Asianet Suvarna News Asianet Suvarna News

ಬೆಂಗಳೂರು: ಪ್ರೇಮಿ ಜತೆ ಇರುವಾಗ್ಲೆ ಸಿಕ್ಕಿ ಬಿದ್ದ ಪತ್ನಿ, ಗಂಡನ ಕತ್ತು ಹಿಸುಕಿ ಕೊಂದ ಹೆಂಡ್ತಿ, ಪ್ರಿಯಕರ..!

ಹಗದೂರು ನಿವಾಸಿ ತೇಜಸ್ವಿನಿ ಮತ್ತು ಈಕೆಯ ಪ್ರಿಯಕರ ಗಜೇಂದ್ರ ಬಂಧಿತರು. ಆರೋಪಿಗಳು ಆ.9ರಂದು ಮಧ್ಯಾಹ್ನ ಮಹೇಶ್ ನನ್ನು ಕೊಲೆಗೈದಿದ್ದರು. ಈ ಸಂಬಂಧ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. 
 

two arrested for murder case in bengaluru grg
Author
First Published Aug 11, 2024, 9:53 AM IST | Last Updated Aug 11, 2024, 9:53 AM IST

ಬೆಂಗಳೂರು(ಆ.11): ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯ ಕುತ್ತಿಗೆ ಹಿಸುಕಿ ಕೊಲೆಗೈದಿದ್ದ ಪತ್ನಿ ಹಾಗೂ ಈಕೆಯ ಪ್ರಿಯಕರನನ್ನು ವೈಟ್ ಫೀಲ್ಡ್ ಠಾಣೆ ಪೊಲೀಸರು ಬಂಧಿದ್ದಾರೆ. ಹಗದೂರು ನಿವಾಸಿ ತೇಜಸ್ವಿನಿ(28) ಮತ್ತು ಈಕೆಯ ಪ್ರಿಯಕರ ಗಜೇಂದ್ರ (36) ಬಂಧಿತರು. ಆರೋಪಿಗಳು ಆ.9ರಂದು ಮಧ್ಯಾಹ್ನ ಮಹೇಶ್ ನನ್ನು (36) ಕೊಲೆಗೈ ದಿದ್ದರು. ಈ ಸಂಬಂಧ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ವಿವರ: 

ಹಾಸನ ಮೂಲದ ಮಹೇಶ್ ಮತ್ತು ತೇಜಸ್ವಿನಿ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದರು. ವೈಟ್‌ಫೀಲ್ಡ್‌ನ ಹಗದೂರಿನ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಮಹೇಶ್ ಆಟೋ ಚಾಲಕನಾಗಿದ್ದರೆ, ಪತ್ನಿ ತೇಜಸ್ವಿನಿ ಖಾಸಗಿ ಫೈನಾನ್ಸ್‌ನಲ್ಲಿ ಸಾಲ ವಸೂಲಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ, ಕಳೆದ ವರ್ಷದಿಂದ ದಂಪತಿ ನಡುವೆ ಕೌಟುಂಬಿಕ ವಿಚಾರಕ್ಕೆ ಗಲಾಟೆ ಆಗುತ್ತಿತ್ತು.

ಬೆಂಗಳೂರು: ಸ್ನೇಹಿತ ಜತೆ ಪತ್ನಿ ಅನೈತಿಕ ಸಂಬಂಧ, ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಹತ್ಯೆ..!

ಈ ನಡುವೆ ತೇಜಸ್ವಿನಿ, ತಾನು ಕೆಲಸ ಮಾಡುವ ಫೈನಾನ್ಸ್ ಕಂಪನಿಯಲ್ಲಿ ಗಜೇಂದ್ರ ಎಂಬಾತನ ಜತೆಗೆ ಸಲುಗೆ ಬೆಳೆಸಿಕೊಂಡು ಬಳಿಕ ಅಕ್ರಮ ಸಂಬಂಧ ಇರಿಸಿಕೊಂಡಿ ದ್ದಳು. ಈ ವಿಚಾರ ಮಹೇಶ್ ಗೊತ್ತಾಗಿ ತೇಜಸ್ವಿಗೆ ಜಸ್ಟಿಗೆ ಬುದ್ದಿವಾದ ಹೇಳಿದ್ದಾನೆ. ಇನ್ನು ಮುಂದೆ ಆತನ ಸಹವಾಸಕ್ಕೆ ಹೋಗದಂತೆ ಎಚ್ಚರಿಕೆ ಸಹ ನೀಡಿದ್ದಾನೆ. ಗಜೇಂದ್ರನಿಗೂ ಕರೆ ಮಾಡಿ ಪತ್ನಿಯ ಸಹವಾಸಕ್ಕೆ ಬಾರದಂತೆ ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ.

ಪ್ರಿಯಕರನ ಜತೆಗೆ ಸಿಕ್ಕಿಬಿದ್ದ ತೇಜಸ್ವಿನಿ: 

ಆ.9ರ ಬೆಳಗ್ಗೆ ಮಹೇಶ್ ಕೆಲಸಕ್ಕೆ ತೆರಳಿದ್ದ ವೇಳೆ ತೇಜಸ್ವಿನಿ ತನ್ನ ಪ್ರಿಯಕರ ಗಜೇಂದ್ರನನ್ನು ಮನೆಗೆ ಕರೆಸಿಕೊಂಡಿದ್ದಳು. ಮಧ್ಯಾಹ್ನ ಮಹೇಶ್ ಮನೆಗೆ ಬಂದಾಗ, , ಪತ್ನಿ ತೇಜಸ್ವಿನಿ ಜತೆ ಮಹೇಶ್ ಇರುವುದನ್ನು ನೋಡಿದ್ದಾನೆ. ಇದರಿಂದ ಕೋಪಗೊಂಡ ಮಹೇಶ್, ಏಕಾಏಕಿ ಪತ್ನಿ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಬಿಡಿಸಲು ಮಧ್ಯೆ ಬಂದ ಗಜೇಂದ್ರನ ಮೇಲೂ ಮಹೇಶ್ ಹಲ್ಲೆ ಮಾಡಿದ್ದಾನೆ. ಬಳಿಕ ತೇಜಸ್ವಿನಿ ಮತ್ತು ಗಜೇಂದ್ರ ಇಬ್ಬರೂ ಸೇರಿಕೊಂಡು ಮಹೇಶ್‌ನ ಕುತ್ತಿಗೆ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಗಜೇಂದ್ರ ಮನೆಯಿಂದ ಪರಾರಿ ಆಗಿದ್ದಾನೆ.

ಕುಸಿದು ಬಿದ್ದು ಪತಿ ಸಾವು ಎಂದು ನಾಟಕ!

ಬಳಿಕ ಆರೋಪಿ ತೇಜಸ್ವಿನಿ, ಪತಿ ಮಹೇಶ್ ಮನೆ ಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಜೋರಾಗಿ ಚೀರಾಡುತ್ತಾ ಹೈಡ್ರಾಮಾ ಮಾಡಿ ದ್ದಾಳೆ. ಆದರೆ, ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು, ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಪ್ರಿಯಕರನ ಜತೆ ಸೇರಿ ಪತಿಯನ್ನು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿ ದ್ದಾಳೆ. ಬಳಿಕ ಪ್ರಿಯಕರನನ್ನೂ ಬಂಧಿಸಲಾಗಿದೆ. ಈ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios