Asianet Suvarna News Asianet Suvarna News

Bengaluru Crime: 8 ವರ್ಷದ ಬಾಲಕಿ ಮೇಲೆ ಕಾಮುಕನ ಅಟ್ಟಹಾಸ

*  ನಂದಿನಿ ಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ
*  ಕೆಲಸಕ್ಕೆ ತೆರಳಿದ್ದ ತಾಯಿ
*  ಏಕಾಂಗಿಯಾಗಿದ್ದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ
 

Rape on 8 Year Old Girl in Bengaluru grg
Author
Bengaluru, First Published Jan 24, 2022, 6:41 AM IST

ಬೆಂಗಳೂರು(ಜ.24):  ಮನೆಯಲ್ಲಿ ಒಂಟಿಯಾಗಿದ್ದ ಎಂಟು ವರ್ಷದ ಬಾಲಕಿಯ(Girl) ಮೇಲೆ ನೆರೆಯ ಮನೆಯ ಕಾಮುಕನೊಬ್ಬ ಲೈಂಗಿಕ ದೌರ್ಜನ್ಯ(Sexual Harassment) ಎಸಗಿರುವ ಅಮಾನವೀಯ ಘಟನೆ ನಂದಿನಿ ಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಾಲಕಿ ತಾಯಿ ನೀಡಿದ ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಪೊಲಿಸರು(Police), ಲಗ್ಗೆರೆ ನಿವಾಸಿ ಆಟೋ ಚಾಲಕ ಅನಿಲ್‌ ಕುಮಾರ್‌(36) ಎಂಬಾತನನ್ನು ಬಂಧಿಸಿದ್ದಾರೆ(Arrest).

ಮಹಿಳೆ ಹಾಗೂ ಆಕೆಯ ಎಂಟು ವರ್ಷದ ಮಗಳು ಲಗ್ಗೆರೆಯಲ್ಲಿ ನೆಲೆಸಿದ್ದಾರೆ. ಗಾರ್ಮೆಂಟ್ಸ್‌ವೊಂದರಲ್ಲಿ ಬಾಲಕಿ ತಾಯಿ ಕೆಲಸ ಮಾಡುತ್ತಾರೆ. ಶನಿವಾರ ಎಂದಿನಂತೆ ತಾಯಿ ಗಾರ್ಮೆಂಟ್ಸ್‌ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಳು. ಸಂಜೆ 7.30ರ ಸುಮಾರಿಗೆ ಮನೆಯಲ್ಲಿ ಬಾಲಕಿ ಏಕಾಂಗಿಯಾಗಿರುವುದನ್ನು ಗಮನಿಸಿದ್ದ ನೆರೆಮನೆ ನಿವಾಸಿಯಾಗಿರುವ ಆರೋಪಿ(Accused), ಬಾಲಕಿಯ ಮನೆಗೆ ಹೋಗಿ ಲೈಂಗಿಕ ದೌರ್ಜನ್ಯ ಎಸೆಗಲು ಮುಂದಾಗಿದ್ದಾನೆ. ಬಾಲಕಿ ಚೀರಾಡಿದರೂ ಬಿಡದ ಆರೋಪಿ ದೌರ್ಜನ್ಯ ಎಸಗಿ ಪರಾರಿಯಾಗಿದ್ದ.

Sexual Harassment : ಮದುವೆಯಾದ ಮಹಿಳೆಯ ಸ್ನಾನದ ವಿಡಿಯೋ ಮಾಡಿಕೊಂಡ ಸಂಬಂಧಿ ಮಾಡಿದ ಕೆಲಸ!

ಇದೇ ವೇಳೆಗೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಿರುವ ತಾಯಿ, ಮನೆ ಒಳಗೆ ಮಗಳು ಚೀರಾಡುತ್ತಿರುವುದು ಕೇಳಿಸಿದೆ. ಬಳಿಕ ಅಳುತ್ತಿದ್ದ ಮಗಳನ್ನು ಸಮಾಧಾನಪಡಿಸಿ ವಿಚಾರಿಸಿದಾಗ ಘಟನೆಯನ್ನು ವಿವರಿಸಿದ್ದಾಳೆ. ಬಳಿಕ ಮಹಿಳೆ(Woman) ಪೊಲೀಸ್‌ ಠಾಣೆಗೆ ಬಂದು ಆರೋಪಿ ವಿರುದ್ಧ ದೂರು(Complaint) ನೀಡಿದ್ದಾರೆ. ಈ ದೂರು ಆಧರಿಸಿ ಪೊಲೀಸರು ಕೂಡಲೇ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆ ಪ್ರಕರಣ ದಾಖಲಿಸಲಾಗಿದೆ. ನಿಯಮದಂತೆ ಬಾಲಕಿ ಹಾಗೂ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪ್ರಾಪ್ತೆ ರೇಪ್‌ ಮಾಡಿ ವಿಡಿಯೋ ಹರಿಬಿಟ್ಟ ದುರುಳರ ಬಂಧನ

ಶಿವಮೊಗ್ಗ(Shivamogga):  ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಬೆದರಿಸಿ ಅತ್ಯಾಚಾರವೆಸಗಿ(Rape) ಸಾಮಾಜಿಕ ಜಾಲತಾಣದಲ್ಲಿ(Social Media) ವಿಡಿಯೋ ಅಪ್‌ಲೋಡ್‌ ಮಾಡಿದ್ದ ಆರೋಪದ ಮೇರೆಗೆ ಐವರನ್ನು ಹೊಸನಗರ ಪೊಲೀಸರು ಬಂಧಿಸಿದ್ದಾರೆ.

ಅಪ್ರಾಪ್ತ ಬಾಲಕಿ ಜ.15ರಂದು ಊರಿಗೆ ತೆರಳಲು ಬಸ್‌ ನಿಲ್ದಾಣದಲ್ಲಿ ನಿಂತಿದ್ದಳು. ಆಕೆಯ ಮನೆಗೆ ಕೆಲಸಕ್ಕೆಂದು ಹೋಗಿ ಪರಿಚಯವಾಗಿದ್ದ ಸಂತೋಷ್‌ ಹಾಗೂ ಸುನಿಲ್‌ ಎಂಬುವರು ಬಾಲಕಿಯನ್ನು ಮಾತನಾಡಿಸಿದ್ದರು. ತಾವೂ ಊರಿಗೆ ಹೋಗುತ್ತಿರುವುದಾಗಿ, ಕರೆದುಕೊಂಡು ಹೋಗುವಾಗಿ ಕಾರಿಗೆ ಹತ್ತಿಸಿಕೊಂಡಿದ್ದರು. ಬಳಿಕ ಬೆದರಿಸಿ ಅತ್ಯಾಚಾರವೆಸಗಿ ವಿಡಿಯೋ ಮಾಡಿಕೊಂಡಿದ್ದರು. ಕೆಲ ದಿನ ಬಳಿಕ ಬಾಲಕಿಯನ್ನು ಲೈಂಗಿಕ ಕ್ರಿಯೆಗೆ ಕರೆದಿದ್ದರು. ಆಕೆ ಬರಲು ನಿರಾಕರಿಸಿದಾಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್‌ಲೋಡ್‌ ಮಾಡಿದ್ದರು. ವಿಡಿಯೋ ಗಮನಿಸಿದ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ, ಸಂತ್ರಸ್ತೆಯ ಹೇಳಿಕೆ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

Rape: ಪುತ್ತೂರಿನಲ್ಲಿ ಪೈಶಾಚಿಕ ಕೃತ್ಯ, ಹೆತ್ತ ತಾಯಿಯನ್ನೇ ಅತ್ಯಾಚಾರಗೈದ ಪುತ್ರ

ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಪುಸಲಾಯಿಸಿ ಕರೆದೊಯ್ದು, ಬೆದರಿಸಿ ಅತ್ಯಾಚಾರ ನಡೆಸಿ, ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಆರೋಪದ ಮೇಲೆ ಐವರು ಆರೋಪಿಗಳನ್ನು ಹೊಸನಗರ ಪೊಲೀಸರು ಬಂಧಿಸಿದ್ದಾರೆ. ಜ. 15ರಂದು ಬಾಲಕಿ ಊರಿಗೆ ತೆರಳಲು ಬಸ್‌ ನಿಲ್ದಾಣದ ಬಳಿ ನಿಂತಿರುವಾಗ, ಈ ಹಿಂದೆ ಬಾಲಕಿಯ ಮನೆಗೆ ಜೆಸಿಬಿ ಕೆಲಸಕ್ಕೆ ಬಂದು ಪರಿಚಯವಾಗಿದ್ದ ಸಂತೋಷ್‌ ಮತ್ತು ಸುನೀಲ್‌ ಎಂಬಿಬ್ಬರು ಬಾಲಕಿಯನ್ನು ಮಾತನಾಡಿಸಿ, ತಾವೂ ಕೂಡ ನಿಮ್ಮ ಊರಿಗೇ ಹೋಗುತ್ತಿದ್ದು, ಕರೆದುಕೊಂಡು ಹೋಗುವುದಾಗಿ ಪುಸಲಾಯಿಸಿ, ಲಾರಿನಲ್ಲಿ ಕರೆದೊಯ್ದು ದಾರಿಯಲ್ಲಿ ಬೆದರಿಸಿ ಅತ್ಯಾಚಾರವೆಸಗಿದ್ದಾರೆ.

ಅತ್ಯಾಚಾರದ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಬಾಲಕಿಯನ್ನು ಬೆದರಿಸಿ ಮತ್ತೆ ಕರೆದಿದ್ದಾರೆ. ಬಾಲಕಿ ಬರಲು ನಿರಾಕರಿಸಿದಾಗ ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪಲೋಡ್‌ ಮಾಡಿದ್ದಾರೆ. ಅಪ್ರಾಪ್ತೆಯ ವಿಡಿಯೋ ಹರಿದಾಡುತ್ತಿರುವ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ನಂತರ ಸಂತ್ರಸ್ತೆ(Victim) ಹೇಳಿಕೆ ಮೇಲೆ ಮತ್ತೊಂದು ದೂರು ದಾಖಲಿಸಿಕೊಂಡು ದುಷ್ಕೃತ್ಯವೆಸಗಿದ ವಾರಂಬಳ್ಳಿಯ ಸುನೀಲ್‌ ಹಾಗೂ ಆಯನೂರು ಗ್ರಾಮದ ಸಂತೋಷ ಎಂಬ ಪ್ರಮುಖ ಆರೋಪಿಗಳ ಜತೆ ಇವರಿಗೆ ಸಹಕಾರ ನೀಡಿದ ಆರೋಪದಡಿ ವಾರಂಬಳ್ಳಿ ಗ್ರಾಮದ ಸಚಿನ್‌, ಸುಬ್ಬ, ರಾಘು ಎಂಬುವವರನ್ನು ಬಂಧಿಸಿದ್ದಾರೆ. ಪೋಕ್ಸೋ ಕಾಯಿದೆಯಡಿ ಕೇಸು ದಾಖಲಿಸಲಾಗಿದೆ.
 

Follow Us:
Download App:
  • android
  • ios