ಸಂತ್ರಸ್ತೆ ರೇಣು ಖಾತೂನ್ ಅವರಿಗೆ  ಪಶ್ಚಿಮ ಬಂಗಾಳದ ಕೇತುಗ್ರಾಮ್ ಗ್ರಾಮದಲ್ಲಿ ಇತ್ತೀಚೆಗೆ ಆಸ್ಪತ್ರೆಯಲ್ಲಿ ನರ್ಸ್ ಕೆಲಸ ಸಿಕ್ಕಿತ್ತು. 

ಪಶ್ಚಿಮ ಬಂಗಾಳ (ಜೂ. 06): ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮಾನ್ ಜಿಲ್ಲೆಯ ವ್ಯಕ್ತಿಯೊಬ್ಬ ಪತ್ನಿ ತನ್ನನ್ನು ಬಿಟ್ಟು ಹೋಗುತ್ತಾಳೆ ಎಂಬ ಭಯದಿಂದ ಆಕೆಯ ಕೈಯನ್ನು ಕತ್ತರಿಸಿದ್ದಾನೆ. ಪತ್ನಿಗೆ ನರ್ಸ್ ಕೆಲಸ ಸಿಕ್ಕಿದ ನಂತರ, ಪತಿ ಯಾವಾಗಲೂ ಅವಳ ಚಾರಿತ್ರ್ಯದ ಬಗ್ಗೆ ಅನುಮಾನಿಸುತ್ತಿದ್ದು, ಅವಳು ಅವನನ್ನು ಬೇರೆ ಪುರುಷನಿಗಾಗಿ ಬಿಟ್ಟು ಹೋಗುತ್ತಾಳೆ ಎಂದು ಹೆದರುತ್ತಿದ್ದ ಎನ್ನಲಾಗಿದೆ. ಸಂತ್ರಸ್ತೆ ರೇಣು ಖಾತೂನ್ ಅವರಿಗೆ ಪಶ್ಚಿಮ ಬಂಗಾಳದ ಕೇತುಗ್ರಾಮ್ ಗ್ರಾಮದಲ್ಲಿ ಇತ್ತೀಚೆಗೆ ಆಸ್ಪತ್ರೆಯಲ್ಲಿ ನರ್ಸ್ ಕೆಲಸ ಸಿಕ್ಕಿತ್ತು.

ಖಾತೂನ್ ಕೆಲಸಕ್ಕೆ ಹೋಗಲು ಪ್ರಾರಂಭಿಸಿದ ತಕ್ಷಣ, ಅವಳ ಪತಿ ಮೊಹಮ್ಮದ್ ಶೇಖ್ ಅವಳ ಮೇಲೆ ಅನುಮಾನಗೊಂಡಿದ್ದಾನೆ. ಅವಳು ತನ್ನ ಕೆಲಸದ ಸ್ಥಳದಲ್ಲಿ ಪರಿಚಯವಾದ ಇನ್ನೊಬ್ಬ ಪುರುಷನ ಸಲುವಾಗಿ ತನ್ನನ್ನು ಬಿಟ್ಟು ಹೋಗುತ್ತಾಳೆ ಎಂದು ಅವನು ನಂಬಿದ್ದ ಎನ್ನಲಾಗಿದೆ.

ಇದನ್ನೂ ಓದಿ:ಮಧ್ಯಪ್ರದೇಶ: 2 ತಿಂಗಳ ಮಗು ಕೊಂದ ಅತ್ಯಾಚಾರ ಸಂತ್ರಸ್ತೆ

ಹೀಗಾಗಿಯೇ ತನ್ನ ಪತ್ನಿಯ ಕೈಯನ್ನು ಮೊಹಮ್ಮದ್ ಶೇಖ್ ಕತ್ತರಿಸಿದ್ದ. ತೋಳುಗಳನ್ನು ಒತ್ತಲು ದಿಂಬನ್ನು ಬಳಸಿ ನಂತರ ಪತಿ ತನ್ನ ಹೆಂಡತಿಯ ಕೈಯನ್ನು ಕತ್ತರಿಸಿದ್ದಾನೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. 

ಪತ್ನಿ ಕೈ ಕತ್ತರಿಸಿದ ಪತಿ: ಪತ್ನಿ ಮೇಲೆ ಅನುಮಾನ ಮೂಡಿದ ಬಳಿಕ ತನ್ನ ಸ್ನೇಹಿತರೊಂದಿಗೆ ಸಂಚು ರೂಪಿಸಿ ರಾತ್ರಿ ಮಲಗಿದ್ದಾಗ ಖಾತೂನ್‌ನ ಬಲಗೈಯನ್ನು ಹರಿತವಾದ ಆಯುಧದಿಂದ ಕತ್ತರಿಸಿದ್ದಾನೆ. ಖಾತೂನ್ ಅವರನ್ನು ಮೊದಲು ಬರ್ಧಮಾನ್‌ನಲ್ಲಿರುವ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು, ಆದರೆ ಆಕೆಗೆ ಗಂಭೀರವಾದ ಗಾಯಗಳಾದ ಕಾರಣ ದುರ್ಗಾಪುರದ ಖಾಸಗಿ ನರ್ಸಿಂಗ್ ಹೋಮ್‌ಗೆ ವರ್ಗಾಯಿಸಲಾಯಿತು. 

ಘಟನೆಯ ಬಳಿಕ ಆರೋಪಿ ತನ್ನ ಸ್ನೇಹಿತರ ಜೊತೆ ಸೇರಿ ತಲೆಮರೆಸಿಕೊಂಡಿದ್ದು, ಆರೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಪ್ರಯತ್ನ ನಡೆಯುತ್ತಿದೆ. ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. 

ಇದನ್ನೂ ಓದಿ:ತನ್ನ ಮಾಜಿ ಪ್ರೇಮಿಯ ಪ್ರೀತಿಸಿದ ಯುವಕನ ಮೇಲೆ ಹಲ್ಲೆ