ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿ ವಿದೇಶಕ್ಕೆ ಹಾರಿದ ಯುವಕ, ದೂರು ದಾಖಲು
* ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದ ಯುವಕ ವಿದೇಶಕ್ಕೆ ಪರಾರಿ
* ಅಜ್ಜಿ ಮತ್ತು ಮೊಮ್ಮಗಳಿಂದ ಪೊಲೀಸರಿಗೆ ದೂರು
* ಶಿವಮೊಗ್ಗದ ಹೊಳೆಹೊನ್ನೂರು ಸದಾಶಿವಪುರದ ಹಕ್ಕಿ ಪಿಕ್ಕಿ ಕ್ಯಾಂಪ್ ನಲ್ಲಿ ನಡೆದಿರುವ ಘಟನೆ
ಶಿವಮೊಗ್ಗ, (ಜೂನ್.13): ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದ ಯುವಕ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ಅಜ್ಜಿ ಮತ್ತು ಮೊಮ್ಮಗಳು ಪೊಲೀಸರಿಗೆ ದೂರು ನೀಡಿದ್ದಾರೆ.
ಶಿವಮೊಗ್ಗದ ಹೊಳೆಹೊನ್ನೂರು ಸದಾಶಿವಪುರದ ಹಕ್ಕಿ ಪಿಕ್ಕಿ ಕ್ಯಾಂಪ್ ನಲ್ಲಿ ಈ ಘಟನೆ ನಡೆದಿತ್ತು. ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆಯಿಂದ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೂ ಕೂಡ ಆರೋಪಿ ಯುವಕ ವಿದೇಶಕ್ಕೆ ಹಾರಿದ್ದಾನೆ.
ಇನ್ನು ಆರೋಪಿ ವಿದೇಶಕ್ಕೆ ಪರಾರಿಯಾದ ಬಳಿಕ, ವಿದೇಶದಿಂದಲೇ ಅಪ್ರಾಪ್ತೆಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಕೆಲ ದಿನಗಳ ಹಿಂದೆ ಯುವಕನ ಕಡೆಯವರಿಂದ ಅಪ್ರಾಪ್ತೆ ಮೇಲೆ ಹಲ್ಲೆ ನಡೆಸುವ ಯತ್ನವೂ ನಡೆದಿದೆ ಎನ್ನಲಾಗಿದೆ. ಸಂತ್ರಸ್ತ ಅಪ್ರಾಪ್ತ ಬಾಲಕಿ ತನ್ನ ಅಜ್ಜಿ ಜೊತೆ ವಾಸವಿದ್ದಾಳೆ.
ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಮಾರಾಮಾರಿ!
ಆರೋಪಿ ಯುವಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತ ಬಾಲಕಿ ಮತ್ತು ಅಜ್ಜಿ ಆಗ್ರಹಿಸಿದ್ದಾರೆ. ಯುವಕ ಮತ್ತು ಆತನ ಕುಟುಂಬದ ವಿರುದ್ಧ ಶಿವಮೊಗ್ಗ ಎಸ್.ಪಿ. ಕಚೇರಿಗೆ ಬಂದ ಸಂತ್ರಸ್ತೆ ದೂರು ನೀಡಿದ್ದಾರೆ. ತನ್ನ ಜೀವನದ ಜೊತೆ ಚೆಲ್ಲಾಟವಾಡಿದ ಯುವಕನ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಲಾಡ್ಜ್‌ನಲ್ಲಿ ಮಹಿಳೆ ಶವ ಪತ್ತೆ: ಪ್ರಿಯಕರನಿಂದ ಕೊಲೆ ಶಂಕೆ
ಬೆಂಗಳೂರು ನಗರದ ರೈಲ್ವೇ ಸ್ಟೇಷನ್ ಬಳಿ ಇರುವ ಬೆಂಗಳೂರು ರೆಸಿಡೆನ್ಸಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಲಾಡ್ಜ್‌ನ ರೂಂ ಚೆಕ್ ಮಾಡಿದಾಗ ಶವ ಪತ್ತೆಯಾಗಿದ್ದು, ಕೊಲೆಯಗಿರುವ ಶಂಕೆ ವ್ಯಕ್ತವಾಗಿದೆ. ಮೃತ ಮಹಿಳೆಯನ್ನು ದೀಪಾ ಪದನ್ ಎಂದು ಗುರುತಿಸಲಾಗಿದ್ದು, ಆಕೆಯ ಪ್ರಿಯಕರ ಅನ್ಮಲ್ ರತನ್ ಕಂದರ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ದೀಪಾ ಪದನ್ ಹಾಗೂ ಅನ್ಮಲ್ ರತನ್ ಕಂದರ್ ಬೇರೆ ಬೇರೆಯವರ ಜೊತೆ ಮದುವೆಯಾಗಿದ್ದರೂ, ಇವರಿಬ್ಬರ ನಡುವೆ ಹಲವು ತಿಂಗಳಿನಿಂದ ಸ್ನೇಹ ಸಂಬಂಧವಿತ್ತು ಎನ್ನಲಾಗಿದೆ.
ಆದರೆ ದೀಪಾ ಬದನ್ ಮತ್ತೊಬ್ಬನ ಜೊತೆ ಕೂಡ ಸ್ನೇಹ ಬೆಳೆಸಿದ್ದು, ಈ ವಿಚಾರ ಅನ್ಮರ್‌ಗೆ ತಿಳಿದಿದೆ. ಈ ಹಿನ್ನೆಲೆ ಒರಿಸ್ಸಾದಿಂದ ನಗರಕ್ಕೆ ಔಟಿಂಗ್ ಎಂದು ಕರೆತಂದು ದೀಪಾ ಪದನ್ ಕೊಲೆ ಮಾಡಿ ಅನ್ಮಲ್ ರತನ್ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: ಹತ್ತನೇ ತಾರೀಕು ಲಾಡ್ಜ್ ಸಿಬ್ಬಂದಿ ರೂಂ ಚೆಕ್ ಮಾಡಿದಾಗ ದೀಪಾ ಬದನ್ ಶವ ಪತ್ತೆಯಾಗಿದೆ. ಬಾಯಿ , ಮೂಗಿನಿಂದ ರಕ್ತ ಬಂದ ಶವ ಹಾಸಿಗೆ ಮೇಲೆ ಪತ್ತೆಯಾಗಿದೆ. ಕುತ್ತಿಗೆ ಹಿಸುಕಿ ದಿಂಬಿನಿಂದ ಕೊಲೆ ಮಾಡಿ, ಸತ್ತಿದ್ದಾಳೆಂದು ತಿಳಿದು ಆರೋಪಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವೆರೆದಿದೆ.