ಯುಗಾದಿ ಹಬ್ಬ ಹಿನ್ನೆಲೆ ದೇವರ ಫೋಟೊ ತೊಳೆಯಲು ಬಂದು ಯುವಕರಿಬ್ಬರು ಕಾವೇರಿಯಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಸಮೀಪದ ಕಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದಿದೆ. ರವಿ ಎಂಬುವವರ ಪುತ್ರ ಗಗನ(18), ಸುರೇಶ್ ಎಂಬುವವರ ಪುತ್ರ ದರ್ಶನ್(20) ಮೃತ ದುರ್ದೈವಿಗಳು.

ಮೈಸೂರು (ಏ.9) ಯುಗಾದಿ ಹಬ್ಬ ಹಿನ್ನೆಲೆ ದೇವರ ಫೋಟೊ ತೊಳೆಯಲು ಬಂದು ಯುವಕರಿಬ್ಬರು ಕಾವೇರಿಯಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಸಮೀಪದ ಕಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರವಿ ಎಂಬುವವರ ಪುತ್ರ ಗಗನ(18), ಸುರೇಶ್ ಎಂಬುವವರ ಪುತ್ರ ದರ್ಶನ್(20) ಮೃತ ದುರ್ದೈವಿಗಳು. ಇಂದು ಯುಗಾದಿ ಹಬ್ಬ ಹಿನ್ನೆಲೆ ಕೊತ್ತವಳ್ಳಿ ದೊಡ್ಡಮ್ಮ ತಾಯಿ ದೇವರನ್ನು ತೊಳೆಯಲು ಕಾವೇರಿಗೆ ಬಂದಿದ್ದ ಯುವಕರು. ದೇವರನ್ನು ತೊಳೆಯಲು ನದಿಗೆ ಇಳಿದಿದ್ದಾರೆ. ಈ ವೇಳೆ ನದಿಯಲ್ಲಿ ಇಳಿದ ಇಬ್ಬರೂ ಮುಳುಗಿ ಮೃತಪಟ್ಟಿದ್ದಾರೆ.

ಘಟನೆ ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಸ್ಥಳೀಯರು, ಸ್ಥಳಕ್ಕೆ ಸಿಬ್ಬಂದಿ ಓರ್ವನ ಶವ ಹೊರತೆಗೆದಿದ್ದಾರೆ. ಇನ್ನೋರ್ವನ ಮೃತದೇಹ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಿರುವ ಸಿಬ್ಬಂದಿ. ಘಟನೆಗೆ ಸಂಬಂಧಿಸಿದಂತೆ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ನಾನ ಮಾಡಲು ತೆರಳಿದ್ದ ಇಬ್ಬರು ಬಾಲಕರು ನದಿ ಪಾಲು! ‌ಯುಗಾದಿ ಅಮಾವಾಸ್ಯೆಯಂದೇ ದುರ್ಘಟನೆ!