Asianet Suvarna News Asianet Suvarna News

Bengaluru Crime: ಲಕ್ಷಾಂತರ ರು. ಮೌಲ್ಯದ ತಿಮಿಂಗಿಲ ವಾಂತಿ ಮಾರಾಟ ಯತ್ನ: ಇಬ್ಬರ ಬಂಧನ

*  ಬಂಧಿತರಿಂದ 3 ಕೆ.ಜಿ. 600 ಗ್ರಾಂ ತೂಕದ ಅಂಬರ್‌ಗ್ರೀಸ್‌ ಜಪ್ತಿ 
*  ಹೊರ ರಾಜ್ಯಗಳಿಂದ ಅಂಬರ್‌ ಗ್ರೀಸ್‌ ಖರೀದಿಸಿ ಬೆಂಗಳೂರಿನಲ್ಲಿ ಮಾರಾಟ
*  ಇದರ ಹಿಂದೆ ವ್ಯವಸ್ಥಿತ ಜಾಲ ಕಾರ್ಯ ನಿರ್ವಹಿಸುತ್ತಿರುವ ಸಾಧ್ಯತೆ

Two Arrested For Ambergris Selling in Bengaluru grg
Author
Bengaluru, First Published Jan 29, 2022, 4:57 AM IST

ಬೆಂಗಳೂರು(ಜ.29): ಅಕ್ರಮವಾಗಿ ಅಂಬರ್‌ ಗ್ರೀಸ್‌(ತಿಮಿಂಗಿಲ ವಾಂತಿ) ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು(Police) ಬಂಧಿಸಿದ್ದಾರೆ. ಬನಶಂಕರಿ 2ನೇ ಹಂತದ ನಿವಾಸಿಗಳಾದ ಮೊಹಮ್ಮದ್‌ ರಿಯಾಜ್‌ ಅಹಮ್ಮದ್‌(58) ಮತ್ತು ಮೊಹಮ್ಮದ್‌ ಗೌಸ್‌ (51) ಬಂಧಿತರು. ಆರೋಪಿಗಳಿಂದ ಲಕ್ಷಾಂತರ ರು. ಮೌಲ್ಯದ 3 ಕೆ.ಜಿ. 600 ಗ್ರಾಂ ತೂಕದ ಅಂಬರ್‌ಗ್ರೀಸ್‌(Ambergris) ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಜ.26ರಂದು ಬನಶಂಕರಿ 3ನೇ ಹಂತದ ಬನಗಿರಿ ನಗರದ ವರಸಿದ್ಧಿ ವಿನಾಯಕ ದೇವಾಲಯ ಸಮೀಪದ ವಾಟರ್‌ ಟ್ಯಾಂಕ್‌ ಬಳಿ ಅಂಬರ್‌ ಗ್ರೀಸ್‌ ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ(Arrest). ಆರೋಪಿಗಳು(Accused) ಹೊರ ರಾಜ್ಯಗಳಿಂದ ಅಂಬರ್‌ ಗ್ರೀಸ್‌ ಖರೀದಿಸಿದ್ದು, ನಗರದಲ್ಲಿ(Bengaluru) ಮಾರಾಟಕ್ಕೆ ಬಂದಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಇದರ ಹಿಂದೆ ವ್ಯವಸ್ಥಿತ ಜಾಲ ಕಾರ್ಯ ನಿರ್ವಹಿಸುತ್ತಿರುವ ಸಾಧ್ಯತೆಯಿದೆ. ಹೆಚ್ಚಿನ ತನಿಖೆಯಿಂದ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್‌ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.

Bengaluru Crime: 8 ವರ್ಷದ ಬಾಲಕಿ ಮೇಲೆ ಕಾಮುಕನ ಅಟ್ಟಹಾಸ

ಮಹಾರಾಷ್ಟ್ರದ ಮೂವರು ಮನೆಗಳ್ಳರ ಬಂಧನ

ದಾವಣಗೆರೆ(davanagere):  ಹರಿಹರ, ರಾಣೆಬೆನ್ನೂರು, ಹಾವೇರಿ, ಖಾನಾಪುರ, ನಿಪ್ಪಾಣಿ, ಸಂಕೇಶ್ವರ ಸೇರಿದಂತೆ ವಿವಿಧೆಡೆ ಮನೆಗಳ್ಳತನ ಮಾಡುತ್ತಿದ್ದ ಮಹಾರಾಷ್ಟ್ರ(Maharashtra) ಮೂಲದ ಮೂವರು ಆರೋಪಿಗಳನ್ನು ಬಂಧಿಸಿ, 22 ಲಕ್ಷ ರು.ಗೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಹರಿಹರ ಪೊಲೀಸರು ಜಪ್ತು ಮಾಡಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಪೊಲೀಸ್‌ ವರಿಷ್ಠ ಸಿ.ಬಿ.ರಿಷ್ಯಂತ್‌, ಮಹಾರಾಷ್ಟ್ರ ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರು ನಿಪ್ಪಾಣಿ, ಸಂಕೇಶ್ವರ, ಖಾನಾಪುರ, ಹರಿಹರ, ಹಾವೇರಿ, ರಾಣೆಬೆನ್ನೂರಿನಲ್ಲಿ ಬೀಗ ಹಾಕಿದ್ದ ಮನೆಗಳನ್ನೇ ಗುರಿಯಾಗಿಟ್ಟುಕೊಂಡು, ತಮ್ಮ ಕೈಚಳಕ ತೋರುತ್ತಿದ್ದರು ಎಂದರು.

ಮಹಾರಾಷ್ಟ್ರ ಮೂಲಕ ಮೂವರೂ ಕಳ್ಳರ ತಂಡವು(Thieves) ಇದೇ ಮೊದಲ ಸಲ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದೆ. ಇದರೊಂದಿಗೆ 10 ಕಳ್ಳತನ(Theft)  ಪ್ರಕರಣಗಳು ಪತ್ತೆಯಾಗಿವೆ. ಬಂಧಿತರಿಂದ 16.84 ಲಕ್ಷ ಮೌಲ್ಯದ 421 ಗ್ರಾಂ ಚಿನ್ನಾಭರಣ, 2.16 ಲಕ್ಷ ಮೌಲ್ಯದ 3600 ಗ್ರಾಂ ಬೆಳ್ಳಿ ಆಭರಣ, 1 ಲಕ್ಷ ರು. ನಗದು, 7 ಸಾವಿರ ರು. ಮೌಲ್ಯದ ಒಂದು ಪಾಸಿಲ್‌ ಕಂಪನಿ ವಾಚ್‌, 2.85 ಲಕ್ಷ ರು. ಮೌಲ್ಯದ ಮಾರುತಿ ಸುಜುಕಿ ಸ್ವಿಫ್ಟ್‌ ಕಾರು ಸೇರಿದಂತೆ 22.92 ಲಕ್ಷ ಮೌಲ್ಯದ ಸ್ವತ್ತು ಜಪ್ತು ಮಾಡಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ತಿಳಿಸಿದರು.

ಹೆಚ್ಚುವರಿ ಎಸ್ಪಿ ರಾಮಗೊಂಡ ಬಸರಗಿ, ಡಿವೈಎಸ್ಪಿ ಕನ್ನಿಕಾ ಸಕ್ರಿವಾಲ್‌, ಡಿವೈಎಸ್ಪಿ ಬಸವರಾಜ, ರುದ್ರೇಶ, ಹರಿಹರ ವೃತ್ತ ನಿರೀಕ್ಷಕ ಸತೀಶಕುಮಾರ, ಪಿಎಸ್‌ಐ ಸುನಿಲ್‌ ಬಿ.ತೇಲಿ, ಲತಾ ತಾಳೇಕರ್‌, ಮಂಜುನಾಥ ಕಲ್ಲೇದೇವರು, ಯಾಸೀನ್‌ವುಲ್ಲಾ, ನಾಗರಾಜ ಸುಣಗಾರ, ಹನುಮಂತ ಗೋಪನಾಳ್‌, ಶಿವರಾಜ ಇತರೆ ಸಿಬ್ಬಂದಿ ಇದ್ದರು.

OG Kuppam Gang: ಗ್ರಾಹಕರ ಗಮನ ಬೇರೆಡೆ ಸೆಳೆದು ದರೋಡೆ: ಇಬ್ಬರು ಖದೀಮರು ಅಂದರ್‌

ಚಿನ್ನ ಲಪಟಾಯಿಸಿದ ಖದೀಮ ದಂಪತಿ ಬಂಧನ!

ನಂಜನಗೂಡು:  ತಾಲೂಕಿನ ಮೊತ್ತ ಗ್ರಾಮದ ದಂಪತಿಗೆ ಕಡಿಮೆ ಬಡ್ಡಿ ದರದಲ್ಲಿ ಚಿನ್ನದ ಮೇಲೆ ಸಾಲ ಕೊಡಿಸುವ ಆಮಿಷಯೊಡ್ಡಿ ಚಿನ್ನ ಲಪಟಾಯಿಸಿದ ಖದೀಮ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗ್ರಾಮದ ಶಿವಮಣಿ ಹಾಗೂ ಬಸವಣ್ಣ ದಂಪತಿಯನ್ನು ಯಾಮಾರಿಸಿ ಸುಮಾರು 1.75 ಲಕ್ಷ ಮೌಲ್ಯದ 45 ಗ್ರಾಂ ಚಿನ್ನ ಕಸಿದು ಪರಾರಿಯಾಗಿದ್ದ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ಪ್ರಸಾದ್‌ ಹಾಗೂ ಭಾಗ್ಯ ದಂಪತಿ ಬಂಧಿತರು.
ಜ. 24ರಂದು ಮೊತ್ತ ಗ್ರಾಮಕ್ಕೆ ಭೇಟಿ ನೀಡಿದ ಬಂಧಿತ ಭಾಗ್ಯ ಹಾಗೂ ಪ್ರಸಾದ್‌ ದಂಪತಿ ಬ್ಯಾಂಕಿನಲ್ಲಿ ಕಡಿಮೆ ಬಡ್ಡಿ ದರಕ್ಕೆ ಚಿನ್ನದ ಮೇಲೆ ಸಾಲ ನೀಡುವುದಾಗಿ ಶಿವಮಣಿ ಹಾಗೂ ಬಸವಣ್ಣ ದಂಪತಿಯನ್ನು ನಂಬಿಸಿದ್ದಾರೆ. ಸಾಲ ಪಡೆದು ಮನೆ ಕಟ್ಟಿಕೊಳ್ಳಬಹುದೆಂಬ ಆಸೆಯಿಂದ ಇವರ ಮಾತಿಗೆ ತಲೆಯಾಡಿಸಿದ್ದಾರೆ.
 

Follow Us:
Download App:
  • android
  • ios