ಬೆಂಗಳೂರು: ಪೊಲೀಸರ ಸೋಗಿನಲ್ಲಿ 1.21 ಕೋಟಿ ದರೋಡೆ

ಬೆಂಗಳೂರು ನಗರದಲ್ಲಿ ಚಿನ್ನ ಖರೀದಿಗೆ ಸಹಾಯಕರನ್ನು ಕಳುಹಿಸಿದ್ದ ರಾಯಚೂರಿನ ಮೂವರು ಚಿನ್ನದ ವ್ಯಾಪಾರಿಗಳು, ಬಳಿಕ ಖರೀದಿಸಿದ್ದ ಸಹಾಯಕರು, ರಾಯಚೂರಿಗೆ ತೆರಳಲು ಖಾಸಗಿ ಬಸ್‌ ನಿಲ್ದಾಣ ಬಳಿ ಬಂದಿದ್ದಾಗ ಇಬ್ಬರು ನಕಲಿ ಪೊಲೀಸರು ಪ್ರತ್ಯಕ್ಷ, ಬೆದರಿಸಿ ಚಿನ್ನದ ಗಟ್ಟಿಕಸಿದು ಪರಾರಿ. 

1.21 Crore Robbery in the Guise of Police in Bengaluru grg

ಬೆಂಗಳೂರು(ಮಾ.14):  ಇಬ್ಬರು ದುಷ್ಕರ್ಮಿಗಳು ಪೊಲೀಸರ ಸೋಗಿನಲ್ಲಿ ಚಿನ್ನಾಭರಣ ಮಾರಾಟದ ಅಂಗಡಿಯ ಇಬ್ಬರು ಸಿಬ್ಬಂದಿಯನ್ನು ಬೆದರಿಸಿ ನಗದು ಸೇರಿದಂತೆ .1.21 ಕೋಟಿ ಮೌಲ್ಯದ ಚಿನ್ನದ ಗಟ್ಟಿಗಳನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ಉಪ್ಪಾರಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಾ.11ರಂದು ರಾತ್ರಿ 11ರ ಸುಮಾರಿಗೆ ಗಾಂಧಿನಗರದ ಆನಂದರಾವ್‌ ವೃತ್ತದ ಗ್ರೀನ್‌ ಲೈನ್‌ ಟ್ರಾವೆಲ್ಸ್‌ ಕಚೇರಿ ಬಳಿ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ರಾಯಚೂರು ಮೂಲದ ಅಬ್ದುಲ್‌ ರಜಾಕ್‌ ಮತ್ತು ಮಲ್ಲಯ್ಯ ಎಂಬುವವರಿಂದ .19 ಸಾವಿರ ನಗದು, ತಲಾ 1 ಕೆ.ಜಿ. ತೂಕದ ಚಿನ್ನದ ಬಿಸ್ಕತ್‌ ಹಾಗೂ 200 ಗ್ರಾಂ ಚಿನ್ನಾಭರಣ ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ಅಬ್ದುಲ್‌ ರಜಾಕ್‌ ನೀಡಿದ ದೂರಿನ ಮೇರೆಗೆ ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಾಕು ಹಿಡಿದು ಮಗನನ್ನೇ ದರೋಡೆ ಮಾಡಲು ಹೋದ ತಂದೆ..!

ಏನಿದು ಘಟನೆ?

ದೂರುದಾರ ಅಬ್ದುಲ್‌ ರಜಾಕ್‌ ರಾಯಚೂರಿನ ನೇತಾಜಿ ನಗರದ ಶರಫ್‌ ಬಜಾರ್‌ನ ಚಿನ್ನಾಭರಣ ವ್ಯಾಪಾರಿ ಮಹಮ್ಮದ್‌ ಖಾದೀರ್‌ ಪಾಷಾ ಅವರ ಕಾರು ಚಾಲಕನಾಗಿದ್ದಾರೆ. ಮಾ.10ರಂದು ಮಾಲಿಕ ಖಾದೀರ್‌ ಪಾಷಾ ಅವರು ಅಬ್ದುಲ್‌ ರಜಾಕ್‌ಗೆ .56 ಲಕ್ಷ ನಗದು ಹಣ ನೀಡಿ, ಬೆಂಗಳೂರಿನ ರಾಜಾ ಮಾರ್ಕೆಟ್‌ನ ಬಾಪೂ ಭಾಯ್‌ ಮತ್ತು ಅಜಯ್‌-ವಿಜಯ್‌ ಎಂಬುವವರ ಬಳಿ ಚಿನ್ನದ ಗಟ್ಟಿತೆಗೆದುಕೊಂಡು ಬರುವಂತೆ ಹೇಳಿದ್ದಾರೆ. ಅದರಂತೆ ಅಬ್ದುಲ್‌ ರಜಾಕ್‌ ಅಂದು ರಾತ್ರಿಯೇ ಹೊರಟು ಖಾಸಗಿ ಬಸ್ಸಿನಲ್ಲಿ ಮಾ.11ರ ಮುಂಜಾನೆ ಬೆಂಗಳೂರಿಗೆ ಬಂದಿದ್ದಾರೆ. ಬಳಿಕ ಅಕ್ಕಿಪೇಟೆಯಲ್ಲಿರುವ ಬಾಪೂ ಭಾಯ್‌ ಅವರ ಮನೆಗೆ ತೆರಳಿ ವಿಶ್ರಾಂತಿ ಪಡೆದಿದ್ದಾರೆ.

ಈ ನಡುವೆ ರಾಯಚೂರು ಮೂಲದ ಚಿನ್ನಾಭರಣ ವ್ಯಾಪಾರಿ ಜಿ.ಮಲ್ಲಿಕಾರ್ಜುನ್‌ ತನ್ನ ಸಹಾಯಕ ಮಲ್ಲಯ್ಯಗೆ .60 ಲಕ್ಷ ಕೊಟ್ಟು ಬೆಂಗಳೂರಿನ ಬಾಪೂ ಭಾಯ್‌ ಮತ್ತು ಅಜಯ್‌-ವಿಜಯ್‌ ಎಂಬುವವರ ಬಳಿ ಚಿನ್ನದ ಗಟ್ಟಿತೆಗೆದುಕೊಂಡು ಬರುವಂತೆ ಹೇಳಿದ್ದಾರೆ. ಅಂತೆಯೆ ರಾಯಚೂರಿನ ಚಿನ್ನಾಭರಣ ವ್ಯಾಪಾರಿ ದಿನೇಶ್‌ ಅವರ ಬಳಿ ಸಹಾಯಕನಾಗಿ ಕೆಲಸ ಮಾಡುತ್ತಿರುವ ಮಲ್ಲಯ್ಯನ ಮಗ ಸುನೀಲ್‌ಗೆ ಮಾಲಿಕ .75 ಲಕ್ಷ ಕೊಟ್ಟು ಬೆಂಗಳೂರಿನ ಮನೀಶ್‌ ಎಂಬುವವರ ಬಳಿ ಚಿನ್ನದ ಗಟ್ಟಿತರಲು ಸೂಚಿಸಿದ್ದಾರೆ. ಅದರಂತೆ ತಂದೆ-ಮಗ ಮಲ್ಲಯ್ಯ ಮತ್ತು ಸುನೀಲ್‌ ಕುಮಾರ್‌ ಬೆಂಗಳೂರಿಗೆ ಬಂದು ಆದರ್ಶ ಲಾಡ್ಜ್‌ನಲ್ಲಿ ರೂಮ್‌ ಬಾಡಿಗೆ ಪಡೆದು ತಂಗಿದ್ದರು.

ಒಟ್ಟಿಗೆ ತೆರಳಿ ಚಿನ್ನ ಖರೀದಿ

ಮಲ್ಲಯ್ಯ ಮಾ.11ರಂದು ಬೆಳಗ್ಗೆ 11.30ಕ್ಕೆ ಅಬ್ದುಲ್‌ ರಜಾಕ್‌ಗೆ ಕರೆ ಮಾಡಿ ತಾನು ಮತ್ತು ತನ್ನ ಮಗ ಚಿನ್ನದ ಗಟ್ಟಿಖರೀದಿಗೆ ಬೆಂಗಳೂರಿಗೆ ಬಂದಿದ್ದು, ಲಾಡ್ಜ್‌ನಲ್ಲಿ ಉಳಿದುಕೊಂಡಿರುವ ವಿಚಾರ ತಿಳಿಸಿದ್ದಾರೆ. ಅಲ್ಲಿಗೆ ಬರುವಂತೆ ಕರೆದಿದ್ದಾರೆ. ಅದರಂತೆ ಅಬ್ದುಲ್‌ ರಜಾಕ್‌ ಲಾಡ್ಜ್‌ಗೆ ಬಂದಿದ್ದು, ಬಳಿಕ ಮೂವರು ಸೇರಿ ತಿಂಡಿ ತಿಂದು ಬಳಿಕ ಚಿನ್ನದ ಗಟ್ಟಿಖರೀದಿಗೆ ತೆರಳಿದ್ದಾರೆ. ಸಂಜೆ 7 ಗಂಟೆಗೆ ಮೂವರು ಚಿನ್ನದ ಗಟ್ಟಿಖರೀದಿಸಿಕೊಂಡು ವಾಪಾಸ್‌ ಲಾಡ್ಜ್‌ಗೆ ಬಂದಿದ್ದಾರೆ. ಬಳಿಕ ಅಂದೇ ರಾತ್ರಿ 11 ಗಂಟೆಗೆ ಹೊರಡಲಿದ್ದ ಗ್ರೀನ್‌ ಲೈನ್‌ ಟ್ರಾವೆಲ್ಸ್‌ನ ಬಸ್ಸಿನಲ್ಲಿ ರಾಯಚೂರಿಗೆ ತೆರಳಲು ರಾತ್ರಿ 10.45ಕ್ಕೆ ಆನಂದರಾವ್‌ ವೃತ್ತದ ಗ್ರೀನ್‌ ಲೈನ್‌ ಟ್ರಾವೆಲ್ಸ್‌ನ ಕಚೇರಿ ಬಳಿ ಬಂದಿದ್ದಾರೆ.

ಕಡಿಮೆ ಕೂಲಿಗೆ ಮನೆಗೆಲಸಕ್ಕೆ ಸೇರಿದ ನೇಪಾಳಿ ಪೋರಿ: ಮಾಲೀಕನ ಮನೆಗೆ ಕನ್ನ ಹಾಕಿ ಪರಾರಿ

ಶೌಚಾಲಯ ಬಳಿ ಚಿನ್ನ ಕಸಿದರು

ಈ ವೇಳೆ ಸುನೀಲ್‌ ಕುಮಾರ್‌ನನ್ನು ಗ್ರೀನ್‌ ಲೈನ್‌ ಟ್ರಾವೆಲ್ಸ್‌ನ ಕಚೇರಿಯಲ್ಲಿ ಕೂರಿಸಿ, ಮಲ್ಲಯ್ಯ ಮತ್ತು ಅಬ್ದುಲ್‌ ರಜಾಕ್‌ ಸಮೀಪದ ಸಾರ್ವಜನಿಕ ಶೌಚಾಲಯಕ್ಕೆ ತೆರಳಲು ಹೋಗುವಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಎದುರಾಗಿದ್ದಾರೆ. ‘ನಾವು ಪೊಲೀಸರು. ನಿಮ್ಮ ಮೇಲೆ ಕಳೆದ ಮೂರು ತಿಂಗಳಿಂದ ನಿಗಾವಹಿಸಿದ್ದೇವೆ’ ಎಂದು ಮಲ್ಲಯ್ಯ ಮತ್ತು ಅಬ್ದುಲ್‌ ರಜಾಕ್‌ರನ್ನು ಬೆದರಿಸಿ ಅವರ ಬಳಿಯಿದ್ದ ಚಿನ್ನದಗಟ್ಟಿಹಾಗೂ ಚಿನ್ನಾಭರಣಗಳಿದ್ದ ಬ್ಯಾಗ್‌ ಕಸಿದುಕೊಂಡಿದ್ದಾರೆ. ಮಲ್ಲಯ್ಯನ ಬಳಿಯಿದ್ದ .19 ಸಾವಿರ ನಗದು ಕಿತ್ತುಕೊಂಡಿದ್ದಾರೆ.

ರಿಕ್ಷಾದಲ್ಲಿ ಕರೆದೊಯ್ದು ಬಳಿಕ ಇಳಿಸಿ ಪರಾರಿ

ಬಳಿಕ ದುಷ್ಕರ್ಮಿಗಳು ಒಂದು ಆಟೋ ರಿಕ್ಷಾ ಕರೆದು ಮಲ್ಲಯ್ಯ, ರಜಾಕ್‌ ಅವರನ್ನು ಆಟೋದಲ್ಲಿ ಹತ್ತಿಸಿಕೊಂಡು ರೇಸ್‌ಕೋರ್ಸ್‌ ರಸ್ತೆಯ ಕಾಂಗ್ರೆಸ್‌ ಕಚೇರಿ ಬಳಿಗೆ ತೆರಳಿದ್ದಾರೆ. ಅಲ್ಲಿ ಮಲ್ಲಯ್ಯನನ್ನು ಕೆಳಗೆ ಇಳಿಸಿ ಬಳಿಕ ಮುಂದೆ ಸಾಗಿ ನೆಹರೂ ತಾರಾಲಯದ ಬಳಿ ಇರುವ ಚೌಡಯ್ಯ ರಸ್ತೆಯಲ್ಲಿ ಅಬ್ದುಲ್‌ ರಜಾಕ್‌ನನ್ನು ಇಳಿಸಿದ್ದಾರೆ. ಈ ವೇಳೆ ಇಬ್ಬರೂ ಡೀಸಿ ಕಚೇರಿ ಬಳಿ ಬನ್ನಿ ಎಂದು ತಾಕೀತು ಮಾಡಿ ಆಟೋರಿಕ್ಷಾದಲ್ಲಿ ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ. ದುಷ್ಕರ್ಮಿಗಳು ಆನಂದ್‌ ರಾವ್‌ ವೃತ್ತದಲ್ಲಿ ಓಡಾಡಿರುವ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಶೀಘ್ರದಲ್ಲೇ ಇಬ್ಬರನ್ನೂ ಬಂಧಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios