Asianet Suvarna News Asianet Suvarna News

ಬೈಕ್ ಡಿಕ್ಕಿಯಾಗಿ ಪಾದಾಚಾರಿ ಸಾವು, ಸ್ಥಳಕ್ಕೆ ಧಾವಿಸಿದ ಕುಟುಂಬಸ್ಥರು ಕಾರು ಅಪಘಾತದಲ್ಲಿ ನಿಧನ!

ಪಾದಾಚಾರಿಗೆ ಬೈಕ್ ಡಿಕ್ಕಿಯಾದ ಮೃತಪಟ್ಟಿದ್ದಾನೆ. ಈ ಸುದ್ದಿ ತಿಳಿದು ಕುಟುಂಬ ಸದಸ್ಯರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ದಾರಿ ಮದ್ಯ ಕುಟುಂಬಸ್ಥರ ಕಾರು ಟ್ಯಾಂಕರ್‌ಗೆ ಡಿಕ್ಕಿಯಾಗಿ ಮೂವರು ಮೃತಪಟ್ಟ ದಾರುಣ ಘಟನೆ ನಡೆದಿದೆ.
 

Pedestrian killed after bike hit family members dies in road accident on way to spot in Telangana ckm
Author
First Published Dec 25, 2023, 3:42 PM IST

ನಲಗೊಂಡ(ಡಿ.25) ದೇಶದ ಬಹುತೇಕ ಕಡೆಗಳಲ್ಲಿ ವಿಪರಿಚಿತ ಚಳಿ, ಮಂಜು ಮುಸುಕಿದ ವಾತಾವರಣದ ಕಾರಣ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದೆ.ಕ್ರಿಸ್ಮಸ್ ಕಾರಣ  ಶಾಲಾ ಕಾಲೇಜುಗಳಿಗೆ ರಜೆ, ಕಚೇರಿಗಳಿಗೆ ರಜೆಗಳ ಕಾರಣದಿಂದ ರಸ್ತೆಗಳಲ್ಲಿ ವಾಹನ ಓಡಾಟ ಹೆಚ್ಚಾಗಿದೆ. ಹೀಗಾಗಿ ಅಪಾಯದ ಪ್ರಮಾಣವೂ ಹೆಚ್ಚಾಗಿದೆ. ಇದೀಗ ರಸ್ತೆ ಬದಿಯಲ್ಲಿ ನಡೆದುಕೊಂಡು ಸಾಗುತ್ತಿದ್ದ ವ್ಯಕ್ತಿಗೆ ಬೈಕ್ ಗುದ್ದಿದ ಪರಿಣಾಮ ಮೃತಪಟ್ಟಿದ್ದಾನೆ. ಈ ಮಾಹಿತಿ ತಿಳಿದ ಕುಟುಂಬದ 7 ಸದಸ್ಯರು ಕಾರಿನ ಮೂಲಕ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಮಾರ್ಗ ಮಧ್ಯ ಕುಟುಂಬಸ್ಥರ ಕಾರು ಟ್ಯಾಂಕರ್‌ಗೆ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟರೆ, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ತೆಲಂಗಾಣದ ನಲಗೊಂಡ ಜಿಲ್ಲೆಯ NH 186ರಲ್ಲಿ ನಡೆದಿದೆ.

ವೆಂಪಹಾಡ್ ಬಳಿ 19 ವರ್ಷದ ರಾಮಾವತ್ ಕೇಶವ್ ಭಾನುವಾರ(ಡಿ.24) ರಾತ್ರಿ ನಡೆದುಕೊಂಡು ತೆರಳುತ್ತಿದ್ದ. ಇದೇ ವೇಳೆ 28 ವರ್ಷದ ನಾಗರಾಜು ಬೈಕ್ ಮೂಲಕ ಆಗಮಿಸಿದ್ದಾರೆ. ಮಂಜು ಮುಸುಕಿದ ವಾತಾವರಣ ಕಾರಣ ಪಾದಾಚಾರಿ ಕೇಶವ್‌ಗೆ ಡಿಕ್ಕಿ ಹೊಡೆದಿದ್ದಾನೆ. ಭೀಕರ ಅಪಘಾತ ಸಂಭವಿಸಿದೆ.ಅಪಘಾತದ ರಭಸಕ್ಕೆ ಇಬ್ಬರೂ ಸ್ಥಳದಲ್ಲೆ ಮೃತಪಟ್ಟಿದ್ದಾರೆ.

 

ಪ್ರತ್ಯೇಕ ಘಟನೆ; ನಡುರಸ್ತೆಯಲ್ಲೇ ಹೊತ್ತಿಉರಿದ ಓಮಿನಿ, ಕಾರು!

ರಮಾವತ್ ಕೇಶವ್ ಪೋಷಕರು ಹಾಗೂ ಕುಟುಂಬಸ್ಥರಿಗೆ ಅಪಘಾತದ ಮಾಹಿತಿ ಸಿಕ್ಕಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹಗಳು ರಸ್ತೆಯಲ್ಲೇ ಇವೆ ಅನ್ನೋ ಮಾಹಿತಿ ಲಭ್ಯವಾಗಿದೆ. ಆಘಾತಕಾರಿ ಮಾಹಿತಿ ಸಿಕ್ಕ ಬೆನ್ನಲ್ಲೇ ಕುಟುಂಬದ 7 ಸದಸ್ಯರು ಕಾರಿನ ಮೂಲಕ ಸ್ಥಳಕ್ಕೆ ಧಾವಿಸಿದ್ದಾರೆ. 

ಪಾರ್ವತಿಪುರಂ ಬಳಿ ಕುಟುಂಬಸ್ಥರ ಕಾರು ಆಯಿಲ್ ಟ್ಯಾಂಕರ್‌ಗೆ ಡಿಕ್ಕಿಯಾಗಿದೆ. ಇಲ್ಲೂ ಕೂಡ ಮಂಜು ಕವಿದ ವಾತಾರಣದ ಕಾರಣ ಚಾಲನೆ ವೇಳೆ ಸ್ಪಷ್ಟ ಗೋಚರತೆ ಇರಲಿಲ್ಲ. ಹೀಗಾಗಿ ಅಪಘಾತದ ತೀವ್ರತೆ ಹೆಚ್ಚಾಗಿದೆ. ಸ್ಥಳದಲ್ಲೇ ಮೂವರು ಕುಟಂಬ ಸದಸ್ಯರು ಮೃತಪಟ್ಟಿದ್ದಾರೆ. ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು  ರಾಮಾವತ್ ಪಾಂಡೆ(40), ರಾಮಾವತ್ ಗಾನ್ಯ(38) ಹಾಗೂ ರಾಮಾವತ್ ಬಿಜ್ಜು(38) ಮೃತ ದುರ್ದೈವಿಗಳು.  

 

ಬೆಂಗಳೂರು ನೈಟ್‌ ರೌಂಡ್ಸ್‌ ಪೊಲೀಸ್‌ಗೆ ಬೈಕ್‌ ಗುದ್ದಿ ಪರಾರಿಯಾದ ಕಿರಾತಕ: ಕಾಲು ಮುರಿದುಕೊಂಡು ಬಿದ್ದ ಪಿಎಸ್‌ಐ!

ಪುತ್ರ ಅಪಘಾತದ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೋಷಕರು ಹಾಗೂ ಕುಟುಂಬಸ್ಥರ ಕಾರು ಅಪಘಾತವಾಗಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. 
 

Follow Us:
Download App:
  • android
  • ios