Asianet Suvarna News Asianet Suvarna News

ಕಿಲ್ಲರ್ ಬಿಎಂಟಿಸಿಗೆ ಇಬ್ಬರು ಬಲಿ, ಹೆಂಡತಿ ಸೀಮಂತ ಸಂಭ್ರಮದಲ್ಲಿದ್ದ ಗಂಡನ ಬಲಿ ಪಡೆದ ಬಸ್‌!

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಕಿಲ್ಲರ್ ಬಿಎಂಟಿಸಿಗೆ ಇಬ್ಬರು ಬಲಿಯಾಗಿದ್ದಾರೆ.  ಎರಡು ಪ್ರತ್ಯೇಕ ಪ್ರಕರಣದಲ್ಲಿ   ಓರ್ವ ಮಹಿಳೆ ಹುಳಿಮಾವು ಬಳಿ ಬಲಿಯಾದರೆ. ಹೆಂಡತಿ ಸೀಮಂತ ಸಂಭ್ರಮದಲ್ಲಿದ್ದ ಗಂಡ ಮೃತಪಟ್ಟಿದ್ದಾರೆ.

Two killed after  BMTC bus hit in separate accidents gow
Author
First Published Oct 29, 2023, 11:52 AM IST

ಬೆಂಗಳೂರು (ಅ.29): ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಕಿಲ್ಲರ್ ಬಿಎಂಟಿಸಿಗೆ ಇಬ್ಬರು ಬಲಿಯಾಗಿದ್ದಾರೆ.  ಎರಡು ಪ್ರತ್ಯೇಕ ಪ್ರಕರಣದಲ್ಲಿ   ಓರ್ವ ಮಹಿಳೆ ಹುಳಿಮಾವು ಬಳಿ ಬಲಿಯಾದರೆ. ಹೆಂಡತಿ ಸೀಮಂತ ಸಂಭ್ರಮದಲ್ಲಿದ್ದ ಗಂಡ ಮೃತಪಟ್ಟಿದ್ದಾರೆ. ಬಿಎಂಟಿಸಿಗೆ ಇನ್ನೆಷ್ಟು ಬಲಿಗಳು ಬೇಕು ಎಂದು ಜನ ಶಾಪ ಹಾಕುತ್ತಿದ್ದಾರೆ.

ವರ್ತೂರು ಸಂತೋಷ್ ಪ್ರಕರಣ, ಅರಣ್ಯ ಅಧಿಕಾರಿಗಳಿಗೆ ತಲೆ ನೋವಾದ ಹುಲಿ ಉಗರು ಕೇಸ್‌

ವಿಜಯನಗರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ  ಬಿಎಂಟಿಸಿಗೆ ಸಿಲುಕಿ ಕುಮಾರ್ (45)  ಎಂಬ ಬೈಕ್‌ ಸವಾರ ಮೃತಪಟ್ಟಿದ್ದಾರೆ. ಗೋವಿಂದರಾಜನಗರ ಬೈ ಟು ಕಾಫಿ ಮುಂಭಾಗ ಈ ಘಟನೆ  ನಡೆದಿದೆ. ಸ್ಥಳಕ್ಕೆ ವಿಜಯನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹೆಂಡತಿಯ ಸೀಮಂತ ಕಾರ್ಯದ ಹಿನ್ನೆಲೆ ವಿಜಯನಗರ ಮಾರ್ಕೆಟ್‌ ನಿಂದ ಹೂ ತೆಗೆದುಕೊಂಡು ಮನೆಗೆ ಹಿಂತಿರುಗಿ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.   ಅನ್ನಪೂರ್ಣೇಶ್ವರಿ ನಗರ ನಿವಾಸಿಯಾಗಿರೋ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸದ್ಯ ಕುಮಾರ್ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗುತ್ತದೆ. ಸದ್ಯ ಬಿಎಂಟಿಸಿ ಚಾಲಕ ಶ್ರೀನಿವಾಸ್ ನನ್ನು ವಿಜಯನಗರ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಿಟ್ ಕಾಯಿನ್ ತನಿಖೆ ನೆಪದಲ್ಲಿ ಪೋನ್ ಕದ್ದಾಲಿಕೆ, ಎಸ್ ಐಟಿ ಅಧಿಕಾರಿಗಳ ವಿರುದ್ಧವೇ ಕೇಸ್‌!

ಇನ್ನು ಹುಳಿಮಾವು ಸಂಚಾರಿ ಠಾಣಾ ವ್ಯಾಪ್ತಿಯ   ಅರಕೆರೆಯ ಶ್ರೀ ಸಾಯಿ ಗಾರ್ಮೆಂಟ್ಸ್ ಬಳಿ ವೀಣಾ ಎಂಬ ಮಹಿಳೆ ಬಿಎಂಟಿಸಿ ಬಸ್ ಗೆ ಬಲಿಯಾದ ದುದೈವಿಯಾಗಿದ್ದಾರೆ. ರಸ್ತೆ ದಾಟುವಾಗ ಮಹಿಳೆಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ವೀಣಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಹುಳಿಮಾವು ಸಂಚಾರಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

Follow Us:
Download App:
  • android
  • ios