ಇಬ್ಬರು ಸೇರಿಕೊಂಡು ರಾಘವೇಂದ್ರ ಎಂಬಾತನ್ನು ಕೊಲೆ ಮಾಡಿ ಜೆ.ಪಿ. ನಗರದ ಬಳಿಯ ವರುಣ ನಾಲೆಗೆ ಎಸೆದಿದ್ದು, ಶವ ಪತ್ತೆಯಾಗಿದೆ ಎಂದು ಮೃತರ ಪೋಷಕರು ದೂರು ನೀಡಿದ್ದರು. 

ಮೈಸೂರು(ಮೇ.31): ಕ್ಷುಲ್ಲಕ ಕಾರಣಕ್ಕೆ ಯುವಕನ್ನು ಕೊಲೆ ಮಾಡಿ ವರುಣ ನಾಲೆಗೆ ಎಸೆದಿದ್ದ ಇಬ್ಬರು ಆರೋಪಿಗಳನ್ನು ಜಯಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮೈಸೂರು ತಾಲೂಕಿನ ಮಾವಿನಹಳ್ಳಿ ನಿವಾಸಿ ಚಂದ್ರು ಮತ್ತು ರವಿ ಎಂಬವರೇ ಬಂಧಿತ ಆರೋಪಿಗಳು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಇಬ್ಬರು ಸೇರಿಕೊಂಡು ಅದೇ ಗ್ರಾಮದ ನಿವಾಸಿ ರಾಘವೇಂದ್ರ(33) ಎಂಬಾತನ್ನು ಕೊಲೆ ಮಾಡಿ ಜೆ.ಪಿ. ನಗರದ ಬಳಿಯ ವರುಣ ನಾಲೆಗೆ ಎಸೆದಿದ್ದು, ಶವ ಪತ್ತೆಯಾಗಿದೆ ಎಂದು ಮೃತರ ಪೋಷಕರು ದೂರು ನೀಡಿದ್ದರು. 

ಕೊಲೆಗಾರನನ್ನು ಒಂದು ವರ್ಷದಲ್ಲೇ ಕಣ್ಣಮುಂದೆ ತಂದು ನಿಲ್ಲಿಸುತ್ತೇನೆ..ನಿಜವಾಯ್ತು ವರ್ತೆ ಪಂಜುರ್ಲಿ ನುಡಿ!

ಈ ಹಿನ್ನೆಲೆಯಲ್ಲಿ ಜಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಇಬ್ಬರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.