Asianet Suvarna News Asianet Suvarna News

Suicide :LIC ಏಜೆಂಟನ ಸಂಗ ಬಿಡದ ಪತ್ನಿ, ಪುತ್ರನೊಂದಿಗೆ ನಾಗಮಂಗಲ ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ

* ಮಗು ಜತೆ ಕೆರೆಗೆ ಹಾರಿ ತಂದೆ ಆತ್ಮಹತ್ಯೆ
* ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತ ಪತಿರಾಯ
*  ಮಗುವಿನೊಂದಿಗೆ ಕೆರೆಗೆ ಹಾರಿದ
* ಇನ್ನೊಂದು ಕಡೆ ಪತ್ನಿಯಿಂದ ಹೈಡ್ರಾಮಾ

Wife Extra marital affair with other man husband commit suicide Nagamangala Mandya mah
Author
Bengaluru, First Published Jan 15, 2022, 4:11 AM IST

ನಾಗಮಂಗಲ(ಜ. 15)  ಪತ್ನಿಯ (Wife) ಅನೈತಿಕ( Extra marital affair)  ಸಂಬಂಧದಿಂದ ಬೇಸತ್ತು ಮಗನ (Son) ಜತೆ ಅಪ್ಪ (Father) ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಗಮಂಗಲ ತಾಲೂಕಿನ ಪಿಟ್ಟೆಕೊಪ್ಪಲು ಸಮೀಪದ ಚನ್ನಾಪುರ ಕೆರೆಯಲ್ಲಿ ಗುರುವಾರ ಸಂಭವಿಸಿದೆ. ಗಂಗಾಧರಗೌಡ ತನ್ನ 6 ವರ್ಷದ ಪುತ್ರ ಜಸ್ವಿತ್‌ನೊಂದಿಗೆ ಆತ್ಮಹತ್ಯೆ ಮಾಡಿಕೊಂಡವರು. ಸಾವಿಗೆ ಪತ್ನಿ ಸಿಂಧು ಹಾಗೂ ಎಲ್‌ಐಸಿ ಏಜೆಂಟ್‌ ಜಿ.ಸಿ. ನಂಜುಂಡೇಗೌಡ ಕಾರಣ ಎಂದು ಬರೆದಿರುವ ಡೆತ್‌ನೋಟ್‌ ಘಟನಾ ಸ್ಥಳದಲ್ಲಿ ಪತ್ತೆಯಾಗಿದೆ. ಪೊಲೀಸರು ಬರುತ್ತಿದ್ದಂತೆ ಪತ್ನಿ ಸಿಂಧು ಕೂಡ ಕೆರೆಗೆ ಹಾರಿದಳು. ಆಕೆಯನ್ನು ರಕ್ಷಿಸಲಾಯಿತು.

ಶುಕ್ರವಾರ ಬೆಳಗ್ಗೆ ಕೆರೆಯ ಹತ್ತಿರ ಬಿಂಡಿಗನವಿಲೆ ಠಾಣೆಯ ಪೊಲೀಸರು ಬರುತ್ತಿದ್ದಂತೆ ಹೈಡ್ರಾಮ ನಡೆಸಿದ ಪತ್ನಿ ಸಿಂಧು ಕೆರೆಗೆ ಹಾರಿದ್ದಾಳೆ. ಈ ವೇಳೆ ಅಲ್ಲೇ ಇದ್ದ ಸ್ಥಳೀಯರು ಸಿಂಧುಳನ್ನು ರಕ್ಷಿಸಿದರು. ಈ ಸಂಬಂಧ ಬಿಂಡಿಗನವಿಲೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಂಧು ಹಾಗೂ ಗರುಡಾಪುರ ಗ್ರಾಮದ ಎಲ್‌ಐಸಿ ಏಜೆಂಟ್‌ ಜಿ.ಸಿ.ನಂಜುಂಡೇಗೌಡನ ನಡುವೆ ಅನೈತಿಕ ಸಂಬಂಧವಿತ್ತು. ಈ ವಿಚಾರವಾಗಿ ಎಷ್ಟೇ ತಿಳುವಳಿಕೆ ಹೇಳಿದರೂ ತಮ್ಮ ಚಾಳಿ ಬಿಟ್ಟಿರಲಿಲ್ಲ. ಇದರಿಂದ ಬೇಸತ್ತು ತಮ್ಮ ಗಂಗಾಧರಗೌಡ ಮಗನೊಂದಿಗೆ ಜೀವ ಕಳೆದುಕೊಂಡಿದ್ದಾರೆಂದು ಸೋದರ ಬಿ.ಪಿ.ಮಂಜುನಾಥ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಬಟ್ಟೆ ಬಿಚ್ಚಿಸಿ ವಿಕೃತಿ:  ಶ್ರೀರಂಗಪಟ್ಟಣ(ಜ.07): ಶಾಲೆಗೆ ಮೊಬೈಲ್‌ ತಂದಿದ್ದ ವಿದ್ಯಾರ್ಥಿನಿಯರ ಪೈಕಿ ಓರ್ವ ವಿದ್ಯಾರ್ಥಿನಿಯ ಬಟ್ಟೆಬಿಚ್ಚಿಸಿ ಕೊಠಡಿಯೊಂದರಲ್ಲಿ ಕೂಡಿ ಹಾಕಿ ಮುಖ್ಯಶಿಕ್ಷಕಿಯೊಬ್ಬರು ಅಮಾನವೀಯವಾಗಿ ಶಿಕ್ಷಿಸಿರುವ ಘಟನೆ ತಾಲೂಕಿನ ಗಣಂಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

Bengaluru Crime: ಕುಖ್ಯಾತ ರೌಡಿಯೊಂದಿಗೆ ಕುಚ್ ಕುಚ್.. ಗಂಡನಿಂದಲೇ ಬೀದಿ ಹೆಣವಾದ 400 ಕೋಟಿ ಒಡತಿ !

ವಾರದ ಹಿಂದೆಯೇ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಯರು ಶಾಲೆಗೆ ಮೊಬೈಲ್‌ ತೆಗೆದುಕೊಂಡು ಬಂದಿದ್ದ ವಿಚಾರ ತಿಳಿದ ಮುಖ್ಯಶಿಕ್ಷಕಿ ಕೊಠಡಿಗೆ ಕರೆಸಿ, ಯಾರಾರ‍ಯರು ಮೊಬೈಲ್‌ ತಂದಿದ್ದೀರೋ ಎಲ್ಲರೂ ಕೊಟ್ಟುಬಿಡಿ. ಇಲ್ಲದಿದ್ದರೆ ನಿಮ್ಮಗಳ ಬಟ್ಟೆಬಿಚ್ಚಿಸುತ್ತೇನೆ. ಹುಡುಗರಿಂದ ನಿಮ್ಮನ್ನು ಚೆಕ್‌ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.

ಕೆಲ ವಿದ್ಯಾರ್ಥಿನಿಯರ ಬಳಿ ಮೊಬೈಲ್‌ ಇರುವುದು ತಿಳಿಯುತ್ತಿದ್ದಂತೆ, ಓರ್ವ ವಿದ್ಯಾರ್ಥಿನಿಯ ಬಟ್ಟೆಕಳಚಿ ಹಲ್ಲೆ ನಡೆಸಿದ್ದಾರೆ. ಕೆಲವರ ಸ್ವೆಟರ್‌ ಬಿಚ್ಚಿಸಿದರೆ, ಮತ್ತೋರ್ವಳ ಸ್ಕರ್ಟ್‌ ಹರಿದಿದ್ದಾರೆ. ನಗ್ನವಾದ ಹುಡುಗಿಯನ್ನು ನೆಲದ ಮೇಲೆ ಕೂರಿಸಿ ಚಳಿಯಾಗಲೆಂದು ಜೋರಾಗಿ ಫ್ಯಾನ್‌ ಹಾಕಿಸಿದ್ದಾರೆ. ಊಟ, ನೀರು ಕೊಡದೆ ಕೊಠಡಿಯಲ್ಲೇ ಇರಿಸಿದ್ದರು. ಸಂಜೆ ಮನೆಗೆ ಹೋದ ವಿದ್ಯಾರ್ಥಿನಿ ಮನೆಗೆ ಹೋದ ಬಳಿಕ ಪೋಷಕರಿಗೆ ವಿಷಯ ತಿಳಿದು ಮುಖ್ಯ ಶಿಕ್ಷಕಿ ಸ್ನೇಹಲತಾ ವಿರುದ್ಧ ಬಿಇಒಗೆ ದೂರು ನೀಡಿದ್ದಾರೆ. ಬಿಇಒ ವಿದ್ಯಾರ್ಥಿನಿಯರ ವಿಚಾರಣೆ ನಡೆಸಿ ಡಿಡಿಪಿಐಗೆ ವರದಿ ಸಲ್ಲಿಸಿದ್ದಾರೆ. ವರದಿ ಆಧರಿಸಿ ಮುಖ್ಯ ಶಿಕ್ಷಕಿ ಅಮಾನತಿಗೆ ಡಿಡಿಪಿಐ ಜವರೇಗೌಡ ಆಯುಕ್ತರಿಗೆ ಶಿಫಾರಸು ಮಾಡಿದ್ದಾರೆ. 

ಅರ್ಚನಾ ರೆಡ್ಡಿ ಪ್ರಕರಣ:  ಅರ್ಚನಾ ರೆಡ್ಡಿ.. ಮೂಲತಃ ಆನೇಕಲ್ ನ (Anekal) ಜಿಗಣಿಯ ನಿವಾಸಿ..  ಈಕೆಯ ಫೋಟೋಸ್ ಗಳನ್ನು ನೋಡಿದ್ರೆನೆ ಗೊತ್ತಾಗತ್ತೆ, ಈಕೆ ಅದೆಷ್ಟು ಶೋಕಿ ಮಾಡೊ ಜೀವನ ಮಾಡ್ತಾಯಿದ್ಲು ಅಂತ..  ಫೈವ್ ಸ್ಟಾರ್ ಹೋಟೆಲ್, ಇನೋವಾ ಕಾರು, ಹೀಗೆ ಹತ್ತು ಹಲವಾರು ಶೋಕಿಗಳು ಮಾಡಿಕೊಂಡು ಇದ್ದವಳು  ಅರ್ಚನಾ ರೆಡ್ಡಿ.. ಆದರೆನ ಈಕೆಯ ಎಲ್ಲಾ ಆಟಕ್ಕೆ ಆಕೆಯ ಎರಡನೇ ಗಂಡ ಅಂತ ಕರೆಸಿಕೊಳ್ಳವವನೇ ಫುಲ್ ಸ್ಟಾಪ್ ಹಾಕಿದ್ದ. ಅರ್ಚನಾ ಕೊಲೆ ಆರೋಪದ ಮೇಲಕೆ ಆಕೆಯ ಎರಡನೇ ಗಂಡ ಮತ್ತು ಮಗಳನ್ನು ವಶಕ್ಕೆ ಪಡೆಯಲಾಗಿತ್ತು. 

Follow Us:
Download App:
  • android
  • ios