ಅಶ್ಲೀಲ ವಿಡಿಯೋದಲ್ಲಿ ಹೆಂಡ್ತಿ ನಟಿಸಿರೋ ಅನುಮಾನ: ಮನಬಂದಂತೆ ಹಲ್ಲೆ ಮಾಡಿದ ಪೋರ್ನ್ ಚಟಕ್ಕೆ ಬಿದ್ದ ಪತಿ
ಹೊಸ ಮೊಬೈಲ್ ಖರೀದಿಸಿದ ನಂತರ ಪತಿ ಪೋರ್ನ್ ಚಟಕ್ಕೆ ಬಿದ್ದಿದ್ದರು. ಪೋರ್ನ್ ವಿಡಿಯೋದಲ್ಲಿರುವ ಮಹಿಳೆ ತನ್ನ ಪತ್ನಿಯೇ ಎಂದು ಶಂಕಿಸಿ ದೊಡ್ಡ ಸೂಜಿಯಿಂದ ತನ್ನ ಹೆಂಡತಿಗೆ ಚುಚ್ಚಿ ಗಾಯಗೊಳಿಸಿದ್ದಾನೆ.
ರಾಜ್‌ಕೋಟ್ (ಆಗಸ್ಟ್ 24, 2023): ತಾನು ವೀಕ್ಷಿಸುತ್ತಿದ್ದ ಪೋರ್ನ್ ವಿಡಿಯೋದಲ್ಲಿರುವ ಮಹಿಳೆ ತನ್ನ ಪತ್ನಿಯೇ ಎಂದು ಶಂಕಿಸಿ, ರಾಜ್‌ಕೋಟ್‌ನಲ್ಲಿ 51 ವರ್ಷದ ವ್ಯಕ್ತಿಯೊಬ್ಬ ಮಂಗಳವಾರ ರಾತ್ರಿ ಸೆಣಬಿನ ಚೀಲವನ್ನು ಹೊಲಿಯಲು ಬಳಸುವ ದೊಡ್ಡ ಸೂಜಿಯಿಂದ ತನ್ನ ಹೆಂಡತಿಗೆ ಚುಚ್ಚಿ ಗಾಯಗೊಳಿಸಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೆ, ತಾಯಿಯನ್ನು ರಕ್ಷಿಸಲು ಹೋದ ಮಗಳೂ ಸಹ ಗಾಯಗೊಂಡಿದ್ದಾಳೆ ಎಂದೂ ವರದಿಯಾಗಿದೆ.
ಪತಿ ಹರೇಶ್ ಭೂಪ್ಕರ್‌ನಿಂದ ನನ್ನನ್ನು ರಕ್ಷಿಸಲು ಬಂದ ನನಗೆ ಮತ್ತು ಮಗಳು ಅನುಶ್ರೀ (24) ಗಾಯಗೊಂಡಿದ್ದಾರೆ ಎಂದು ಈ ಘಟನೆ ಸಂಬಂಧ ಗೀತಾ ಭೂಪ್ಕರ್ (45) ದೂರಿನಲ್ಲಿ ತಿಳಿಸಿದ್ದಾರೆ. ಗೀತಾ ನೀಡಿದ ದೂರಿನ ಮೇರೆಗೆ ವಿಶ್ವವಿದ್ಯಾನಿಲಯ ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 324 (ಹಲ್ಲೆ) ಅಡಿಯಲ್ಲಿ ಪತಿಯನ್ನು ಬುಧವಾರ ಬಂಧಿಸಿದ್ದಾರೆ. ಹಾಗೂ, ಗೀತಾ ಮತ್ತು ಅವರ ಮಗಳನ್ನು ಚಿಕಿತ್ಸೆಗಾಗಿ ರಾಜ್‌ಕೋಟ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿ: ಬಾಲಕಿಯರ ಹಾಸ್ಟೆಲ್‌ನಲ್ಲಿ ಸರ್‌ಪ್ರೈಸ್ ಚೆಕ್: ರಾತ್ರೋರಾತ್ರಿ ಕಾಣೆಯಾದ 89 ಹುಡುಗಿಯರು
ಗೀತಾ 2 ಮಕ್ಕಳ ತಾಯಿಯಾಗಿದ್ದು, 24 ವರ್ಷದ ಮಗಳು ಮತ್ತು 18 ವರ್ಷದ ಮಗ ಇದ್ದಾರೆ. ಮಾರ್ಕೆಟಿಂಗ್ ವೃತ್ತಿಪರರಾಗಿರುವ ಅವರ ಪತಿ ಹರೇಶ್ ಅವರು ಹೊಸ ಮೊಬೈಲ್ ಖರೀದಿಸಿದ ನಂತರ ಪೋರ್ನ್ ಚಟಕ್ಕೆ ಬಿದ್ದಿದ್ದರು ಎಂದು ಗೀತಾ ದೂರು ನೀಡಿದ್ದಾರೆ. ಅಲ್ಲದೆ, ಈ ಹಿಂದೆ ಕೂಡ ಗೀತಾ ತನ್ನ ಪ್ರಿಯಕರನೊಂದಿಗೆ ಪೋರ್ನ್ ವಿಡಿಯೋಗಳಲ್ಲಿ ನಟಿಸುತ್ತಿದ್ದಾರೆ ಎಂದು ಆರೋಪಿಸಿದ್ದರು ಮತ್ತು ಅವರೊಂದಿಗೆ ಜಗಳವಾಡಿದ್ದರು ಎಂದೂ ತಿಳಿದುಬಂದಿದೆ. ಹಾಗೂ, ಮಹಿಳೆ ಕಳೆದ ವಾರ ಪೊಲೀಸರಿಗೆ ದೂರು ನೀಡಿದ್ದರು. ಮಹಿಳೆ ಕಳೆದ ವಾರ ಪೊಲೀಸರಿಗೆ ದೂರು ನೀಡಿದ್ದರು ಆದರೆ ಎಫ್‌ಐಆರ್ ದಾಖಲಿಸುವ ಮೊದಲು ಕುಟುಂಬವು ಸಮಸ್ಯೆಯನ್ನು ಇತ್ಯರ್ಥಪಡಿಸಿತ್ತು ಎಂದೂ ಹೇಳಲಾಗಿದೆ.
ಆದರೆ, ಮಂಗಳವಾರ ರಾತ್ರಿ ಗೀತಾ ಮಲಗಿದ್ದಾಗ ಏಕಾಏಕಿ ಆಕೆಯ ಬಳಿಗೆ ಬಂದ ಹರೇಶ್ ಸೆಣಬಿನ ಧಾನ್ಯದ ಚೀಲಗಳನ್ನು ಹೊಲಿಯಲು ಬಳಸುತ್ತಿದ್ದ ದೊಡ್ಡ ಸೂಜಿಯಿಂದ ಹಲ್ಲೆ ನಡೆಸಿದ್ದಾನೆ. ಆಕೆ ಕಿರುಚಾಡುತ್ತಿದ್ದಂತೆ ಮಗಳು ಅನುಶ್ರೀ ರಕ್ಷಿಸಲು ಬಂದಿದ್ದಾಳೆ. ಆದರೆ ಪತಿ ಅಕಕೆಯ ಮೇಲೂ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ ಎಂದು ತಿಳಿದುಬಂದಿದೆ. ಇನ್ನು, ಗೀತಾ ಅವರ ಹೊಟ್ಟೆ, ಎರಡೂ ಕೈಗಳು ಮತ್ತು ಒಂದು ಕಾಲಿನ ಮೇಲೆ ಗಾಯಗಳಾಗಿದ್ದರೆ, ಅವರ ಮಗಳ ಕೈಗೆ ಗಾಯಗಳಾಗಿವೆ ಎಂದು ಪೊಲೀಸರು ದೂರು ನೀಡಿದ್ದಾರೆ.
ಇದನ್ನೂ ಓದಿ: ಅನಾಥ ಬಾಲಕಿ ಮನೆಗೆ ನುಗ್ಗಿ ಅಪ್ರಾಪ್ತೆ ಮೇಲೆ ಗ್ಯಾಂಗ್‌ರೇಪ್ ಮಾಡಿದ 8 ಜನ ಕಾಮುಕರು!