿ ಓದುತ್ತಿದ್ದ ಮಗಳನ್ನು ವೈರ್ ನಿಂದ ಕುತ್ತಿಗೆ ಬಿಗಿದು ಕೊಂದಿದ್ದಾರೆ. ನಂತರ ತಾನು ನೇಣಿಗೆ ಶರಣಾಗಿದ್ದಾರೆ. ಫ್ಯಾಕ್ಟರಿಗೆ ತೆರಳಿದ್ದ ಪತ್ನಿ ಚಂದ್ರಕಲಾ ಮನೆಗೆ ವಾಪಾಸಾದಾಗ ವಿಷಯ ಬೆಳಕಿಗೆ ಬಂದಿದೆ.

ಸರ್ಕಾರಿ ಆಸ್ಪತ್ರೆ ವೈದ್ಯ‌ರ ಎಡವಟ್ಟಿನಿಂದ ತಾಯಿ-ಮಗು ಸಾವು, ಆಸ್ಪತ್ರೆಯ ಶೌಚಾಲಯದಲ್ಲಿ ಶಿಶು ಶವ ಪತ್ತೆ

ವಿಜಯ್ ಕುಮಾರ್ ಮಾಡಿದ ಬಿಸಿನೆಸ್ಸು (Business) ಲಾಸ್ ಆಗಿತ್ತು. ಇತ್ತೀಚೆಗೆ ಕೆಲಸದಿಂದ ಸಹ ತೆಗೆಯಲಾಗಿತ್ತು.ಇದರಿಂದ ವಿಜಯ ಕುಮಾರ್ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ  ವೆಲ್ಡ್ಡಿಂಗ್ ಕೆಲಸ ಮಾಡಿಕೊಂಡು ಜೀವನ‌ ಸಾಗಿಸುತ್ತಿದ್ದರು. ಆದ್ರೆ,  ಕಂಪನಿ ಲಾಸ್ ನಲ್ಲಿ ನಡೆಯುತ್ತಿದೆ ಎಂದು ವಿಜಯ್ ಕುಮಾರ್ ಸೇರಿದಂತೆ ಹತ್ತು ಮಂದಿಯನ್ನು ಕೆಲಸದಿಂದ ತೆಗೆಯಲಾಗಿತ್ತು. 

ಹಾಗಾಗಿ ತಾನು ಮಾಡಿದ ಸಾಲ ತೀರಿಸೋಕೆ ಆಗಿರಲಿಲ್ಲ. ಗಂಡ, ಹೆಂಡತಿ ಕೆಲಸಕ್ಕೆ ಹೋದ್ರೂ,  ಮಗಳ ಭವಿಷ್ಯ  ಏನು ಎಂಬ ಚಿಂತೆ ತಂದೆಗೆ ಕಾಡಿತ್ತು, ಹೀಗಾಗಿ ಮಗಳನ್ನು ಕೊಂದು  ತಾನೂ ನೇಣಿಗೆ ಕೊರಳೊಡ್ಡಿದ್ದಾನೆ.

ವಿಜಯ್ ಕುಮಾರ್ ಯಾವುದೇ ಸೂಸೈಡ್ ನೋಟ್ ಬರೆದಿಟ್ಟಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೋಟದ ಮನೆಯ ಕಿಟಕಿಗೆ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ
ಬಳ್ಳಾರಿ:  ದಂಪತಿಗಳಿಬ್ಬರು ನೇಣು ಬಿಗಿದುಕೂಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿಯ ಚಳ್ಳಕುರ್ಕಿ ಬಳಿಯ ಜಮೀನಿನ ತೋಟದ ಮನೆಯ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಮಯ್ಯ, ಜಯಮ್ಮ ಮೃತ ದಂಪತಿ. ಘಟನಾ ಸ್ಥಳಕ್ಕೆ ಪಿಡಿ ಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪಿಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆನ್‌ಲೈನ್ ಮೂಲಕ ವಂಚಿಸುತ್ತಿದ್ದವರ ಬ್ಯಾಂಕ್ ಖಾತೆ ಫ್ರೀಜ್
ಮೈಸೂರು: ಮೈಸೂರು ಸೈಬರ್ ಕ್ರೈಂ ಪೊಲೀಸರು(Mysuru Cyber Crime Police) ಕಾರ್ಯಾಚರಣೆ ನಡೆಸಿ ಆನ್‌ಲೈನ್ ಮೂಲಕ ವಂಚಿಸುತ್ತಿದ್ದವರ(Online Fraud) ಬ್ಯಾಂಕ್ ಖಾತೆ ಫ್ರೀಜ್ ಮಾಡಿದ್ದಾರೆ. ಮೈಸೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ 4 ಪ್ರಕರಣಗಳು ದಾಖಲಾಗಿದ್ದವು. ಇದರ ಜಾಡು ಹಿಡಿದ ಪೊಲೀಸರು ಪ್ರಕರಣಗಳನ್ನು ಭೇದಿಸಿ ಆನ್‌ಲೈನ್ ಮೂಲಕ ವಂಚಿಸುತ್ತಿದ್ದವರ ಬ್ಯಾಂಕ್ ಖಾತೆ ಫ್ರೀಜ್ ಮಾಡಿದ್ದಾರೆ.

ಅಲ್ಲದೆ ಆನ್ ಲೈನ್ನಿಂದ ವಂಚನೆಗೊಳಗಾಗಿದ್ದವರಿಗೆ ಹಣ ಮರುಪಾವತಿ ಮಾಡಿದ್ದಾರೆ. ಒಟ್ಟು 6,43,297 ರೂ ಹಣ ಮರುಪಾವತಿ ಮಾಡಲಾಗಿದೆ. ವಿಜಯನಗರ ನಿವಾಸಿಗಳಾದ ಚಂದಾಲಾಲ್ ಮತ್ತು ಸುನೀತಾಗೆ ಕೆವೈಸಿ ಒಟಿಪಿ ಪಡೆದು ಒಟ್ಟು 4,49,100 ರೂಪಾಯಿ ವಂಚನೆ ಮಾಡಲಾಗಿತ್ತು. ವಿದ್ಯಾರಣ್ಯಪುರಂ ಚಂದ್ರು ಅವರಿಗೆ 1,69,199 ರೂಪಾಯಿ ವಂಚನೆ ಆಗಿದೆ. ದಟ್ಟಗಳ್ಳಿಯ ರವಿ ಹೆಬ್ಬಾರ್ ಅವರಿಗೆ 22,999 ರೂಪಾಯಿ ವಂಚನೆ. ಹಿನಕಲ್ ನಿವಾಸಿ ಪ್ರೇಮ್ ದಾಸ್ ಅವರಿಗೆ 1,999 ರೂಪಾಯಿ ವಂಚನೆ ಆಗಿತ್ತು. ಸದ್ಯ ಈ ನಾಲ್ಕು ಪ್ರಕರಣಗಳನ್ನು ಬೇದಿಸಿದ ಪೊಲೀಸರು, ವಂಚನೆಗೊಳಗಾಗಿದ್ದವರಿಗೆ ಹಣ ಮರುಪಾವತಿ ಮಾಡಿದ್ದಾರೆ.

Latest Videos
Follow Us:
Download App:
  • android
  • ios