* ಸಿಂಗರ್, ಪೊಲೀಸ್ ಸುಬ್ರಮಣಿ ಪತ್ನಿ ಸಾವಿಗೆ ಟ್ವಿಸ್ಟ್* ಕೊರೋನಾದಿಂದ ಮೃತಪಟ್ಟಿಲ್ಲ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ?* ಕೋಲಾರದಲ್ಲಿ  ವಾಸವಿದ್ದ ವೇಳೆ ಘಟನೆ ನಡೆದಿದೆ* ಕೊರೋನಾ ಪರೀಕ್ಷೆ ನಡೆಸಿದಾಗ ಕೋವಿಡ್ ಪಾಸಿಟಿವ್ ಇರುವುದು ದೃಢ

ಬೆಂಗಳೂರು (ಮೇ 11) ಸರಿಯಾದ ಸಮಯಕ್ಕೆ ವೆಂಟಿಲೇಟರ್ ಬೆಡ್ ಸಿಗದೆ ಖಾಸಗಿ ವಾಹಿನಿಯ ಸರಿಗಮಪ ರಿಯಾಲಿಟಿ ಶೋ ಗಾಯಕ, ಪೊಲೀಸ್ ಸುಬ್ರಮಣಿ ಪತ್ನಿ ನಿಧನರಾಗಿದ್ದಾರೆ ಎಂಬ ಸುದ್ದಿ ಬಂದಿತ್ತು. ಆದರೆ ಈ ಪ್ರಕರಣಕ್ಕೆ ಈಗ ತಿರುವೊಂದು ಸಿಕ್ಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊರೋನಾ ಕಾರಣಕ್ಕೆ ಸುಬ್ರಮಣಿ ಪತ್ನಿ ಮೃತಪಟ್ಟಿಲ್ಲ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹೊರಗೆ ಬಿದ್ದಿದೆ. ಇತ್ತೀಚೆಗೆ ಸುಬ್ರಮಣಿ ಪತ್ನಿ ಕೋಲಾರಕ್ಕೆ ಹೋಗಿದ್ದರು. ಅಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಹೊಸಕೋಟೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂಬ ಮಾಹಿತಿ ಸಿಕ್ಕಿದೆ.

ಬೆಂಗಳೂರು; ಪಿತೃ ದೋಷವಿದೆ ಎಂದ ಡೋಂಗಿ ಜ್ಯೋತಿಷಿ, ಹೆತ್ತವರನ್ನೇ ಕೊಂದ ಬಾಲಕ

ಆದರೆ ಕೊರೋನಾ ಪರೀಕ್ಷೆ ನಡೆಸಿದಾಗ ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿದೆ. ಕೋಲಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎರಡು ದಿನದ ಹಿಂದೆ ತೀವ್ರ ಉಸಿರಾಟದ ಸಮಸ್ಯೆ ಆಗಿತ್ತು. ವೆಂಟಿಲೇಟರ್ ಬೆಡ್ ಸಿಗದೆ ಪರದಾಡಿದ್ದ ಸಿಂಗರ್ ಸುಬ್ರಮಣಿ ಅವರಿಗೆ ಪತ್ನಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಕೊನೆಗೆ ಹೊಸಕೋಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಸೋಮವಾರ ವರದಿಯಾಗಿತ್ತು.