Woman Suicide: ರಾಮನಗರ, ಕಂದಮ್ಮಗಳ ಮುಖವೂ ಕಾಣಲಿಲ್ಲವೇ.. ಗಂಡ ಪ್ರಸಾದ ತರಲಿಲ್ಲವೆಂದು ಸುಸೈಡ್!
* ಪ್ರಸಾದ ತಂದಿಲ್ಲ ಎಂದು ಆತ್ಮಹತ್ಯೆ ಮಾಡಕೊಂಡ ಮಹಿಳೆ
* ತಾಯಿಯ ಆಸರೆ ಕಳೆದುಕೊಂಡ ಕಂದಮ್ಮಗಳು
* ಕ್ಷುಲ್ಲಕ ಕಾರಣಕ್ಕೆ ದುಡುಕಿನ ನಿರ್ಧಾರ ಮಾಡಿದ ತಾಯಿ
* ಗಂಡನ ಭಯಪಡಿಸಲು ಹೋಗಿ ಪ್ರಾಣವನ್ನೇ ಕೊಟ್ಟಳು
ರಾಮನಗರ(ಮಾ. 22) ತಾಯಿಯ(Mother) ಆಸರೆಯಲ್ಲಿ ಜೀವನ ರೂಪಿಸಿಕೊಳ್ಳಬೇಕಿದ್ದ ಮಕ್ಕಳು.. ಅಮ್ಮನ ಆಸರೆಯಲ್ಲೇ ಇದ್ದ ಮಕ್ಕಳು.. ಇತ್ತ ತಾಯಿ ಮಾತ್ರ ಘೋರ ನಿರ್ಧಾರವೊಂದನ್ನು ಮಾಡಿದ್ದಾಳೆ.... ಒಂದು ಕ್ಷುಲ್ಲಕ ವಿಷಯಕ್ಕೆ ತಾಯಿ ನೇಣುಬಿಗಿದು ಆತ್ಮಹತ್ಯೆ (Suicide)ಮಾಡಿಕೊಂಡು ಬಾರದ ಲೋಕಕ್ಕೆ ಹೋಗಿದ್ದಾಳೆ. ಇತ್ತ ಏನೂ ಹರಿಯದ ಕಂದಮ್ಮಗಳು ತಾಯಿಯ ಮಮತೆಯಿಂದ ದೂರವಾಗಿದ್ದಾರೆ.
ಹೌದು.. ಇನ್ನೂ ಕಣ್ಣು ಬಿಡದ ಕಂದ, ಮತ್ತೊಂದು ಕಡೆ ತಾಯಿ ಇಲ್ಲ ಎಂಬ ವಿಷಯವೇ ಅರಿಯದ ಮಕ್ಕಳು ಕರಳು ಹಿಂಡುವ ಈ ದೃಶ್ಯಗಳು ಕಂಡುಬಂದಿದ್ದು, ರಾಮನಗರದ (Ramanagara) ರಾಯರದೊಡ್ಡಿ ವಾರ್ಡ್ ನಲ್ಲಿ,. ಮಂಗಳವಾರ ಶ್ವೇತಾ ಎಂಬ ಗೃಹಿಣಿ ರಾಯರದೊಡ್ಡಿಯ ಬಾಡಿಗೆ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅದು ಕೂಡ ಒಂದು ಕ್ಷುಲ್ಲಕ ಕಾರಣಕ್ಕೆ. ಶ್ವೇತಾಳ ಪತಿ ಶಿವನಂಜ ಹಾಗೂ ಮಗ ಮಹದೇಶ್ವರ ಬೆಟ್ಟಕ್ಕೆ ದೇವಸ್ಥಾನಕ್ಕೆ ಹೋಗಿದ್ದರು. ವಾಪಸ್ ಮನೆಗೆ ಬರುವಾಗ ಪ್ರಸಾದ ತಂದಿಲ್ಲ ಎಂಬ ಒಂದೇ ಕಾರಣಕ್ಕೆ ಪತಿಯ ಜತೆಗೆ ಜಗಳ ತಗೆದಿದ್ಲು ಇದೇ ಕಾರಣಕ್ಕೆ ಶ್ವೇತಾ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಭಂದ ಐಜೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕಾಂಡೋಮ್ ಬಳಸಲ್ಲ ಎಂದಿದ್ದಕ್ಕೆ ಸೆಕ್ಸ್ ನಿರಾಕರಿಸಿದ್ಲು : ಕೊಂದೇ ಬಿಟ್ಟ ಪಾಪಿ !
ಅಂದಹಾಗೇ ಶಿವನಂಜ ಹಾಗೂ ಶೇತ ಪಕ್ಕದ ಮದ್ದೂರು (Maddur) ತಾಲೂಕಿನ ಕೊಪ್ಪ ಗ್ರಾಮದವರು. ಕಳೆದ 8 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ರು. ಕೆಲಸ ಹರಿಸಿ ರಾಮನಗರಕ್ಕೆ ಬಂದು ರಾಯರದೊಡ್ಡಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇದ್ರು. ಈ ದಂಪತಿ ಸಣ್ಣ ಪುಟ್ಟ ವಿಷಯಕ್ಕೆ ಗಲಾಟೆ ಮಾಡಿಕೊಳ್ತಿದ್ರು, ಶಿವನಂಜ ಬೆಳಿಗ್ಗೆ ಬೇಕರಿಗೆ ಕೆಲಸಕ್ಕೆ ಅಂತಾ ಹೋದ್ರೆ ಸಂಜೆ ಬರ್ತಿದ್ದ ತುಂಬಾ ಕಷ್ಟಪಟ್ಟು ಸಂಸಾರ ಸಾಗಿಸುತ್ತಿದ್ದ, ಆದ್ರೆ ಇಂದು ಶ್ವೇತ ಮಕ್ಕಳನ್ನು ಅನಾಥವಾಗಿ ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ
ಒಟ್ಟಾರೆ ಶ್ವೇತಾ ತನ್ನ ನಾಲ್ಕು ಮಕ್ಕಳನ್ನು ಅನಾಥ ಮಾಡಿ ಹೊರಟಿದ್ದಾಳೆ. ಗಂಡನ್ನನ್ನು ಭಯಪಡಿಸಲು ಹೋಗಿ ಚಿರನಿದ್ರೆಗೆ ಜಾರಿದ್ದಾಳೆ.ಮತ್ತೊಂದು ಕಡೆ ತಾಯಿ ಕಳೆದುಕೊಂಡು ಆ ಕಂದಮ್ಮಗಳ ಬದುಕು ಮಾತ್ರ ದುಸ್ತರ.
ಮದುವೆಯಾಗಲಿಲ್ಲವೆಂದು ಸುಸೈಡ್: ಮದುವೆಯಾಗದ ಕಾರಣಕ್ಕೆ ಮನನೊಂದ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ 34 ವರ್ಷದ ವಿನೋದ್ ಆತ್ಮಹತ್ಯೆ ಮಾಡಿಕೊಂಡಿದ್ದ. ಈತ ಮಾ 17 ರಂದು ಬಣ್ಣ ಬಳಿಯೋ ರೂಂ ಒಳಗೆ ಸೇರಿ ವಿಷ ಕುಡಿದಿದ್ದ. ಗಂಭೀರ ಸ್ಥಿತಿಯಲ್ಲಿದ್ದ ಈತನನ್ನು ಚಿಕಿತ್ಸೆಗಾಗಿ ಚಾಮರಾಜನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿನೋದ್ ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ.
ಕ್ಷುಲ್ಲಕ್ಕ ಕಾರರಣಕ್ಕೆ ಕೊಲೆ ನಡೆದೆ ಹೋಗಿತ್ತು: ಮದ್ಯದ ಅಮಲು ಮತ್ತು ಮದ್ಯಕ್ಕಾಗಿ ಹಪಹಪಿಸುವ ಗುಣ ಎಂಥ ಕೆಲಸ ಮಾಡಿಸುತ್ತದೆ ಎನ್ನುವುದಕ್ಕೆ ಇದೊಂದು ದೊಡ್ಡ ಉದಾಹರಣೆ. ಮದ್ಯಪಾನಮಾಡಲು 100 ಕೇಳಿದವನಿಗೆ ತೂಕ ಮಾಡುವ ಬಟ್‌ನಿಂದ ತಲೆಗೆ ಹೊಡೆದು ಕೊಂದು ನಂತರ ಅಪಘಾತದಲ್ಲಿ ಮೃತಪಟ್ಟಿದ್ದ ಎಂದು ಬಿಂಬಿಸಲಾಗಿತ್ತು.
ಬೆಂಗಳೂರಿನ ಕೊಡಿಗೇಹಳ್ಳಿ ತಿಂಡ್ಲು ಸರ್ಕಲ್‌ನಲ್ಲಿದ್ದ ಕರ್ನಾಟಕ ಫೋರ್ಕ್ ಮಟನ್ ಸ್ಟಾಲ್‌ನಲ್ಲಿ ಕೇರಳ ಮೂಲದ ಸಮೀಶ್ ಮಾಂಸ ಕತ್ತರಿಸುವ ಕೆಲಸ ಮಾಡುತ್ತಿದ್ದ. ಆ ಅಂಗಡಿಗೆ ತನ್ನ ಮಾಲೀಕನ ಜತೆ ಆಗಾಗ್ಗೆ ಬರುತ್ತಿದ್ದ ಪ್ರತೀಕ್ ಜತೆ ಸಮೀಶ್‌ಗೆ ಸ್ನೇಹವಾಗಿತ್ತು. ಇದೇ ಗೆಳತನದಲ್ಲಿ ಅ.17ರಂದು ಸುರೇಶ್ ಜತೆ ಅಂಗಡಿಗೆ ಬಂದ ಪ್ರತೀಕ್, ಮದ್ಯ ಸೇವನೆಗೆ .100 ಕೊಡುವಂತೆ ಸಮೀಶ್‌ಗೆ ಕೇಳಿದ್ದಾನೆ. ಆಗ ತನ್ನ ಬಳಿ ಹಣವಿಲ್ಲವೆಂದು ಹೇಳಿದಾಗ ಗೆಳೆಯನಿಗೆ ಪ್ರತೀಕ್ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು ಕೆರಳಿದವ ತೂಕದ ಬಟ್ ನಿಂದ ಹೊಡೆದಿದ್ದ.