*   ಕುಖ್ಯಾತ ಓಜಿ ಕುಪ್ಪಂ ತಂಡದ ಇಬ್ಬರ ಬಂಧನ*  10 ದರೋಡೆ ಪ್ರಕರಣಗಳು ಪತ್ತೆ*   ಇನ್ನೂ ಐವರು ಆರೋಪಿಗಳು ಪರಾರಿ 

ಬೆಂಗಳೂರು(ಜ.24): ಬ್ಯಾಂಕ್‌ಗಳ(Bank) ಬಳಿ ಗ್ರಾಹಕರ ಗಮನ ಬೇರೆಡೆ ಸೆಳೆದು ದರೋಡೆ ಮಾಡುತ್ತಿದ್ದ ಕುಖ್ಯಾತ ಓಜಿ ಕುಪ್ಪಂ ತಂಡದ ಇಬ್ಬರು ಸದಸ್ಯರನ್ನು ಕೊತ್ತನೂರು ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.

ಆಂಧ್ರಪ್ರದೇಶದ(Andhra Pradesh) ಚಿತ್ತೂರು ಜಿಲ್ಲೆಯ ಓಜಿ ಕುಪ್ಪುಂ ಗ್ರಾಮದ ಗಿರೀಶ್‌ ಕುಮಾರ್‌(39) ಹಾಗೂ ಷಣ್ಮುಗಂ (26) ಬಂಧಿತರು(Arrest). ಆರೋಪಿಗಳು(Accused) ಇತ್ತೀಚೆಗೆ ಇಂದಿರಾನಗರದ ಎಚ್‌ಡಿಎಫ್‌ಸಿ ಬ್ಯಾಂಕ್‌(HDFC Bank) ಬಳಿ ದರೋಡೆಗೆ ಯತ್ನಿಸುತ್ತಿದ್ದಾಗ ಬೆನ್ನಟ್ಟಿ ಬಂಧಿಸಲಾಗಿದೆ. ಆರೋಪಿಗಳು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ 4.10 ಲಕ್ಷ ರು. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮದುವೆಗೂ ಎರಡು ದಿನ ಮುನ್ನ ಚಾಕು ತೋರಿಸಿ ಬ್ಯಾಂಕ್‌ ದರೋಡೆ ನಡೆಸಿದ ವರ

ಆರೋಪಿಗಳ ಬಂಧನದಿಂದ ಕೊತ್ತನೂರು ಠಾಣೆಯ ಮೂರು, ಮಾರತ್‌ಹಳ್ಳಿ, ಅಮೃತಹಳ್ಳಿ, ಯಲಹಂಕ ಹಾಗೂ ಕೋಲಾರ ಟೌನ್‌ ಠಾಣೆ ವ್ಯಾಪ್ತಿಯ ಏಳು ದರೋಡೆ ಪ್ರಕರಣಗಳು ಪತ್ತೆಯಾಗಿವೆ. ಈ ಗ್ಯಾಂಗ್‌ನ ಐವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬ್ಯಾಂಕ್‌ ಬಳಿ ಹೊಂಚು:

ಓಜಿ ಕುಪ್ಪಂ ತಂಡದ ಈ ದರೋಡೆಕೋರರು(Gangsters) ಬ್ಯಾಂಕ್‌ಗಳ ಬಳಿ ಬಂದು ಗ್ರಾಹಕರ ಸೋಗಿನಲ್ಲಿ ಹಣ ಡ್ರಾ ಮಾಡುವ ವ್ಯಕ್ತಿಗಳ ಚಲನವಲನ ಗಮನಿಸುತ್ತಿದ್ದರು. ಬಳಿಕ ಹಣ ಡ್ರಾ ಮಾಡಿದ ವ್ಯಕ್ತಿಯ ಕಾರು ಅಥವಾ ದ್ವಿಚಕ್ರ ವಾಹನ ಹಿಂಬಾಲಿಸುತ್ತಿದ್ದರು. ಮಾರ್ಗ ಮಧ್ಯೆ ಎಲ್ಲಾದರೂ ವಾಹನ ನಿಲ್ಲಿಸಿ ತೆರಳಿದರೆ, ಆರೋಪಿಗಳು ಹಣ ದರೋಡೆ ಮಾಡಿಕೊಂಡು ಪರಾರಿಯಾಗುತ್ತಿದ್ದರು. ಬ್ಯಾಂಕ್‌ಗಳ ಬಳಿಯೇ ಆರೋಪಿಗಳು ಗ್ರಾಹಕರ ಗಮನ ಬೇರೆಡೆ ಸೆಳೆದು ಕ್ಷಣ ಮಾತ್ರದಲ್ಲಿ ಹಣ(Money) ಎಗರಿಸಿ ಪರಾರಿಯಾಗುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಚೋರರು:

ಕೊತ್ತನೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಒಂದರ ಹಿಂದೆ ಒಂದರಂತೆ ಮೂರು ದರೋಡೆ ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಆರೋಪಿಗಳ ಬಂಧನಕ್ಕೆ ತಂಡ ರಚಿಸಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ಕೆಲ ಪ್ರಕರಣಗಳಲ್ಲಿ ಬ್ಯಾಂಕ್‌ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾ(CCTV) ದೃಶ್ಯಾವಳಿ ಪರಿಶೀಲಿಸಿದಾಗ ಆರೋಪಿಗಳ ಚಹರೆ ಪತ್ತೆಯಾಗಿತ್ತು. ಹೀಗಾಗಿ ಇಂದಿರಾನಗರ ಎಚ್‌ಡಿಎಫ್‌ಸಿ ಬ್ಯಾಂಕ್‌ ಬಳಿ ದರೋಡೆಗೆ ಹೊಂಚಿ ಹಾಕಿ ಕುಳಿತಿದ್ದಾಗ ಪೊಲೀಸರ ಕೈಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ.

ಯಾವುದಿದು ಓಜಿ ಕುಪ್ಪುಂ ಗ್ಯಾಂಗ್‌?

ಓಜಿ ಕುಪ್ಪಂ ಎಂಬುದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಒಂದು ಗ್ರಾಮ. ಈ ಗ್ರಾಮದಲ್ಲಿ ಸಾಕಷ್ಟು ಜನರು ಗುಂಪು ಕಟ್ಟಿಕೊಂಡು ದರೋಡೆ, ಕಳ್ಳತನ ಸೇರಿದಂತೆ ಹಲವು ಅಪರಾಧ ಕೃತ್ಯ ಎಸೆಗುತ್ತಿದ್ದಾರೆ. ಆಂಧ್ರಪ್ರದೇಶ, ತೆಲಂಗಾಣ(Telangana), ಕರ್ನಾಟಕ(Karnataka) ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಆರೋಪಿಗಳು ಅಪರಾಧ ಕೃತ್ಯ ಎಸೆಗಿ ಪರಾರಿಯಾಗಿದ್ದರು. ಅಪರಾಧ(Crime) ಲೋಕದಲ್ಲಿ ಈ ತಂಡಕ್ಕೆ ಓಜಿ ಕುಪ್ಪುಂ ಗ್ಯಾಂಗ್‌ ಎಂದು ಕರೆಯಲಾಗುತ್ತದೆ.

ಬ್ಯಾಂಕ್‌ ದರೋಡೆ ಮಾಡಿದವನ ಸಿನಿಮೀಯ ರೀತಿ ಬಂಧನ

ಹು​ಬ್ಬ​ಳ್ಳಿ: ಹಾಡಹಗಲೇ ಇಲ್ಲಿನ ಕೊಪ್ಪಿಕರ ರಸ್ತೆ ಎಸ್‌ಬಿಐಗೆ(State Bank of India) ಬಂದಾತ ಮ್ಯಾನೇಜರ್‌ ಹಾಗೂ ಕ್ಯಾಶಿಯರ್‌ಗೆ ಏಕಾಏಕಿ ಚೂರಿ ತೋರಿಸಿ ಬೆದರಿಸಿ 6.39 ಲಕ್ಷ ದರೋಡೆ(Robbery) ಮಾಡಿಕೊಂಡು ಪರಾರಿ ಆಗುವಾಗ ಬೆನ್ನಟ್ಟಿದ ಇಬ್ಬರು ಪೊಲೀಸರು(Police) ಆತನನ್ನು ಸಿನಿಮೀಯ ರೀತಿ ಬಂಧಿಸಿದ ಘಟನೆ ಜ.18 ರಂದು ನಡೆದಿತ್ತು. 

Bengaluru Robbery: ಸಾಲ ಕೊಡದ್ದಕ್ಕೆ ಸೋದರತ್ತೆ ಮನೆ ದರೋಡೆ ನಂಬಿಕೆ ದ್ರೋಹಿ..!

ವಿ​ಜ​ಯ​ಪುರ ಮೂ​ಲದ ಪ್ರ​ವೀಣಕು​ಮಾರ್‌ (30) ಆರೋಪಿ. ಮಂಗ​ಳ​ವಾರ ಮ​ಧ್ಯಾಹ್ನ 2.15ರ ಸು​ಮಾ​ರಿಗೆ ಇ​ಲ್ಲಿಯ ಕೊ​ಪ್ಪಿ​ಕರ ರ​ಸ್ತೆಯ ಬ್ಯಾಂಕ್‌ಗೆ ಮಂಕಿ ಕ್ಯಾಪ್‌ ಹಾ​ಕಿ​ಕೊಂಡು ಬಂದ ಪ್ರ​ವೀಣಕು​ಮಾರ್‌ ಕೈ​ಯಲ್ಲಿ ಚೂರಿ ಹಿ​ಡಿದು ಕ್ಯಾ​ಶಿ​ಯರ್‌ ಹಾಗೂ ಮ್ಯಾ​ನೇ​ಜ​ರ್‌ಗೆ ಚಾಕು ತೋ​ರಿಸಿ ಹಣ ಕೊಡುವಂತೆ ಬೆದರಿಸಿದ್ದನು. ಕ್ಯಾಶ್‌ ಕೌಂಟರ್‌ ಇದ್ದೆಡೆ ಕರೆದೊಯ್ದು ಬ್ಯಾಗಿಗೆ 6,39,125 ಹಾಕಿಕೊಂಡು ಬಳಿಕ ಪ​ರಾ​ರಿ​ಯಾ​ಗಲು ಮುಂದಾಗಿದ್ದನು.

ಈ ವೇಳೆ ಬ್ಯಾಂಕ್‌ ಮತ್ತು ಹೊರಭಾ​ಗ​ದಲ್ಲಿ ಸಾ​ರ್ವ​ಜ​ನಿ​ಕರು ತ​ಡೆ​ಯಲು ಮುಂದಾದ ವೇಳೆ ಅ​ವ​ರಿಗೂ ಚಾಕು ತೋರಿಸಿ ಓಡಿದ್ದನು. ಜನತೆ ಬೆನ್ನುಹತ್ತಿದ್ದನ್ನು ಕಂಡ ಟ್ರಾಫಿಕ್‌ ನಿರ್ವಹಣೆ ಮಾಡುತ್ತಿದ್ದ ಸಂಚಾರ ಠಾಣೆ ಪೊ​ಲೀ​ಸ್‌ ಸಿ​ಬ್ಬಂದಿ(Traffic Police) ಉ​ಮೇಶ ಬಂಗಾರಿ ಹಾಗೂ ಗಸ್ತಿನಲ್ಲಿದ್ದ ಉ​ಪ​ನ​ಗರ ಠಾ​ಣೆಯ ಮಂಜು​ನಾಥ ಹಾ​ಲ​ವರ ಕಳ್ಳನನ್ನು(Thief) ಬೆನ್ನತ್ತಿದ್ದರು. ಸುಮಾರು 200 ಮೀ. ಓಡಿ ಆತನನ್ನು ಹಿಡಿದಿದ್ದಾರೆ. ತಕ್ಷಣ ಹಣ ಮತ್ತು ಆತನ ಬಳಿಯಿದ್ದ ಚಾ​ಕು ವಶಕ್ಕೆ ಪಡೆದಿದ್ದರು.