*   ಕೌಟುಂಬಿಕ ಹಿನ್ನೆಲೆಯಲ್ಲಿ ದಂಪತಿ ಮಧ್ಯೆ ಮನಸ್ತಾಪ*  ಕಾಲು ತಾಕಿದ್ದಕ್ಕೆ ಪತಿ ರಾದ್ಧಾಂತ*  ಸಿಟ್ಟಿಗೆದ್ದ ಪತ್ನಿಯಿಂದ ಕೊಲೆ; ಬಂಧನ 

ಬೆಂಗಳೂರು(ಏ.12): ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಹತ್ಯೆಗೈದ(Murder) ಪತ್ನಿಯನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು(Police) ಸೋಮವಾರ ಬಂಧಿಸಿದ್ದಾರೆ.

ಅಂದ್ರಹಳ್ಳಿಯ ಸಾಯಿಬಾಬಾ ಲೇಔಟ್‌ ನಿವಾಸಿ ಉಮೇಶ್‌(52) ಕೊಲೆಯಾದ ದುರ್ದೈವಿ. ಈ ಸಂಬಂಧ ಮೃತನ ಪತ್ನಿ ವರಲಕ್ಷ್ಮೀ(48) ಎಂಬುವರನ್ನು ಬಂಧಿಸಲಾಗಿದೆ(Arrest). ಮನೆಯಲ್ಲಿ ಮುಂಜಾನೆ ದಂಪತಿ ಮಧ್ಯೆ ಜಗಳವಾಗಿದೆ. ಆಗ ಕೆರಳಿದ ವರಲಕ್ಷ್ಮೀ, ಮಲಗಿದ್ದ ಪತಿ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದಿದ್ದಾರೆ. ಬಳಿಕ ತಾವೇ ಮನೆ ಸಮೀಪದ ಆಸ್ಪತ್ರೆಗೆ ಕರೆತಂದಿದ್ದಾರೆ. ಅಷ್ಟರಲ್ಲಿ ತೀವ್ರ ರಕ್ತಸ್ರಾವದಿಂದ ಉಮೇಶ್‌ ಮೃತಪಟ್ಟಿದ್ದಾರೆ(Death). ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಶಂಕೆ ಮೇರೆಗೆ ಮೃತನ ಪತ್ನಿ ಮತ್ತು ಮಕ್ಕಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್‌ ಪಾಟೀಲ್‌ ತಿಳಿಸಿದ್ದಾರೆ.

ಕಾರು ಹತ್ತಿಸಿ ಪೊಲೀಸ್‌ ಹತ್ಯೆಗೆ ಯತ್ನ: ಗುಜರಾತ್ ಎಎಪಿ ಮುಖಂಡನ ಬಂಧನ

ಕುಣಿಗಲ್‌ ತಾಲೂಕಿನ ಅಮೃತೂರಿನ ಉಮೇಶ್‌ 28 ವರ್ಷಗಳ ಹಿಂದೆ ಸೋದರ ಮಾವನ ಮಗಳು ವರಲಕ್ಷ್ಮೇ ಜತೆ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ರಿಯಲ್‌ ಎಸ್ಟೇಟ್‌ ಹಾಗೂ ಫೈನಾನ್ಸ್‌ ವ್ಯವಹಾರದಲ್ಲಿ ತೊಡಗಿದ್ದ ಉಮೇಶ್‌, ಅಂದ್ರಹಳ್ಳಿಯ ಸಾಯಿಬಾಬಾ ಲೇಔಟ್‌ನಲ್ಲಿ ಕುಟುಂಬ ಜತೆ ನೆಲೆಸಿದ್ದರು. ಇತ್ತೀಚಿಗೆ ಕೌಟುಂಬಿಕ ವಿಚಾರವಾಗಿ ದಂಪತಿ(Couple) ಮಧ್ಯೆ ಮನಸ್ತಾಪವಾಗಿತ್ತು. ಮನೆಯಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಗಲಾಟೆಗಳು ನಡೆದಿದ್ದವು.

ಅಂತೆಯೇ ಭಾನುವಾರ ರಾತ್ರಿ ಸಹ ಸತಿ-ಪತಿ ಮಧ್ಯೆ ಜಗಳವಾಗಿ ತಣ್ಣಾಗಿದೆ. ಆದರೆ, ಮುಂಜಾನೆ ನಿದ್ರೆಯಿಂದ ಎಚ್ಚರಗೊಂಡ ವರಲಕ್ಷ್ಮೀ, ಶೌಚಾಲಯಕ್ಕೆ ಹೋಗುವಾಗ ಆಕಸ್ಮಿಕವಾಗಿ ಪತಿಗೆ ಕಾಲು ತಾಕಿಸಿದ್ದಾರೆ. ಇಷ್ಟಕ್ಕೇ ಸಿಟ್ಟಿಗೆದ್ದ ಉಮೇಶ್‌, ಪತ್ನಿಗೆ ಕಾಲಿನಿಂದು ಒದ್ದು ರಾದ್ಧಾಂತ ಮಾಡಿದ್ದಾನೆ. ಈ ಹಂತದಲ್ಲಿ ಕೆರಳಿದ ವರಲಕ್ಷ್ಮೇ, ಮನೆಯಲ್ಲಿದ್ದ ಕಬ್ಬಿಣ ರಾಡ್‌ನಿಂದ ಪತಿ ತಲೆಗೆ ಹೊಡೆದಿದ್ದಾರೆ. ಬಳಿಕ ಮನೆ ಹತ್ತಿರದ ಆಸ್ಪತ್ರೆಗೆ ಗಾಯಾಳು ಪತಿಯನ್ನು ಕರೆದಿದ್ದಾರೆ. ಆದರೆ, ತೀವ್ರ ರಕ್ತಸ್ರಾವದಿಂದ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ಈ ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಆರಂಭದಲ್ಲಿ ವರಲಕ್ಷ್ಮೀಯನ್ನು ವಿಚಾರಿಸಿದಾಗ ಗೊಂದಲಕಾರಿ ಹೇಳಿಕೆ ನೀಡಿದ್ದಾಳೆ. ಇದರಿಂದ ಅನುಮಾನಗೊಂಡ ಪೊಲೀಸರು, ಮೃತನ ಮನೆಗೆ ತೆರಳಿ ಪರಿಶೀಲಿಸಿದಾಗ ಮಲಗುವ ಕೋಣೆಯಲ್ಲಿ ರಕ್ತ ಚೆಲ್ಲಾಡಿದ್ದು ಕಂಡು ಬಂದಿದೆ. ಆಗ ಉಮೇಶ್‌ ಪತ್ನಿ ಮತ್ತು ಮಕ್ಕಳನ್ನು ಪ್ರತ್ಯೇಕವಾಗಿ ಪೊಲೀಸರು ವಿಚಾರಿಸಿದಾಗ ವರಲಕ್ಷ್ಮೀ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.

ಪ್ರೀತಿಯಲ್ಲಿ ಹುಚ್ಚಿಯಾದ ವಿವಾಹಿತ ಮಗಳು, ತವರು ಮನೆಗೆ ಬೆಂಕಿ, ಅಣ್ಣನ ಇಬ್ಬರು ಮಕ್ಕಳ ಹತ್ಯೆ!

ಹೊರಗೆ ಮಲಗಿದ್ದವರನ್ನೇ ಟಾರ್ಗೆಟ್ ಮಾಡಿ ಹತ್ಯೆಗೈಯುತ್ತಿದ್ದ ಸೈಕೊಪಾತ್‌ಗಳು!

ದಾವಣಗೆರೆ: ಹರಿಹರ ನಗರದ ಗಾಂಧಿ ಮೈದಾನದ ಕ್ರೀಡಾ ಇಲಾಖೆ ವಾಣಿಜ್ಯ ಸಂಕೀರ್ಣದ ಮುಂಭಾಗ ಮಾರ್ಚ್ 16ರಂದು ಬೆಳಕಿಗೆ ಬಂದಿದ್ದ ಯುವಕನ ಸಾವು ರಾಜಕೀಯ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ದಾವಣಗೆರೆ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಎ ಕೆ ಕಾಲೋನಿ 1ನೇ ಕ್ರಾಸ್ ವಾಸಿಗಳಾದ ಮಂಜು (31) ಶಿವು(22) ಬಂಧಿತ ಆರೋಪಿಗಳು. ವಾಣಿಜ್ಯ ಸಂಕೀರ್ಣದ ಅಂಬೇಮಾ ಎಂಆರ್‌ಪಿ ವೈನ್ ಶಾಪ್ ಪಕ್ಕದಲ್ಲಿ ಮಾರ್ಚ್ 16ರಂದು ತಾಲೂಕಿನ ಗಂಗನರಸಿ ಗ್ರಾಮದ ಹನುಮಂತಪ್ಪ ಎಂಬುವರ ಪುತ್ರ ಗಿರೀಶ್ (21) ಅನುಮಾನಾಸ್ಪದವಾಗಿ ಮೃತಪಟ್ಟಿದ್ದ.

ಕೊಲೆ ಪ್ರಕರಣ ಪತ್ತೆಹಚ್ಚುವುದು ಪೊಲೀಸರಿಗೆ ಸವಾಲ್ ಆಗಿತ್ತು : ಮೃತ ಯುವಕನ ತಲೆ ಪಕ್ಕದಲ್ಲಿ ಅಧ್ಯಕ್ಷ ಇದ್ದ ಸೈಜು ಕಲ್ಲು ಹಾಗೂ ಆ ಸ್ಥಳದಲ್ಲಿ ಹರಿದಿದ್ದ ರಕ್ತವನ್ನು ನೋಡಿ ಕೊಲೆ ಪ್ರಕರಣ ಎಂಬ ಶಂಕೆ ಉಂಟಾಗಿತ್ತು.. ಆ ಕಲ್ಲನ್ನು ತಲೆ ಮೇಲೆ ಎತ್ತಿ ಹಾಕಿದ್ದರೆ ತಲೆ, ಮುಖ ಜಜ್ಜಿ ಹೋಗಬೇಕಿತ್ತು ಆದ್ರೆ ಹಾಗೇ ಆಗಿರಲಿಲ್ಲ. ಕೊಲೆ ಪ್ರಕರಣವೆಂದು ಗಿರೀಶ್ ಕುಟುಂಬದವರು ದೂರು ದಾಖಲಿಸಿದ್ದರು. ಇದು ಕೊಲೆಯೋ ಇಲ್ಲವೋ ಎಂಬ ಸಂಶಯವು ಪೊಲೀಸರಿಗಿತ್ತು. ಪ್ರಕರಣ ಜಾಡು ಹತ್ತಿದ ಪೊಲೀಸರಿಗೆ ಇದು ಕೊಲೆ ಎಂಬುದಾಗಿ ಧೃಡವಾಗಿ ಆರೋಪಿಗಳನ್ನು ಬಂಧಿಸಿದ್ದಾರೆ.