Asianet Suvarna News Asianet Suvarna News

ಲೈಂಗಿಕ ದೌರ್ಜನ್ಯಕ್ಕೆ ಸೇಡು: 25 ವರ್ಷದ ಯುವಕನ ಇರಿದು ಕೊಂದ ಮೂವರು ಅಪ್ರಾಪ್ತರು

ಮೂವರು ಹದಿಹರೆಯದ ಆರೋಪಿಗಳಲ್ಲಿ ಒಬ್ಬ ಮೃತ ವ್ಯಕ್ತಿಯಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾನೆ. ಮತ್ತು ಈ ಕೊಲೆಯು ಪ್ರತೀಕಾರದ ಕೃತ್ಯವಾಗಿದೆ ಎಂದು ಆರೋಪಿಗಳು ಒಪ್ಪಿಕೊಂಡಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. 

three minors stab delhi man to death set body on fire to avenge sexual assault ash
Author
First Published Dec 25, 2023, 3:49 PM IST

ದೆಹಲಿ (ಡಿಸೆಂಬರ್ 25, 2023): ಆಗ್ನೇಯ ದೆಹಲಿಯ ಹಜರತ್ ನಿಜಾಮುದ್ದೀನ್ ಪ್ರದೇಶದಲ್ಲಿ ಮೂವರು ಅಪ್ರಾಪ್ತರು ಸೇರಿಕೊಂಡು 25 ವರ್ಷದ ಯುವಕನನ್ನು ಇರಿದು ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ. ನಂತರ ಆ ವ್ಯಕ್ತಿಯ ದೇಹಕ್ಕೆ ಒಣ ಹುಲ್ಲು ಮತ್ತು ಬಟ್ಟೆಯಿಂದ ಬೆಂಕಿ ಹಚ್ಚಲಾಯಿತು ಎಂದೂ ಪೊಲೀಸರು ಭಾನುವಾರ ಮಾಹಿತಿ ನೀಡಿದ್ದಾರೆ.

ಮೂವರು ಹದಿಹರೆಯದ ಆರೋಪಿಗಳಲ್ಲಿ ಒಬ್ಬ ಮೃತ ವ್ಯಕ್ತಿಯಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾನೆ. ಮತ್ತು ಈ ಕೊಲೆಯು ಪ್ರತೀಕಾರದ ಕೃತ್ಯವಾಗಿದೆ ಎಂದು ಆರೋಪಿಗಳು ಒಪ್ಪಿಕೊಂಡಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ. ಡಿಸೆಂಬರ್ 23 ರ ರಾತ್ರಿ ಘಟನೆಯ ಬಗ್ಗೆ ಮಾಹಿತಿ ಬಂದ ನಂತರ ನಾವು 16 ಮತ್ತು 17 ವರ್ಷದೊಳಗಿನ ಮೂವರು ಬಾಲಾರೋಪಿಗಳನ್ನು ಬಂಧಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಇದನ್ನು ಓದಿ: ಪತ್ನಿಗೆ ವರದಕ್ಷಿಣೆ ಕಿರುಕುಳದ ಜತೆ ಅಸ್ವಾಭಾವಿಕ ಲೈಂಗಿಕತೆಗೆ ಒತ್ತಾಯಿಸಿದ ಪ್ರಮುಖ ಉದ್ಯಮಿ!

ವ್ಯಕ್ತಿಗೆ ಇರಿದಿದ್ದು, ಆತನ ಶವವನ್ನು ಖುಸ್ರೋ ಪಾರ್ಕ್ ಬಳಿ ಬಿಸಾಡಲಾಗಿತ್ತು. ಪೊಲೀಸರು ಆರೋಪಿಗಳನ್ನು ನಿಜಾಮುದ್ದೀನ್ ಬಸ್ತಿ ಪ್ರದೇಶದಿಂದ ಬಂಧಿಸಿದ್ದಾರೆ. ತಾವೇ ವ್ಯಕ್ತಿಯನ್ನು ಕೊಲೆ ಮಾಡಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ. ನಂತರ ಪೊಲೀಸ್ ತಂಡಗಳು ಬಾಲಾರೋಪಿಗಳನ್ನು ಸ್ಥಳಕ್ಕೆ ಕರೆತಂದರು ಮತ್ತು ಉದ್ಯಾನದಲ್ಲಿ ಅರ್ಧ ಸುಟ್ಟ ಶವ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.

ಬಳಿಕ ನಾವು ಶವವನ್ನು ಕಸ್ಟಡಿಗೆ ತೆಗೆದುಕೊಂಡಿದ್ದು, ನಂತರ ಏಮ್ಸ್‌ನಲ್ಲಿ ಮರಣೋತ್ತರ ಪರೀಕ್ಷೆಗೆ ಕಳಿಸಿದ್ದೇವೆ. ಬಾಲಾರೋಪಿಗಳ ವಿರುದ್ಧ ಕೊಲೆ ಮತ್ತು ಅಪರಾಧದ ಸಾಕ್ಷ್ಯವನ್ನು ಮರೆಮಾಡಿದ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳು ಡಿಸೆಂಬರ್ 21 ರಂದು ರಾತ್ರಿ ವ್ಯಕ್ತಿಯನ್ನು ಕೊಲೆ ಮಾಡಿ ದೇಹವನ್ನು ಒಣ ಹುಲ್ಲು ಮತ್ತು ಬಟ್ಟೆಯಿಂದ ಸುಟ್ಟು ಹಾಕಲು ಪ್ರಯತ್ನಿಸಿದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ ಎಂದು ತನಿಖಾಧಿಕಾರಿಗಳು ಹೇಳಿದರು.

ಕ್ಲಾಸ್‌ನಲ್ಲಿ ವಿದ್ಯಾರ್ಥಿನಿಯರ ಡೇಟಿಂಗ್ ಪ್ರೊಫೈಲ್‌ ಪ್ರದರ್ಶಿಸಿದ ವಿವಿ ಪ್ರಾಧ್ಯಾಪಕಿ: ಕೇಸ್‌ ದಾಖಲು

ನಾವು ಕೊಲೆಗೆ ಬಳಸಿದ ಆಯುಧ, ಕಲ್ಲುಗಳು ಮತ್ತು ದೊಣ್ಣೆಯನ್ನು ವಶಪಡಿಸಿಕೊಂಡಿದ್ದೇವೆ. ಮೃತ ವ್ಯಕ್ತಿ ಹಜರತ್ ನಿಜಾಮುದ್ದೀನ್ ಪೊಲೀಸ್ ಠಾಣೆಯ ವ್ಯಾಪ್ತಿಗೆ ಸೇರಿದವರು. ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದೂ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮೃತ ವ್ಯಕ್ತಿಯಿಂದ ಲೈಂಗಿಕ ಶೋಷಣೆಗೆ ಒಳಗಾದ ಆರೋಪಿಗಳಲ್ಲಿ ಒಬ್ಬನಿಂದ ಕೊಲೆ ಯೋಜನೆ ರೂಪಿಸಲಾಗಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. 
 

Follow Us:
Download App:
  • android
  • ios