Asianet Suvarna News Asianet Suvarna News

ಬಿಟ್ ಕಾಯಿನ್ ತನಿಖೆ ನೆಪದಲ್ಲಿ ಪೋನ್ ಕದ್ದಾಲಿಕೆ, ಎಸ್ ಐಟಿ ಅಧಿಕಾರಿಗಳ ವಿರುದ್ಧವೇ ಕೇಸ್‌!

ಬಿಟ್ ಕಾಯಿನ್ ತನಿಖೆ ನೆಪದಲ್ಲಿ ಪೋನ್ ಕದ್ದಾಲಿಕೆ  ಮಾಡಲಾಗುತ್ತಿದೆ ಎಂದು ಬಿಟ್ ಕಾಯಿನ್ ಬಗ್ಗೆ ತನಿಖೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.

Bitcoin Scam Advocate file case against  SIT officials on phone tapping gow
Author
First Published Oct 28, 2023, 5:37 PM IST

ಬೆಂಗಳೂರು (ಅ.28): ಬಿಟ್ ಕಾಯಿನ್ ತನಿಖೆ ನೆಪದಲ್ಲಿ ಪೋನ್ ಕದ್ದಾಲಿಕೆ  ಮಾಡಲಾಗುತ್ತಿದೆ ಎಂದು ಬಿಟ್ ಕಾಯಿನ್ ಬಗ್ಗೆ ತನಿಖೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಬಿಟ್ ಕಾಯಿನ್  ಪ್ರಕರಣದಲ್ಲಿ ಸಿಲುಕಿರುವ ಆರೋಪಿಗಳ ಪರ ವಕೀಲರ ಪೋನ್ ಕದ್ದಾಲಿಕೆ ಮಾಡಲಾಗಿದೆ ಎಂದು ಶ್ರೀಕಿ ಪರ ವಕೀಲರಿಂದ ನ್ಯಾಯಾಲಯಕ್ಕೆ ದೂರು ಸಲ್ಲಿಕೆಯಾಗಿದೆ.

ಶ್ರೀಕಿ ಪರ ವಕೀಲ  ಸ್ವರೂಪ್ ಆನಂದ್  ಅವರು ಬಿಟ್ ಕಾಯಿನ್ ಪ್ರಕರಣದ ತನಿಖಾಧಿಕಾರಿಗಳ ವಿರುದ್ದ 1 ನೇ ಎಸಿಎಂಎಂ ನ್ಯಾಯಾಲಯದಲ್ಲಿ ದೂರು ದಾಖಲು ಮಾಡಿದ್ದಾರೆ.

ಹರ್ಯಾಣ 19 ವರ್ಷದ ಗ್ಯಾಂಗ್‌ಸ್ಟರ್‌ ಕಡ್ಯಾನ್‌ ವಿರುದ್ಧ ರೆಡ್‌ಕಾರ್ನರ್‌ ನೋಟಿಸ್‌, ಅಮೆರಿಕಕ್ಕೆ ಪರಾರಿ

ಎಸ್ ಐ ಟಿ ಅಧಿಕಾರಿಗಳು ನನ್ನ ಫೋನ್ ಕದ್ದಾಲಿಕೆ ಮಾಡಿದ್ದಾರೆ, ನನ್ನ ವಾಟ್ಸಾಪ್ ಕರೆಯನ್ನು ಕದ್ದು ಕೇಳಿದ್ದಾರೆ. ಅಲ್ಲದೇ ಆರೋಪಿ ಪರ ವಕೀಲ ಎಂಬ ಕಾರಣಕ್ಕೆ ನೋಟಿಸ್ ನೀಡಿದ್ದಾರೆ. ಅಲ್ಲದೇ, ಹೇಳಿಕೆ‌ ನೀಡುವಂತೆ ಕರೆದು ತನ್ನದೇ ವಾಟ್ಸಾಪ್‌ ಕಾಲ್ ಸಂಭಾಷಣೆ ಕುರಿತು ಪ್ರಶ್ನೆ ಮಾಡಿದ್ದಾರೆ. ತನ್ನ ವಾಟ್ಸಪ್ ಕಾಲ್ ಸಂಭಾಷಣೆ ರೆಕಾರ್ಡ್ ಪೊಲೀಸರಿಗೆ ಸಿಕ್ಕಿದ್ದಾದರೂ ಹೇಗೆ ಎಂದು ದೂರಿನಲ್ಲಿ ಪ್ರಶ್ನಿಸಿದ್ದಾರೆ.

ಪಿತೂರಿಯಿಂದ ವರ್ತೂರು ಬಂಧನ, ಅರಣ್ಯ ಇಲಾಖೆ ಎಡವಟ್ಟು ಎಳೆಎಳೆಯಾಗಿ ಬಿಚ್ಚಿಟ್ಟ ಸಂತೋಷ್‌ ಪರ ವಕೀಲ

ಮಾತ್ರವಲ್ಲ ಎಸ್ಐಟಿ ತನಿಖಾಧಿಕಾರಿ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ವಕೀಲ ಸ್ವರೂಪ್‌ ದೂರು ನೀಡಿದ್ದು, ಎಸ್ಐಟಿ ತನಿಖಾಧಿಕಾರಿ ಇನ್ಸ್ಪೆಕ್ಟರ್ ದಯಾನಂದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ದೂರು ಸ್ವೀಕರಿಸಿದ ಕೋರ್ಟ್ ತನಿಖಾಧಿಕಾರಿಗಳಿಗೆ ನೊಟೀಸ್ ನೀಡಿದೆ. ಜೊತೆಗೆ ನ. 3ರಂದು ಕೋರ್ಟ್ ಗೆ ಹಾಜರಾಗಿ ಈ ಬಗ್ಗೆ ಸ್ಪಷ್ಟನೆ ನೀಡಲು ಇನ್ಸ್ಪೆಕ್ಟರ್ ದಯಾನಂದ್ ಅವರಿಗೆ ಸೂಚನೆ ನೀಡಿದೆ.

ಸುದರ್ಶನ್ ರಮೇಶ್ ಅವರು 2021ರ ಜು.12ರಂದು ನೆದರ್‌ಲ್ಯಾಂಡ್‌ನಿಂದ ಭಾರತಕ್ಕೆ ಬಂದಿದ್ದರು. ಶ್ರೀಕಿ ಬಿಟ್‌ಕಾಯಿನ್‌ ಹಗರಣ ವಿಚಾರವಾಗಿ ಅವರಿಗೆ ಇಡಿ ಸಮನ್ಸ್ ನೀಡಿತ್ತು. ಇದರಿಂದ ಅವರು 2021ರ ಡಿ.29, 30 ಮತ್ತು 2022ರ ಜ.1ರಂದು ಇಡಿ ವಿಚಾರಣೆಗೆ ಹಾಜರಾಗಿ, ಹೇಳಿಕೆ ದಾಖಲಿಸಿದ್ದರು. 2022ರ ಜ.12ರಂದು ನೆದರ್‌ಲ್ಯಾಂಡ್‌ಗೆ ತೆರಳಲು ವಿಮಾನ ನಿಲ್ದಾಣಕ್ಕೆ ತೆರಳಿದ್ದಾಗ ಅವರ ವಿರುದ್ಧ ಇಡಿ ಎಲ್‌ಒಸಿ ಜಾರಿ ಮಾಡಿತ್ತು. ಇದರಿಂದ ವಿಮಾನ ನಿಲ್ದಾಣದಲ್ಲಿ ವಲಸಿಗರ ಇಲಾಖೆಯು ಸುದರ್ಶನ್ ಅವರನ್ನು ತಡೆದು, ಅವರ ಪಾಸ್‌ಪೋರ್ಟ್‌ ರದ್ದಾಗಿದೆ ಎಂಬುದಾಗಿ ಹಿಂಬರಹ ನೀಡಿದ್ದರು. ಇದರಿಂದ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದೀಗ ಹೈಕೋರ್ಟ್‌, ವಿಚಾರಣೆಯಿಂದ ತಪ್ಪಿಸಿಕೊಂಡು ಹೋಗಬಹುದು ಎಂಬ ಅನುಮಾನದ ಮೇಲೆ ಎಲ್‌ಒಸಿ ನೀಡಲಾಗಿದೆ. ಅನುಮಾನದ ಆಧಾರದಲ್ಲಿ ಅರ್ಜಿದಾರರ ವಿರುದ್ಧ ಎಲ್‌ಒಸಿ ಮುಂದುವರಿಸಿರುವುದು ಕಾನೂನಿನ ದುರ್ಬಳಕೆಯಾಗಲಿದೆ ಎಂದು ಅಭಿಪ್ರಾಯಪಟ್ಟು ಎಲ್‌ಒಸಿಯನ್ನು ರದ್ದುಪಡಿಸಿದೆ.

Follow Us:
Download App:
  • android
  • ios