Asianet Suvarna News Asianet Suvarna News

Bengaluru Crime: ಕುಖ್ಯಾತ ರೌಡಿಯೊಂದಿಗೆ ಕುಚ್ ಕುಚ್.. ಗಂಡನಿಂದಲೇ ಬೀದಿ ಹೆಣವಾದ 400 ಕೋಟಿ ಒಡತಿ !

* ರಸ್ತೆಯಲ್ಲೇ ಪತಿಯಿಂದ ಮಹಿಳೆಯ ಭೀಕರ ಹತ್ಯೆ.

* ಇನ್ನೋವಾ ಕಾರಿನಲ್ಲಿ ಬಂದವರನ್ನು ಅಡ್ಡಹಾಕಿದ ಕಿರಾತಕರು.

* ಕಾರಿನಿಂದ ಕೆಳಗಿಳಿದು ಭೀಕರವಾಗಿ ಕೊಚ್ಚಿ ಕೊಲೆ

* ಕುಖ್ಯಾತ ರೌಡಿಯೊಂದಿಗೆ ಮಹಿಳೆಗೆ ಅಕ್ರಮ ಸಂಬಂಧ

Man kills wife Over illicit relationship Anekal Bengaluru mah
Author
Bengaluru, First Published Dec 28, 2021, 7:29 PM IST
  • Facebook
  • Twitter
  • Whatsapp

ಆನೆಕಲ್(ಡಿ. 28)  ಆಕೆಗೆ ಇನ್ನು ಹೇಳಿಕೊಳ್ಳುವಷ್ಟು ಏನು ವಯಸ್ಸಾಗಿರಲಿಲ್ಲ. ನೋಡುವುದಕ್ಕೂ ಸುಂದರವಾಗಿದ್ದಳು.  ಗಂಡನ ಜೊತೆ ಬಾಳೋದಕ್ಕೆ ಆಗದೆ ಆತನಿಂದ ದೂರವಾಗಿದ್ಲು.. ಮತ್ತೆ ಎರಡನೇ ಮದುವೆಯಾದಳು. ಎರಡನೆ ಗಂಡನಿಂದಲೇ ಆಕೆಗೆ ಸಾವು ಅಂತ  ನಿಶ್ಚಯವಾಗಿತ್ತು ಅನಿಸುತ್ತದೆ. ರಾಯಲ್ ಆಗಿ‌ ಇದ್ದ ಆಕೆ ಇದೀಗ ಬೀದಿ ಹೆಣವಾಗಿದ್ದಾಳೆ.. ಹಾಗಾದ್ರೆ ಆಕೆಯ ಸಾವಿಗೆ ಏನು ಕಾರಣ..! ಆಕೆಯನ್ನು ಗಂಡನೇ ಯಾಕೆ ಕೊಂದ.. ಇದೆಲ್ಲದರ ಡೀಟೇಲ್ಸ್ ಇಲ್ಲಿದೆ ನೋಡಿ.

ಇವರ ಹೆಸರು ಅರ್ಚನಾ ರೆಡ್ಡಿ.. ಮೂಲತಃ ಆನೇಕಲ್ ನ (Anekal) ಜಿಗಣಿಯ ನಿವಾಸಿ..  ಈಕೆಯ ಫೋಟೋಸ್ ಗಳನ್ನು ನೋಡಿದ್ರೆನೆ ಗೊತ್ತಾಗತ್ತೆ, ಈಕೆ ಅದೆಷ್ಟು ಶೋಕಿ ಮಾಡೊ ಜೀವನ ಮಾಡ್ತಾಯಿದ್ಲು ಅಂತ..  ಫೈವ್ ಸ್ಟಾರ್ ಹೋಟೆಲ್, ಇನೋವಾ ಕಾರು, ಹೀಗೆ ಹತ್ತು ಹಲವಾರು ಶೋಕಿಗಳು ಮಾಡಿಕೊಂಡು ಇದ್ದವಳು  ಅರ್ಚನಾ ರೆಡ್ಡಿ.. ಆದರೆನ ಈಕೆಯ ಎಲ್ಲಾ ಆಟಕ್ಕೆ ಆಕೆಯ ಎರಡನೇ ಗಂಡ ಅಂತ ಕರೆಸಿಕೊಳ್ಳವವನೇ ಫುಲ್ ಸ್ಟಾಪ್ ಹಾಕಿದ್ದಾನೆ..

ಅರ್ಚನಾ ರೆಡ್ಡಿಯ ಎರಡನೇ ಪತಿರಾಯ ಅಂತಾನೆ ಅನ್ನಿಕೊಂಡಿರುವ ನವೀನ್, ಈಕೆಯನ್ನು ಕೊಚ್ಚಿ ಕೊಲೆ (Murder) ಮಾಡಿದ್ದಾನೆ. ಈ ಅರ್ಚನಾ ರೆಡ್ಡಿ ಗೆ ಈ ಮೊದಲು ಒಂದು ಮದುವೆಯಾಗಿತ್ತು, ಒಬ್ಬ ಮಗ ಮತ್ತು ಮಗಳು ಕೂಡ‌ ಇದ್ದರು.. ವೈಯಕ್ತಿಕ ಕಾರಣಗಳಿಂದ ಮೊದಲನೆ ಮದುವೆಯಾಗಿದ್ದ ಗಂಡನಿಗೆ ಡಿವೋರ್ಸ್ ಕೊಟ್ಟಿದ್ದಳು.  ಮತ್ತೆ ವೈವಾಹಿಕ ಜೀವನ ಬೇಕು ಅಂತ ಹೇಳಿ ಈ ನವೀನ್ ನನ್ನು (Marriage) ಮದುವೆಯಾಗಿದ್ದಳು .. ಬೆಳ್ಳಂದೂರಿನ (Bengaluru) ಫ್ಲಾಟ್‌ ಒಂದರಲ್ಲಿ ಇಬ್ಬರು ಸಹ ಜೊತೆಗೆ ಇದ್ದರು. ಮದುವೆಯಾದ ದಿನಗಳಲ್ಲಿ ಎಲ್ಲವೂ ಸಹ‌ ಚೆನ್ನಾಗಿಯೇ ಇತ್ತು. ಆದರೆ ಯಾವಾಗ ಈಕೆಯ ಮಗಳನ್ನೇ ನವೀನ್ ಕರೆದುಕೊಂಡು ಎಸ್ಕೇಪ್ ಆಗುತ್ತಾನೋ ಇವರಿಬ್ಬರ ಮಧ್ಯೆ ವೈಮನಸ್ಸು ಉಂಟಾಗಿದೆ.. ಪ್ರತಿದಿನ ಜಗಳವಾಗಿದೆ

Crime Round Up 2021 : ಅಪರಾಧ ಜಗತ್ತನ್ನೇ ಬೆಚ್ಚಿ ಬೀಳಿಸಿದ ಪ್ರಕರಣಗಳು.. ಸಿಡಿಯಿಂದ ಕಾಯಿನ್‌ವರೆಗೆ!

 ಜಗಳಕ್ಕೆ ಕಾರಣ ಹುಡುಕುತ್ತಾ ಹೊರಟಾಗ ಇಲ್ಲಿ ಅಕ್ರಮ ಸಂಬಂಧದ (Illicit Relationship) ವಾಸನೆ ಹರಿದಾಡುತ್ತದೆ. ಅರ್ಚನಾ ರೆಡ್ಡಿ ಎರಡನೇ ಪತಿ ನವೀನ್  ಈಕೆಯ ಮಗಳನ್ನೇ ಪುಸಲಾಯಿಸಿ ಕೆರೆದೊಯ್ದಿದ್ದ ಎನ್ನಲಾಗಿದ್ದು ಮತ್ತು ಆಸ್ತಿ‌ ವಿಚಾರ ಕೂಡ ಇಲ್ಲಿ ಕೇಳಿಬಂದಿದೆ.. ಇವರಿಬ್ಬರ ಮದ್ಯೆ ಆಸ್ತಿ ವಿಚಾರಕ್ಕೆ‌ ಸಹ ಆಗಾಗ ಜಗಳವಾಗಿದೆ. ಈ ಅರ್ಚನಾ ರೆಡ್ಡಿಗೆ ಎರಡು ಮದುವೆಯಾದ್ರು ಸಹ ಕುಖ್ಯಾತ ರೌಡಿಯೊಬ್ಬನ ಜೊತೆ ಅಕ್ರಮ  ಸಂಭಂದವನ್ನು ಹೊಂದಿದ್ದಳು ಅಂತ ಹೇಳಲಾಗುತ್ತಿದೆ. ಇದೇ ರೌಡಿಯಿಂದ ನವೀನ್ ಗೆ ಬೆದರಿಕೆ ಕೂಡ ಬಂದಿತ್ತು,ಇದೇ ವಿಚಾರಕ್ಕೆ ನವೀನ್ ನಿನ್ನೆ ರಾತ್ರಿ ಹೊಸರೋಡಿನ ಮೂಲಕ ಜಿಗಣಿ ಇಂದ ಬೆಳ್ಳಂದೂರಿಗೆ ಇನೋವಾ ಕಾರಿನಲ್ಲಿ ಹೋಗುತ್ತಿದ್ದ ಅರ್ಚನಾ ಹಾಗೂ ಪುತ್ರ ತ್ರಿವೇದ್ ಸೇರಿ 5 ಜನ ಇದ್ದ ಕಾರನ್ನು ಅಡ್ಡಗಗಟ್ಟಲಾಗಿದೆ.  ಹಾಕಿ ಸ್ಟಿಕ್ ನಿಂದ ನಡುರಸ್ತೆಯಲ್ಲೇ ಕೊಚ್ಚಿ ಕೊಲೆ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

ನವೀನ್ ಗು ಮತ್ತು ಅರ್ಚನಾ ರೆಡ್ಡಿಗು ಪದೇ ಪದೇ ಜಗಳ ಆಗಿತ್ತು ಎನ್ನುವ ಮಾಹಿತಿ ಇದ್ದು, 400 ಕೋಟಿ ಒಡತಿ ಎನ್ನಲಾಗಿದ್ದು, ಜಿಮ್ ಟ್ರೈನರ್ ನವೀನ್ ಹೀಗಾಗಿ ಪ್ರತಿದಿನ ತನ್ನ  ಮನಸ್ಸಿನಲ್ಲಿಯೇ  ಮಚ್ಚು ಮಸೀತಿದ್ದ ಎನ್ನಲಾಗಿದೆ. ಜಿಗಣಿಯಲ್ಲಿ ಚುನಾವಣೆ ಇದ್ದ ಕಾರಣ ಮತದಾನ ಮಾಡಲು ಬಂದಿದ್ದಾಳೆ, ಆದ್ರೆ ಜಿಗಣಿಯ ವಾರ್ಡ್‌ನಂ 18 ರಲ್ಲಿ ಆಕೆಯ ಹೆಸರು ಸಿಗದ‌ ಕಾರಣ ಮತದಾನ ಮಾಡದೇ ಸಮ್ಮನಾಗಿದ್ಲು.. ಕಳೆದ ಒಂದು ವರೆ ತಿಂಗಳ ಹಿಂದೆ ಈಕೆಯ ಜಿಗಣಿಯಲ್ಲಿದ್ದ ಈಕೆಯ ತಾಯಿ ಸಹ ಮನೆ ಮೇಲಿನಿಂದ ಕೆಳಕ್ಕೆ ಬಿದ್ದು ಸಾವನಪ್ಪಿದ್ದರು.. ನಿನ್ನೆಯು ಸಹ ಮಕ್ಕಳ ಜೊತೆ ಆನೇಕಲ್ ಭಾಗದಲ್ಲಿ ಸುತ್ತಾಡಿ ಆನಂತರ ರಾತ್ರಿ 11 ರ ಸುಮಾರಿಗೆ ಹೊರಟಿದ್ದಾಳೆ.. ಆಗ ಸ್ಕೇಚ್ ಹಾಕೋಂಡು ಕೂತಿದ್ದ ನವೀನಾ ಹಾಗೂ ತಂಡ ಅರ್ಚನಾಳ ಕಾರನ್ನೆ ಫಾಲೋ ಮಾಡಿ, ಹೊಸೂರು ರಸ್ತೆಯ ಬಳಿ ಅಂದ್ರೆ ಹೊಸ್ ರೊಡ್ ಜಂಕ್ಷನ್ ಬಳಿ ಅರ್ಚನಾಳ ಕಾರನ್ನು ಅಡ್ಡಗಟ್ಟಿ  ನವೀನ್ ಮತ್ತು ಆತನ ಸ್ನೇಹಿತ ಸಂತೋಷ ಇಬ್ಬರು ಸಹ ಲಾಂಗ್ ನಿಂದ ಮನಸ್ಸೋ ಇಚ್ಛೇ ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ರಾತ್ರಿಯಾಗಿದ್ದ ಕಾರಣ ಅಷ್ಟಾಗಿ ಜನದಟ್ಟಣೆ ಇರಲಿಲ್ಲ, ಹೀಗಿದ್ರು ಸಹ ವಾಹನ‌ಸವಾರರು ಗಲಾಟೆಯನ್ನು ನೋಡಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಸಹ‌ ಸ್ಥಳಕ್ಕೆ ಬಂದು ನೋಡುವಷ್ಟರಲ್ಲಿ ಅರ್ಚನಾಳ ಪ್ರಾಣ ಪಕ್ಷಿ ಹಾರಿಹೋಗಿತ್ತು.. ತನ್ನ ಕಣ್ಣ ಮುಂದೆಯೇ ತನ್ನ ತಾಯಿಯ ಭೀಕರ ಕೊಲೆಯನ್ನು‌  ನೋಡಿದ ಅರ್ಚನಾಳ ಮಗ ಮೌನಕ್ಕೆ ಶರಣಾಗಿದ್ದ. ಮಗನ ಹೇಳಿಕೆಯ ಮೇರೆಗೆ ಇದೀಗ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದು ನವೀನ್ ಮತ್ತು ಸಂತೋಷ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Follow Us:
Download App:
  • android
  • ios