ವಾಮಾಚಾರ ಶಂಕೆ: 70 ವರ್ಷದ ಬುಡಕಟ್ಟು ಮಹಿಳೆ ಕೊಂದ ಗ್ರಾಮಸ್ಥ

Crime News: ಒಡಿಶಾದ ಮಯೂರ್‌ಭಂಜ್ ಜಿಲ್ಲೆಯಲ್ಲಿ ಬುಡಕಟ್ಟು ಮಹಿಳೆಯೊಬ್ಬರನ್ನು ವಾಮಾಚಾರ ಮಾಡಿದ ಶಂಕೆಯ ಮೇಲೆ ಗ್ರಾಮಸ್ಥರೊಬ್ಬರು ಹತ್ಯೆಗೈದಿದ್ದಾರೆ 

tribal woman hacked to death over suspicion of performing witchcraft in Odisha mnj

ಒಡಿಶಾ (ಜು. 17): ಒಡಿಶಾದ ಮಯೂರ್‌ಭಂಜ್ ಜಿಲ್ಲೆಯಲ್ಲಿ 70 ವರ್ಷದ ಬುಡಕಟ್ಟು ಮಹಿಳೆಯನ್ನು (Tribal Woman)ವಾಮಾಚಾರ ಮಾಡಿದ ಶಂಕೆಯ ಮೇಲೆ ಗ್ರಾಮಸ್ಥರೊಬ್ಬರು ಕೊಂದಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.  ಮೃತ ಮಹಿಳೆಯನ್ನು ಮಯೂರ್‌ಭಂಜ್ ಜಿಲ್ಲೆಯ ಬ್ಯಾಂಗ್ರಿಪೋಸಿ ಬ್ಲಾಕ್‌ನ ಜಾಮ್ಡಾ ಪೊಲೀಸ್ ಠಾಣೆ ವ್ಯಾಪ್ತಿಯ ಬದಮ್ತೋಲಿಯಾ ಗ್ರಾಮದ ಗಂಗಿ ಜಮುದಾ (Gangi Jamuda) ಎಂದು ಗುರುತಿಸಲಾಗಿದೆ. ಆರೋಪಿಯನ್ನು ಅದೇ ಗ್ರಾಮದ 60 ವರ್ಷದ ಮದನ್ ಪಿಂಗುವಾ (Madan Pingua) ಎಂದು ಗುರುತಿಸಲಾಗಿದೆ.

ಮದನ್ ಪಿಂಗುವಾ ಅವರು ಗಂಗಿ ಜಮುದಾ ವಾಮಾಚಾರ ಮಾಡುತ್ತಿದ್ದಾಳೆ ಎಂದು ಶಂಕಿಸಿದ್ದಾರೆ. ಇದರಿಂದಾಗಿ ಅವರ ಕುಟುಂಬ ಸದಸ್ಯರು ವಿವಿಧ ರೀತಿಯ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಅವರು ನಂಬಿದ್ದರು. ಹೀಗಾಗಿ ಶನಿವಾರ ರಾತ್ರಿ ಬುಡಕಟ್ಟು ಜನಾಂಗದ ವೃದ್ಧ ಮಹಿಳೆ ಮೇಲೆ ಲಾಠಿ ಪ್ರಹಾರ ನಡೆಸಿ ತೀವ್ರವಾಗಿ ಗಾಯಗೊಳಿಸಿದ್ದಾರೆ ಎನ್ನಲಾಗಿದೆ.

ತೀವ್ರವಾಗಿ ಗಾಯಗೊಂಡ ಜಮುದಾ ಅವರನ್ನು ರಾಯರಂಗಪುರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಗಾಯಗೊಂಡ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾಳೆ ಎಂದು ವರದಿಗಳು ತಿಳಿಸಿವೆ. 

ಇದನ್ನೂ ಓದಿ: ಜಮೀನು ವಿವಾದ: ಬುಡಕಟ್ಟು ಮಹಿಳೆಗೆ ಬೆಂಕಿ ಹಚ್ಚಿ ಚಿತ್ರೀಕರಿಸಿದ ದುರುಳರು: ವಿಡಿಯೋ ವೈರಲ್

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಮದನ್ ಪಿಂಗುವಾ ಎಂಬಾತನನ್ನು ಬಂಧಿಸಿದ್ದಾರೆ ಎಂದು ಜಾಮ್ಡಾ ಪೊಲೀಸ್ ಠಾಣೆಯ ಪ್ರಭಾರಿ ಇನ್ಸ್‌ಪೆಕ್ಟರ್ ಕಮಲಾಕಾಂತ ದಾಸ್ ತಿಳಿಸಿದ್ದಾರೆ. ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದು ತನಿಖೆ ಮುಂದುವರೆಸಿದ್ದಾರೆ. 

Latest Videos
Follow Us:
Download App:
  • android
  • ios