Asianet Suvarna News Asianet Suvarna News

12 ವರ್ಷದ ಮಗಳಿಗೆ ಎರಡೆರಡು ಬಾರಿ ಮದ್ವೆ: ತಾಯಿಯ ಬಂಧನ

12 ವರ್ಷದ ಅಪ್ರಾಪ್ತ ಮಗಳಿಗೆ ಎರಡೆರಡು ಬಾರಿ ಮದುವೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರಾಖಂಡ್‌ನ (Uttarakhand) ಪಿತೋರ್‌ಘಡ್‌ದ (Pithoragarh) ಧಾರುಚುಲದಲ್ಲಿ (Dharchula) ಈ ಘಟನೆ ನಡೆದಿದೆ.

Uttarakhand mother arrested for marrying her 12 year old daughter two times akb
Author
Bangalore, First Published Jun 23, 2022, 12:02 PM IST

ಪಿತೋರ್‌ಘಡ್‌: 12 ವರ್ಷದ ಅಪ್ರಾಪ್ತ ಮಗಳಿಗೆ ಎರಡೆರಡು ಬಾರಿ ಮದುವೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರಾಖಂಡ್‌ನ (Uttarakhand) ಪಿತೋರ್‌ಘಡ್‌ದ (Pithoragarh) ಧಾರುಚುಲದಲ್ಲಿ (Dharchula) ಈ ಘಟನೆ ನಡೆದಿದೆ. ಬಾಲಕಿಯ ತಾಯಿ 36 ವರ್ಷದ ಯುವಕನೊಂದಿಗೆ ಬಾಲಕಿಯ ವಿವಾಹ ಮಾಡಿದ್ದಳು. 

ಪ್ರಸ್ತುತ ಈ 12 ವರ್ಷದ ಅಪ್ರಾಪ್ತ ಬಾಲಕಿ ಮೂರು ತಿಂಗಳ ಗರ್ಭಿಣಿಯಾಗಿದ್ದು (pregnant), ಆಕೆಯನ್ನು ಪುನರ್ವಸತಿ ಕೇಂದ್ರದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿದೆ. ಅಲ್ಲದೇ ಇದು ಈಕೆಗೆ ಎರಡನೇ ವಿವಾಹವಾಗಿತ್ತು. ಮೊದಲ ವಿವಾಹ ಕೌಟುಂಬಿಕ ಕಲಹದಿಂದಾಗಿ ಮುರಿದು ಬಿದ್ದಿತ್ತು. ಇದಾದ ಬಳಿಕ ಆಕೆಗೆ ತಾಯಿ 36 ವರ್ಷದ ಯುವಕನೊಂದಿಗೆ ಮತ್ತೊಂದು ವಿವಾಹ ಮಾಡಿದ್ದಾಳೆ ಎಂದು ಪಿತೋರ್‌ಘಡ್‌ದ ಸೂಪರಿಂಟೆಂಡ್‌ ಆಫ್ ಪೊಲೀಸ್‌ ಲೋಕೇಶ್ವರ್ ಸಿಂಗ್ (Lokeshwar Singh) ಹೇಳಿದ್ದಾರೆ. 

ಅಪ್ರಾಪ್ತೆ ಮೇಲೆ ಸೋದರ ಮಾವ ಅತ್ಯಾಚಾರ, ಬಾಲಕಿ 7 ತಿಂಗಳು ಗರ್ಭಿಣಿ

ಬಾಲಕಿಯ ತಾಯಿಯನ್ನು ಬುಧವಾರ ಬಂಧಿಸಲಾಗಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 370 (ಮಾನವ ಕಳ್ಳಸಾಗಣೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ 5/6 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು. ಅಪ್ರಾಪ್ತ ಬಾಲಕಿಯ ಪತಿಯನ್ನು ಒಂದೆರಡು ದಿನಗಳ ಹಿಂದೆ ಬಂಧಿಸಲಾಯಿತು ಮತ್ತು ಐಪಿಸಿಯ ಸೆಕ್ಷನ್ 376 (ಅತ್ಯಾಚಾರಕ್ಕೆ ಶಿಕ್ಷೆ), ಪೋಕ್ಸೊ ಕಾಯ್ದೆಯ 5 (1) 6 ಮತ್ತು ಬಾಲ್ಯ ವಿವಾಹ ತಡೆ ಕಲಂ 9 (ಮಗುವಿಗೆ ಮದುವೆಯಾದ ಪುರುಷನಿಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಂದು ಸಿಂಗ್ ಹೇಳಿದರು ಈ ಬಗ್ಗೆ ಮಕ್ಕಳ ಕಲ್ಯಾಣ ಇಲಾಖೆ ಪೊಲೀಸರಿಗೆ ದೂರು ನೀಡಿತ್ತು ಎಂದು ಪೊಲೀಸ್ ಅಧಿಕಾರಿ ಹೇಳಿದರು. 

ಪಿತೋರ್‌ಘರ್‌ ಜಿಲ್ಲೆಯ ಬೇರಿನಾಗ್ ಉಪ ವಿಭಾಗದ ಡಿಗ್ಟೋಲಿ ಗ್ರಾಮದಲ್ಲಿಯೂ (Digtoli village) ವರನ ಪೋಷಕರಿಗೆ ಮನವರಿಕೆ ಮಾಡಿಕೊಟ್ಟ ನಂತರ  ಮತ್ತೊಂದು ಬಾಲ್ಯ ವಿವಾಹವನ್ನು ತಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಬಾಲ್ಯ ವಿವಾಹದ ಅನಾಹುತಗಳ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಕಠಿಣ ಕಾನೂನು ಜಾರಿಯಲ್ಲಿದ್ದರೂ ಅಲ್ಲಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಲೇ ಇದೆ.

ಶಾಲೆಗೆ ಹೋಗುವ ವಯಸ್ಸಿನಲ್ಲಿ ವಿವಾಹ, ಮಕ್ಕಳು, ಸಂಸಾರ, ವರದಕ್ಷಿಣೆ ಕಿರುಕುಳ, ಮಾನಸಿಕ ಹಿಂಸೆ ಸೇರಿದಂತೆ ಸಮಸ್ಯೆಗಳ ಕೂಪದಲ್ಲೇ ಇದ್ದ ಮೂವರು ಸಹೋದರಿಯರು ಶವವಾಗಿ ಪತ್ತೆಯಾದ ಘಟನೆ ರಾಜಸ್ಥಾನ ಜೈಪುರ ಜಿಲ್ಲೆಯ ದುಡು ಪಟ್ಟಣದಲ್ಲಿ ಕೆಲ ದಿನಗಳ ಹಿಂದಷ್ಟೇ ನಡೆದಿತ್ತು. ಕಳೆದ 15 ದಿನಗಳಿಂದ ಮೂವರು ಸಹೋದರಿಯರು ತಮ್ಮ ಇಬ್ಬರು ಮಕ್ಕಳೊಂದಿಗೆ ಕಾಣೆಯಾಗಿದ್ದರು. ಪೋಷಕರು ತಮ್ಮ ಮೂವರು ಮಕ್ಕಳು ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದರು. ಈ ವೇಳೆ ಪೊಲೀಸರ ಮುಂದೆ ಪತಿ ಹಾಗೂ ಆತನ ಮನೆಯವರು ನಾಟಕವಾಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ನಂತರ ಬಾವಿಯಲ್ಲಿ ಒಟ್ಟು 5 ಶವಗಳನ್ನು ಪತ್ತೆ ಮಾಡಿದ್ದರು.

ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿ ವಿದೇಶಕ್ಕೆ ಹಾರಿದ ಯುವಕ, ದೂರು ದಾಖಲು

ಕಾಲು(27), ಮಮತಾ(23) ಹಾಗೂ ಕಮಲೇಶ್(20) ಅನ್ನೋ ಮೂವರು ಸಹೋದರಿಯರನ್ನು ಬಾಲ್ಯ ವಿವಾಹ ಮಾಡಲಾಗಿತ್ತು. ಒಂದೇ ಮನೆಯ ಸಹೋದರರಿಗೆ ಮದುವೆ ಮಾಡಿಸಲಾಗಿತ್ತು. ಶಾಲೆಗೆ ಹೋಗುವ ವಯಸ್ಸಿನಲ್ಲಿ ಬಲವಂತವಾಗಿ ಬಾಲ್ಯ ವಿವಾಹ ಮಾಡಲಾಗಿತ್ತು. ಈ ಮೂವರು ಸಹೋದರಿಯರು ಶಿಕ್ಷಣ ಮುಂದುವರಿಸಲು ಇನ್ನಿಲ್ಲದ ಹರಸಾಹಸ ಪಟ್ಟಿದ್ದರು. ಆದರೆ ವಿವಾಹವಾಗದೇ ಬೇರೆ ವಿಧಿ ಇರಲಿಲ್ಲ.

ಬಾಲ್ಯದಲ್ಲೇ ಮದುವೆಯಾಗಿ ಗಂಡನ ಮನೆ ಸೇರಿದ ಈ ಮೂವರು ಸಹೋದರಿಯರು ಇನ್ನಿಲ್ಲದ ಚಿತ್ರಹಿಂಸೆ ಅನುಭವಿಸಿದ್ದಾರೆ. ಕುಡಿದು ಬರುವ ಗಂಡನಿಂದ ಹಲ್ಲೆಗೊಳಗಾಗಿ ಹಲವು ಬಾರಿ ಆಸ್ಪತ್ರೆ ಸೇರಿದ್ದಾರೆ. ಆದರೂ ಸಂಸಾರ ಸಾಗಿಸುತ್ತಿದ್ದ ಈ ಸಹೋದರಿಯರು ಶಿಕ್ಷಣವನ್ನೂ ಮುಂದುವರಿಸಿದ್ದರು. ಮಮತಾ ಪೊಲೀಸ್ ಪೇದೆ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದಳು. ಕಾಲು ಅಂತಿಮ ವರ್ಷದ ಬಿಎ ವ್ಯಾಸಾಂಗ ಮಾಡುತ್ತಿದ್ದರೆ, ಕಮಲೇಶ್ ಸೆಂಟ್ರಲ್ ಯುನಿವರ್ಸಿಟಿಯಲ್ಲಿ ಅಭ್ಯಾಸಕ್ಕೆ ನೋಂದಣಿ ಮಾಡಿಕೊಂಡಿದ್ದಳು.

ಪತ್ನಿಯರು ಶಿಕ್ಷಣ ಮುಂದುವರಿಸಿರುವುದು ಪತಿಯರಿಗೆ ಸುತಾರಂ ಇಷ್ಟವಿರಲಿಲ್ಲ. ಇಷ್ಟೇ ಅಲ್ಲ ಪ್ರತಿ ದಿನ ವರದಕ್ಷಿಣೆ ನೀಡುವಂತೆ ಕಿರುಕುಳ ನಡೆಯುತ್ತಲೇ ಇತ್ತು. ಪೊಲೀಸ್ ಆಗಬೇಕು ಎಂಬುದು ಮೂವರು ಸಹೋದರಿಯರು ಕನಸಾಗಿತ್ತು. ಬಳಿಕ ತನ್ನಂತೆ ನೊಂದ ಜೀವನಗಳಿಗೆ ಆಸರೆಯಾಗಬೇಕು ಅನ್ನೋದು ಹಂಬಲವಾಗಿತ್ತು. ಇದಕ್ಕಾಗಿ ಕುಡುಕ ಪತಿಯರ ಜೊತೆ ಕಿರುಕುಳ ಸಹಿಸಿಕೊಂಡು ಸಂಸಾರ ನಡೆಸುತ್ತಿದ್ದರು.
 

Follow Us:
Download App:
  • android
  • ios