ಹಾಡಹಗಲೇ ಮಹಿಳಾ ಪ್ರೊಫೆಸರ್ ಎಳೆದೊಯ್ದು ದರೋಡೆ: ದೃಶ್ಯ ಕ್ಯಾಮರಾದಲ್ಲಿ ಸೆರೆ
ಮಹಿಳಾ ಪ್ರೊಫೆಸರ್ ಓರ್ವನನ್ನು ದುಷ್ಕರ್ಮಿಯೊರ್ವ ಹಾಡಹಗಲೇ ಎಳೆದೊಯ್ದು ದರೋಡೆ ಮಾಡಿದ ಘಟನೆ ತಮಿಳುನಾಡಿನ ತಿರುಚಿಯಲ್ಲಿ ಮಾರ್ಚ್ 12 ರಂದು ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಿರುಚಿ: ಮಹಿಳಾ ಪ್ರೊಫೆಸರ್ ಓರ್ವನನ್ನು ದುಷ್ಕರ್ಮಿಯೊರ್ವ ಹಾಡಹಗಲೇ ಎಳೆದೊಯ್ದು ದರೋಡೆ ಮಾಡಿದ ಘಟನೆ ತಮಿಳುನಾಡಿನ ತಿರುಚಿಯಲ್ಲಿ ಮಾರ್ಚ್ 12 ರಂದು ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಆಘಾತಕಾರಿ ದೃಶ್ಯ ಸಮೀಪದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆ ಆಗಿತ್ತು. ಈ ದೃಶ್ಯಾವಳಿಯನ್ನು ಆಧರಿಸಿ ಆರೋಪಿಯನ್ನು ಹಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಾರ್ಚ್ 13 ರಂದು 53 ವರ್ಷದ ಮಹಿಳಾ ಪ್ರೊಫೆಸರ್ ತಿರುಚಿಯ ಸೇಂಟ್ ವೆಸ್ಟ್ರಿ (ST Vestrys school) ಶಾಲೆಯ ಸಮೀಪ ತಮ್ಮ ದ್ವಿಚಕ್ರವಾಹನವನ್ನು ನಿಲ್ಲಿಸಿ ವಾಕ್ ಮಾಡಲು ಹೋಗಿದ್ದಾರೆ. ವಾಕ್ ಮುಗಿಸಿ ತಮ್ಮ ಸ್ಕೂಟಿ ಬಳಿ ಬಂದು ಸ್ಕೂಟಿ ತೆಗೆಯಲು ಮುಂದಾದಾಗ ಈ ಪ್ರೊಫೆಸರ್ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿ ಅವರನ್ನು ದರ ದರನೇ ರಸ್ತೆಯಲ್ಲಿಎಳೆದೊಯ್ದು ಬಳಿಕ ಅವರ ಬಳಿ ಇದ್ದ ಮೊಬೈಲ್ ಹಾಗೂ ಸ್ಕೂಟಿಯನ್ನು ಹೊತ್ತೊಯ್ದಿದ್ದ. ತಿರುಚಿಯ ಕಂಟೋನ್ಮೆಂಟ್ ಸಮೀಪ ಭಾನುವಾರ ಸಂಜೆ ಈ ಘಟನೆ ನಡೆದಿತ್ತು.
Bengaluru-Mysuru Expressway: ಹೊಸ ಹೈವೇಯಲ್ಲಿ ಡ್ಯಾಗರ್ ತೋರಿಸಿ ಚಿನ್ನಾಭರಣ ಲೂಟಿ ಮಾಡಿದ ಖದೀಮರು!
ವಿಒಸಿ ರಸ್ತೆಯ ನಿವಾಸಿಯಾಗಿರುವ ಪೊಫೆಸರ್ ಸೀತಾಲಕ್ಷ್ಮಿ (Sitalakshmi) ದರೊಡೆಗೊಳಗಾದವರು. ಅವರು ತಿರುಚಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ಸ್ ಹಾಗೂ ಕಮ್ಯೂನಿಕೇಷನ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತ ಈ ದರೋಡೆ ನಡೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ತಂಜಾವೂರು ಜಿಲ್ಲೆಯ ತಿರುಕಟ್ಟುಪಲ್ಲಿ ನಿವಾಸಿ 32 ವರ್ಷದ ಸೆಂಥಿಲ್‌ಕುಮಾರ್ ಎಂದು ಗುರುತಿಸಲಾಗಿದೆ. ದರೋಡೆ ಮಾಡುವ ಉದ್ದೇಶದಿಂದಲೇ ಸೀತಾಲಕ್ಷ್ಮಿ ಬಳಿ ಬಂದ ಆತ, ಮರದ ತುಂಡಿನಿಂದ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ನೆಲಕ್ಕೆ ಬಿದ್ದ ಅವರ ಎರಡು ಕಾಲುಗಳನ್ನು ಹಿಡಿದು ದರ ದರನೇ ಎಳೆದುಕೊಂಡು ಬಂದು ಕಾಂಪೌಂಡ್ ಬಳಿ ಬಿಟ್ಟು, ನಂತರ ಅವರ ದ್ವಿಚಕ್ರವಾಹನ ಹಾಗೂ ಮೊಬೈಲ್ ಜೊತೆ ಪರಾರಿಯಾಗಿದ್ದ.
ಹಲ್ಲೆಯ ನಂತರ ಮೇಲೇಳುವಲ್ಲಿ ಯಶಸ್ವಿಯಾದ ಪೊಫೆಸರ್ ಸೀತಾಲಕ್ಷ್ಮಿ ಅವರು ನಂತರ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಅದರಂತೆ ಇಂದು ಪೊಲೀಸರು ಆರೋಪಿ ಸೆಂಥಿಲ್ ಕುಮಾರ್‌ನನ್ನು (Senthil Kumar) ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಸೀತಾಲಕ್ಷ್ಮಿ (Sitalakshmi) ಕಾಲು ಮುರಿತಕ್ಕೊಳಗಾಗಿತ್ತು. ಪ್ರಸ್ತುತ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರನ್ನು ಆರೋಪಿ ಎರಡು ಕಾಲುಗಳಲ್ಲಿ ಹಿಡಿದು ಎಳೆದೊಯ್ಯುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಂಗಳೂರು: ಪೊಲೀಸರ ಸೋಗಿನಲ್ಲಿ 1.21 ಕೋಟಿ ದರೋಡೆ