Asianet Suvarna News Asianet Suvarna News

ವಿಜಯಪುರ ಲೈವ್ ಮರ್ಡರ್: ಎಂಗೇಜ್ಮೆಂಟ್ ಆದವಳೊಂದಿಗೆ ಅನೈತಿಕ ಸಂಬಂಧಕ್ಕಾಗಿ ಬಿತ್ತು ಹೆಣ

ಎಂಗೇಜ್ಮೆಂಟ್ ಆಗಿರುವ ಹುಡಿಗಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡವನನ್ನು ಮದುವೆ ಮಂಟಪಕ್ಕೆ ಕರೆದು ಲೈವ್ ಆಗಿ ಮರ್ಡರ್ ಮಾಡಿದ ವಿಜಯಪುರ ಯುವಕ.

Vijayapura Live Murder for an immoral relationship with an engaged young woman sat
Author
First Published Dec 25, 2023, 5:01 PM IST

ವಿಜಯಪುರ (ಡಿ.25): ಕರ್ನಾಟಕದ ವಿಜಯಪುರದ ಹುಡುಗ ಪುಣೆ ಮೂಲದ ಹುಡುಗಿಯನ್ನು ನೋಡಿ ಮದುವೆ ಆಗುವುದಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದನು. ಆದರೆ, ಈ ಹುಡುಗಿಯೊಂದಿಗೆ ಮತ್ತೊಬ್ಬ ಯುವಕ ಅಕ್ರಮ ಸಂಬಂಧ ಹೊಂದಿದ್ದನು. ನೀನು ಆ ಹುಡುಗಿಯನ್ನು ಬಿಟ್ಟುಬಿಡು ಎಂದು ಎಷ್ಟೇ ಹೇಳಿದರೂ ಕೇಳದ ಹಿನ್ನೆಲೆಯಲ್ಲಿ, ಆತನನ್ನು ವಿಜಯಪುರಕ್ಕೆ ಮದುವೆಗೆ ಕರೆಸಿಕೊಂಡು ಕಲ್ಯಾಣ ಮಂಟದ ಧಾರಾ ಮಂಟಪದಲ್ಲಿ ಚಾಕು ಇರಿದು ಬರ್ಬರವಾಗಿ ಲೈವ್ ಮರ್ಡರ್ ಮಾಡಿರುವ ದುರ್ಘಟನೆ ನಡೆದಿದೆ.

ಮಹಾರಾಷ್ಟ್ರದ ಪುಣೆಯಿಂದ ವಿಜಯಪುರಕ್ಕೆ ಮದುವೆಗೆ ಬಂದಿದ್ದ ಅಯಾನ್ ಶೇಖ್ ಹತ್ಯೆಯಾದ ಯುವಕ ಆಗಿದ್ದಾನೆ. ಈತನನ್ನು ಕೊಲೆ ಮಾಡಿದ ಆರೋಪಿ ವಿಜಯಪುರದ ಚಪ್ಪಬಂದ್ ಕಾಲೋನಿಯ ಯುವಕ ಹುಸೇನ್‌ ನಂದಿಹಾಳ ಆಗಿದ್ದಾನೆ. ಮದುವೆ ಮಂಟಪದಲ್ಲಿ ಎಲ್ಲರ ಮುಂದೆಯೇ ಅಟ್ಟಾಡಿಸಿಕೊಂಡು ಹೋಗಿ ಮಹಾರಾಷ್ಟ್ರದ ಆಯಾನ್‌ ಶೇಕ್‌ಗೆ ಮುಖ, ಹೊಟ್ಟೆ, ಎದೆ ಹಾಗೂ ದೇಹದ ವಿವಿಧ ಭಾಗಗಳಿಗೆ ಚಾಕು ಚುಚ್ಚಿ ಲೈವ್ ಆಗಿ ಮರ್ಡರ್ ಮಾಡಿದ್ದಾನೆ. ಇನ್ನು ಕೊಲೆ ಮಾಡಿದ ಆರೋಪಿಯನ್ನು ಘಟನೆ ನಡೆದ 6 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ.

ಬೈಕ್ ಡಿಕ್ಕಿಯಾಗಿ ಪಾದಾಚಾರಿ ಸಾವು, ಸ್ಥಳಕ್ಕೆ ಧಾವಿಸಿದ ಕುಟುಂಬಸ್ಥರು ಕಾರು ಅಪಘಾತದಲ್ಲಿ ನಿಧನ!

ಕರ್ನಾಟಕದ ಗಡಿ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಳ್ಳಾರಿ, ಕೋಲಾರ, ಬೆಂಗಳೂರು, ಚಾಮರಾಜನಗರ, ಮಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಜನರು ತಮ್ಮ ಪಕ್ಕದ ರಾಜ್ಯದಲ್ಲಿ ವಾಸವಿರುವ ಕುಟುಂಬಗಳೊಂದಿಗೆ ಗಡಿಯನ್ನು ಮೀರಿ ಸಂಬಂಧವನ್ನು ಬೆಳೆಸಿಕೊಂಡಿರುತ್ತಾರೆ. ಈಗಲೂ ಕರ್ನಾಟಕದ ಅನೇಕ ಹಳ್ಳಿಗಳ ಜನರು ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ, ತಮಿಳುನಾಡು ಹಾಗೂ ಕೇರಳ ಸೇರಿದಂತೆ ಅನೇಕ ರಾಜ್ಯಗಳ ಯುವಕ- ಯುವತಿಯರನ್ನು ಮದುವೆ ಆಗುವುದು ಸಾಮಾನ್ಯವಾಗಿದೆ. ಆದರೆ, ಅನೈತಿಕ ಸಂಬಂಧಕ್ಕಾಗಿ ಈಗ ಹೆಣವೂ ಬಿದ್ದಿದೆ.

ಮಹಾರಾಷ್ಟ್ರದ ಪುಣೆ ಮೂಲದ ಪೋಷಕರು ತಮ್ಮ ಮಗಳು ಬೇರೊಬ್ಬನೊಂದಿಗೆ ಸಂಬಂಧ ಹೊಂದಿರುವುದನ್ನು ಮುಚ್ಚಿಟ್ಟು ಕರ್ನಾಟಕ ವಿಜಯಪುರದ ಯುವಕನಿಗೆ ಮದುವೆ ಮಾಡಿಕೊಡಲು ಮುಂದಾಗಿದ್ದಾರೆ. ತರಾತುರಿಯಲ್ಲಿ ಮೊದಲು ಫೋಟೋ ಕಳಿಸಿ, ಹೆಣ್ಣು ನೋಡುವ ಶಾಸ್ತ್ರ ಮುಗಿಸಿ, ಎಂಗೇಜ್ಮೆಂಟ್ ಕೂಡ ಮಾಡಿದ್ದಾರೆ. ಆದರೆ, ತಮ್ಮ ಮಗಳು ಮಾತ್ರ ಅಕ್ರಮ ಸಂಬಂಧವನ್ನು ಮಾತ್ರ ಮುಂದುವರೆಸಿದ್ದಳು. ಇನ್ನು ಮದುವೆ ಆಗುತ್ತಿರುವ ಮಗಳಿಗೂ ಆಕೆಯೊಂದಿಗೆ ಸಂಬಂಧ ಹೊಂದಿದ್ದ ಯುವಕನಿಗೂ ಬುದ್ಧಿ ಹೇಳಿ ದೂ ಆಗುವಂತೆ ಹೇಳಿದ್ದಾರೆ. ಯಾರ ಮಾತನ್ನೂ ಕೇಳದ ಪ್ರೇಮಿಗಳು ತಮ್ಮ ಸಂಬಂಧವನ್ನು ಮುಂದುವರೆಸಿದ್ದಾರೆ.

ಪೊಲೀಸ್ ಠಾಣೆ ಮೆಟ್ಟಿಲೇರಿದ ಕ್ರಿಕೆಟಿಗ ಕೆ ಸಿ ಕಾರಿಯಪ್ಪ ಲವ್‌ಸ್ಟೋರಿ; ಮಾಜಿ ಪ್ರೇಯಸಿಯಿಂದ ಗಂಭೀರ ಆರೋಪ

ತಾನು ಮದುವೆ ಆಗುವ ಹುಡುಗಿಯ ಸಹವಾಸ ಬಿಡದ ಯುವಕನಿಗೆ ಮದುವೆ ಆಗುವ ಹುಡುಗನೂ ಕೂಡ ಬುದ್ಧಿ ಹೇಳಿದ್ದಾನೆ. ಆದರೂ, ಆತ ಮಾತ್ರ ಯಾರ ಮಾತನ್ನೂ ಕೇಳಿಲ್ಲ. ಇದರಿಂದ ಸಿಟ್ಟಿಗೆದ್ದ ವಿಜಯಪುರದ ಯುವಕ ತನ್ನ ಎಂಗೇಜ್ಮೆಂಟ್ ಅನ್ನು ಮುರಿದುಕೊಂಡಿದ್ದಾನೆ. ಇಷ್ಟಾದರೂ ತಮಗೆ ಒಳ್ಳೆಯದೇ ಆಗಿದೆ ಎಂದು ಪುಣೆಯಲ್ಲಿ ಮದುವೆ ಮುರಿದುಕೊಂಡ ಯುವತಿ ಹಾಗೂ ಆಕೆಯ ಪ್ರೇಯಸಿ ಸಂತಸದಿಂದ ತಮ್ಮ ಸಂಬಂಧ ಮುಂದುವರೆಸಿದ್ದಾರೆ. ಆದರೆ, ವಿಜಯಪುರದ ಯುವಕ ತನ್ನ ಮದುವೆ ಮುರಿದು ಹೋಗಿದ್ದಕ್ಕೆ ತೀವ್ರ ಕುಪಿತಗೊಂಡಿದ್ದನು. ಇದರಿಂದ ತನ್ನನ್ನು ಮದುವೆ ಆಗುವ ಹುಡುಗಿಯ ಜೊತೆಗೆ ಅಕ್ರಮ ಸಂಬಂಧ ಹೊಂದಿದವನನ್ನು ಕೊಲೆ ಮಾಡುವುದಕ್ಕೆ ನಿರ್ಧರಿಸಿದ್ದಾನೆ. ಪುಣೆಯ ಯುವಕ ತಮ್ಮ ಸಂಬಂಧಿಕರೊಬ್ಬರ ಮದುವೆಯಲ್ಲಿ ಪಾಲ್ಗೊಳ್ಳಲು ವಿಜಯಪುರಕ್ಕೆ ಆಗಮಿಸಿದ್ದನು. ಈ ವೇಳೆ ವಿಜಯಪುರದ ಯುವಕ ಆತನನ್ನು ಭೇಟಿಯಾಗಿ ಕೊಲೆ ಮಾಡಿದ್ದಾನೆ.

Follow Us:
Download App:
  • android
  • ios