ಸ್ನೇಹಿತ ಪತ್ನಿಗೆ ಸ್ತನ ಕ್ಯಾನ್ಸರ್ ಚಿಕಿತ್ಸೆಗಾಗಿ ಹಣ ಬೇಕಾಗಿತ್ತು. ಹೀಗಾಗಿ ಸತೀಶ್ ಜೊತೆ ಸೇರಿ ಅಶೋಕ್ ಕಳ್ಳತನಕ್ಕಿಳಿದಿದ್ದನು. ಸದ್ಯ ಆರೋಪಿಗಳಿಂದ 10 ಲಕ್ಷ ಬೆಲೆ ಬಾಳುವ 8 ಬೈಕ್‌ಗಳನ್ನ ಜಪ್ತಿ ಮಾಡಿಕೊಂಡ ಪೊಲೀಸರು.  

ಬೆಂಗಳೂರು(ಜು.23):  ಸ್ನೇಹಿತನ ಹೆಂಡತಿಯ ಜೀವ ಉಳಿಸಲು ಕಳ್ಳತನಕ್ಕಿಳಿದ ಘಟನೆ ನಗರದಲ್ಲಿ ನಡೆದಿದೆ. ಕಳ್ಳತನಕ್ಕಿಳಿದಿದ್ದ ಕಳ್ಳ ಹಾಗೂ ಮತ್ತೊಬ್ಬನನ್ನ ಬಂಧನ ಪೊಲೀಸರು ಬಂಧಿಸಿದ್ದಾರೆ. ಸತೀಶ್, ಅಶೋಕ್ ಬಂಧಿತ ಆರೋಪಿಗಳಾಗಿದ್ದಾರೆ. 

Add Asianetnews Kannada as a Preferred SourcegooglePreferred

ಬಂಧಿತ ಆರೋಪಿಗಳು ರಾತ್ರಿ ಹೊತ್ತು ಹ್ಯಾಂಡ್ ಲಾಕ್ ಮುರಿದು ಬೈಕ್ ಕಳ್ಳತನ ಮಾಡುತ್ತಿದ್ದರು. ಆರೋಪಿಗಳ ಪೈಕಿ ಅಶೋಕನ ಸ್ನೇಹಿತನ ಹೆಂಡತಿಗೆ ಸ್ತನ ಕ್ಯಾನ್ಸರ್ ಇತ್ತು. ಗೆಳೆಯನ ಹೆಂಡತಿ ಅಶೋಕನಿಗೆ ತಾಯಿ ಪ್ರೀತಿ ತೋರಿಸಿ ಸ್ವಂತ ಅಣ್ಣನಂತೆ ನೋಡಿಕೊಳ್ಳುತ್ತಿದ್ದಳಂತೆ. ಇದರಿಂದ ಆರೋಪಿ ಅಶೋಕ ಸಾಕಷ್ಟು ನೊಂದಿದ್ದನಂತೆ.

ಧಾರವಾಡ: ಲೇಔಟ್ ವಿಚಾರಕ್ಕೆ ಯುವಕನ ಬರ್ಬರ ಕೊಲೆ?

ಸ್ತನ ಕ್ಯಾನ್ಸರ್ ಚಿಕಿತ್ಸೆಗಾಗಿ ಹಣ ಬೇಕಾಗಿತ್ತು. ಹೀಗಾಗಿ ಸತೀಶ್ ಜೊತೆ ಸೇರಿ ಅಶೋಕ್ ಕಳ್ಳತನಕ್ಕಿಳಿದಿದ್ದನು. ಸದ್ಯ ಆರೋಪಿಗಳಿಂದ 10 ಲಕ್ಷ ಬೆಲೆ ಬಾಳುವ 8 ಬೈಕ್‌ಗಳನ್ನ ಜಪ್ತಿ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.