ಪ್ರೀತಿಯಲ್ಲಿ ಹುಚ್ಚಿಯಾದ ವಿವಾಹಿತ ಮಗಳು, ತವರು ಮನೆಗೆ ಬೆಂಕಿ, ಅಣ್ಣನ ಇಬ್ಬರು ಮಕ್ಕಳ ಹತ್ಯೆ!
* ಎರಡನೇ ಮದುವೆಯಾಗಿದ್ದರೂ ಮೂರನೆಯವನ ಸಂಬಂಧ
* ವಿವಾಹಿತ ಮಗಳ ಕುಕೃತ್ಯ ಅರಿತು ಬೈದ ತಂದೆ
* ತಂದೆ ಮೇಲಿನ ಸೇಡಿಗೆ ಅಣ್ಣನ ಮಕ್ಕಳನ್ನೇ ಕೊಂದ ರಕ್ಕಸಿ
ಭೋಪಾಲ್(ಏ.06): ಮಧ್ಯಪ್ರದೇಶದ ಇಂದೋರ್‌ನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದ್ದು, ಇದನ್ನು ನೋಡಿ ಪೊಲೀಸರೂ ಆಕ್ರೋಶಗೊಂಡಿದ್ದಾರೆ. ಇಲ್ಲಿ ಮದುವೆಯಾದ ಮಗಳ ಅಕ್ರಮ ಸಂಬಂಧ ವಿಚಾರವಾಗಿ ತಿಳಿದ ತಂದೆ ಆಕೆಯನ್ನು ಗದರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮಗಳು ಘೋರ ಹೆಜ್ಜೆ ಇಟ್ಟಿದ್ದಾಳೆ. ಕೋಪದಲ್ಲಿ ಆಕೆ ತನ್ನ ತಂದೆಯ ಮನೆಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಮನೆಯೊಳಗೆ ಮಲಗಿದ್ದ ಇಬ್ಬರು ಅಮಾಯಕ ಮಕ್ಕಳು ಸುಟ್ಟು ಸಾವನ್ನಪ್ಪಿದ್ದಾರೆ. ಯುವತಿಯ ಈ ಹುಚ್ಚುತನಕ್ಕೆ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.
ನಿದ್ರಿಸಿದ್ದ ಸೊಸೆಯರನ್ನೇ ಕೊಂದ ನಿರ್ದಯಿ ಚಿಕ್ಕಮ್ಮ
ವಾಸ್ತವವಾಗಿ, ಸೋಮವಾರ ತಡರಾತ್ರಿ ಇಂದೋರ್‌ನ ಕೊಳಗೇರಿ ಪ್ರದೇಶದಲ್ಲಿ ಈ ಶಾಕಿಂಗ್ ಘಟನೆ ಸಂಭವಿಸಿದೆ. ಅಲ್ಲಿ ಮಹಿಳೆಯೊಬ್ಬಳು ಎರಡು ಮದುವೆಯಾದ ಬಳಿಕವೂ ಮತ್ತೊಬ್ಬ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಷಯ ಆಕೆಯ ತಂದೆಗೆ ತಿಳಿದಾಗ ಅವರು ಮಗಳನ್ನು ಈ ವಿಚಾರವಾಗಿ ಗದರಿಸಿದ್ದಾರೆ. ಅಲ್ಲದೇ ಕಪಾಳಮೋಕ್ಷ ಮಾಡಿದ್ದಾರೆ. ಇದರಿಂದ ಕೋಪಗೊಂಡ ಮಗಳು ತಂದೆ ಮನೆಯಿಂದ ಹೋದ ತಕ್ಷಣ ಮನೆಗೆ ಬೆಂಕಿ ಹಚ್ಚಿದ್ದಾಳೆ. ಬೆಂಕಿ ಹಚ್ಚಿದಾಗ ಮಹಿಳೆಯ ಇಬ್ಬರು ಅಪ್ರಾಪ್ತ ಸೊಸೆಯಂದಿರು ಮನೆಯೊಳಗೇ ನಿದ್ರಿಸುತ್ತಿದ್ದರು. ಬೆಂಕಿಯಲ್ಲಿ ಇಬ್ಬರೂ ಸಜೀವ ದಹನವಾಗಿದ್ದಾರೆ.
ಅಣ್ಣನ ಮಕ್ಕಳನ್ನು ಕೊಂದು ತಂದೆಯ ಮೇಲೆ ಸೇಡು
ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಇಂದೋರ್ ಪೊಲೀಸ್ ಆಯುಕ್ತ ಹರಿನಾರಾಯಣಚಾರಿ ಮಿಶ್ರಾ, ಆರೋಪಿ ಮಹಿಳೆಯ ಹೆಸರು ಬರ್ಖಾ ಎಂದು ಹೇಳಿದ್ದಾರೆ. ಇವರು ಎರಡನೇ ಮದುವೆಯಾಗಿದ್ದಾರೆ. ಆದರೆ ಅವಳು ಮೂರನೇ ಯುವಕನೊಂದಿಗೆ ಸಂಬಂಧ ಹೊಂದಿದ್ದಾಳೆ. ಈ ವಿಚಾರವಾಗಿ ಗಂಡ ಹೆಂಡತಿ ನಡುವೆ ಪ್ರತಿದಿನ ಜಗಳ ನಡೆಯುತ್ತಿತ್ತು. ಸೋಮವಾರ ರಾತ್ರಿಯೂ ಇದೇ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇದೇ ವೇಳೆ ಮಹಿಳೆಯ ತಂದೆ ಜಗಳವಾಡುವುದನ್ನು ಕಂಡು ಕಪಾಳಮೋಕ್ಷ ಮಾಡಿದ್ದಾರೆ. ಇದಕ್ಕೆ ಸೇಡು ತೀರಿಸಿಕೊಂಡ ಆಕೆ ತನ್ನ ಅಣ್ಣ ಹಾಗೂ ಅತ್ತಿಗೆಯ ಇಬ್ಬರು ಮಕ್ಕಳನ್ನು ಮನೆಯಲ್ಲಿ ನಿದ್ರಿಸುತ್ತಿರುವಾಗ ಬೆಂಕಿ ಹಚ್ಚಿದ್ದಾಳೆ ಎಂದಿದ್ದಾರೆ.
ಮಕ್ಕಳ ಶವ ಕಂಡು ಅಸಹಾಯಕರಾಗಿ ಕಂಬನಿ ಮಿಡಿದ ತಂದೆ-ತಾಯಿ
ಬೆಂಕಿಯಲ್ಲಿ ಸುಟ್ಟು ಕರಕಲಾದ ಬಾಲಕಿಯರ ಪೋಷಕರಿಗೆ ಈ ವಿಷಯ ತಿಳಿದ ತಕ್ಷಣ ಅವರು ಮನೆಗೆ ತಲುಪಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅಮಾಯಕರು ಸುಟ್ಟು ಕರಕಲಾಗಿದ್ದರು. ಈ ಘಟನೆಯ ನಂತರ ಎಲ್ಲರೂ ಶಾಕ್ ಆಗಿದ್ದಾರೆ. ಬೆಂಕಿಗೆ ಆಹುತಿಯಾದ ಅಮಾಯಕ ಹೆಣ್ಣುಮಕ್ಕಳ ತಪ್ಪೇನಿದೆ, ಇವರನ್ನು ಸಾಯಿಸುವ ಅಗತ್ಯವೇನಿತ್ತು ಎಂದು ಸುತ್ತಮುತ್ತಲಿನವರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಅಪಘಾತದಲ್ಲಿ ಸಾವನ್ನಪ್ಪಿದ ಅಮಾಯಕ ಬಾಲಕಿಯರು ನಾಲ್ಕು ಮತ್ತು ಆರು ವರ್ಷ ವಯಸ್ಸಿನವರು. ನಿದ್ರೆಯಲ್ಲೇ ಈ ಮಕ್ಕಳು ಮೃತಪಟ್ಟಿದ್ದಾರೆ.