ಇಂದೋರ್: ಅತ್ಯಾಚಾರ ಸಂತ್ರಸ್ತೆಯ ಕುಟುಂಬಸ್ಥರು ಆಕೆಯನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದರು; ಆಕೆ ಹತಾಶಳಾಗಿ ತನ್ನ ಮಗುವನ್ನು ಕೊಂದಳು ಎಂದು ಪೊಲೀಸರು ತಿಳಿಸಿದ್ದಾರೆ

ಇಂದೋರ್‌ (ಜೂ. 06): ಮಧ್ಯಪ್ರದೇಶದ ಇಂದೋರ್‌ನಲ್ಲಿ ಅತ್ಯಾಚಾರ ಸಂತ್ತಸ್ತೆಯೊಬ್ಬರು ಬಡತನದ ಕಾರಣ ಮಗುವನ್ನು ನೋಡಿಕೊಳ್ಳಲು ವಿಫಲವಾದ ಕಾರಣ ತನ್ನ ಎರಡು ತಿಂಗಳ ಮಗುವನ್ನು ಕೊಂದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಬಂಧ
ಪ್ರಕರಣ ದಾಖಲಾಗಿದ್ದು, ಅತ್ಯಾಚಾರ ಸಂತ್ರಸ್ತೆಯಾಗಿರುವ ಆರೋಪಿಯನ್ನು ಬಂಧಿಸಲಾಗಿದೆ. ಬಾಲಕಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ ಎಂದು ಇಂದೋರ್‌ನ ಹೆಚ್ಚುವರಿ ಡಿಸಿಪಿ ರಾಜೇಶ್ ವ್ಯಾಸ್ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

“ಕೆಲವು ದಿನಗಳ ಹಿಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದು, ಬಳಿಕ ಆಕೆ ಮಗುವಿಗೆ ಜನ್ಮ ನೀಡಿದ್ದು, ಆಕೆಯ ಕುಟುಂಬಸ್ಥರು ಆಕೆಯನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದರು ಇದರಿಂದ ಹತಾಶಳಾದ ಆಕೆ ತನ್ನ ಎರಡು ತಿಂಗಳ ಮಗುವನ್ನು ಕೊಂದು ಹಾಕಿದ್ದಾಳೆ ಎಂದು ತಪ್ಪೊಪ್ಪಿಕೊಂಡಿದ್ದಾಳೆ." ಎಂದು ಪೊಲೀಸ್‌ ತಿಳಿಸಿದ್ದಾರೆ.

ಶಿಶುವಿನ ಮರಣೋತ್ತರ ಪರೀಕ್ಷೆ ನಂತರ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. "ಮೃತ ಮಗುವಿನ ಮರಣೋತ್ತರ ಪರೀಕ್ಷೆಯನ್ನು ಮಾಡಲಾಗಿದೆ. ಇದು ಕೊಲೆಯ ಕೃತ್ಯವನ್ನು ಬಹಿರಂಗಪಡಿಸಿದೆ. ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಹುಡುಗಿಯನ್ನು ಬಂಧಿಸಲಾಗಿದೆ" ಎಂದು ವ್ಯಾಸ್ ಹೇಳಿದ್ದಾರೆ..

ಇದನ್ನೂ ಓದಿ:ತನ್ನ ಮಾಜಿ ಪ್ರೇಮಿಯ ಪ್ರೀತಿಸಿದ ಯುವಕನ ಮೇಲೆ ಹಲ್ಲೆ

ಇದನ್ನೂ ಓದಿಗೆಳೆಯರಿಲ್ಲ ಮೊಬೈಲೇ ಎಲ್ಲಾ... ನೇಣಿಗೆ ಶರಣಾದ ಪಿಯು ವಿದ್ಯಾರ್ಥಿನಿ