Asianet Suvarna News Asianet Suvarna News

ಪತ್ನಿಗೆ ವರದಕ್ಷಿಣೆ ಕಿರುಕುಳದ ಜತೆ ಅಸ್ವಾಭಾವಿಕ ಲೈಂಗಿಕತೆಗೆ ಒತ್ತಾಯಿಸಿದ ಪ್ರಮುಖ ಉದ್ಯಮಿ!

2007ರಲ್ಲಿ ಮದುವೆಯಾದ ಕೆಲವೇ ದಿನಗಳಲ್ಲಿ ಬಲವಂತದ ಅಸ್ವಾಭಾವಿಕ ಲೈಂಗಿಕತೆ ಸೇರಿದಂತೆ ಮಾನಸಿಕ ಮತ್ತು ದೈಹಿಕ ಚಿತ್ರಹಿಂಸೆಯನ್ನು ಹೆಂಡತಿ ಎದುರಿಸಲು ಪ್ರಾರಂಭಿಸಿದರು. ಅಲ್ಲದೆ, ವರದಕ್ಷಿಣೆಗಾಗಿ ಕಿರುಕುಳಕ್ಕೊಳಗಾಗಿದ್ದರು ಎಂದೂ ತಿಳಿದುಬಂದಿದೆ.

chhattisgarh durg businessman gets 9 years for forcing unnatural sex on wife ash
Author
First Published Dec 25, 2023, 12:40 PM IST

ರಾಯ್‌ಪುರ (ಡಿಸೆಂಬರ್ 25, 2023): ಪತ್ನಿಯನ್ನು ಅಸ್ವಾಭಾವಿಕ ಲೈಂಗಿಕತೆಗೆ ಒತ್ತಾಯಿಸಿದ್ದಕ್ಕಾಗಿ ಪ್ರಮುಖ ಉದ್ಯಮಿಯೊಬ್ಬರಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿರುವ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ. ಛತ್ತೀಸ್‌ಗಢದ ದುರ್ಗ್‌ನ ತ್ವರಿತ ನ್ಯಾಯಾಲಯವು 9 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು (RI) ವಿಧಿಸಿದೆ.

ಭಿಲಾಯಿ - ದುರ್ಗ ಅವಳಿ ನಗರದ ಪ್ರಮುಖ ಉದ್ಯಮಿಯೊಬ್ಬರಿಗೆ ಈ ಶಿಕ್ಷೆಯಾಗಿದೆ. 2007ರಲ್ಲಿ ಮದುವೆಯಾದ ಕೆಲವೇ ದಿನಗಳಲ್ಲಿ ಬಲವಂತದ ಅಸ್ವಾಭಾವಿಕ ಲೈಂಗಿಕತೆ ಸೇರಿದಂತೆ ಮಾನಸಿಕ ಮತ್ತು ದೈಹಿಕ ಚಿತ್ರಹಿಂಸೆಯನ್ನು ಹೆಂಡತಿ ಎದುರಿಸಲು ಪ್ರಾರಂಭಿಸಿದರು. ಅಲ್ಲದೆ, ವರದಕ್ಷಿಣೆಗಾಗಿ ಕಿರುಕುಳಕ್ಕೊಳಗಾಗಿದ್ದರು ಎಂದೂ ತಿಳಿದುಬಂದಿದೆ.

ಇದನ್ನು ಓದಿ: ಕ್ಲಾಸ್‌ನಲ್ಲಿ ವಿದ್ಯಾರ್ಥಿನಿಯರ ಡೇಟಿಂಗ್ ಪ್ರೊಫೈಲ್‌ ಪ್ರದರ್ಶಿಸಿದ ವಿವಿ ಪ್ರಾಧ್ಯಾಪಕಿ: ಕೇಸ್‌ ದಾಖಲು

ಇದೆಲ್ಲದರಿಂದ ಬೇಸರಗೊಂಡ ಮಹಿಳೆ ತನ್ನ ಅತ್ತೆ ಮಾವನ ಮನೆಯನ್ನು ತೊರೆದು ತನ್ನ ಮಗಳನ್ನು ಒಂಟಿ ತಾಯಿಯಾಗಿ ಬೆಳೆಸಲು ನಿರ್ಧರಿಸಿದರು. ಅವರು 2016 ರಲ್ಲಿ ತನ್ನ ಮಗಳೊಂದಿಗೆ ತನ್ನ ಪೋಷಕರ ಬಳಿಗೆ ತೆರಳಿದರು ಮತ್ತು ಮೇ 7, 2016 ರಂದು ಸುಪೇಲಾ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಲೈಂಗಿಕತೆಗಾಗಿ ಐಪಿಸಿ ಸೆಕ್ಷನ್ 377 ಮತ್ತು ತನ್ನ ಪತಿ ಹಾಗೂ ಆತನ ಹೆತ್ತವರ ವಿರುದ್ಧ ವರದಕ್ಷಿಣೆ ಕಿರುಕುಳಕ್ಕಾಗಿ ಸೆಕ್ಷನ್ 498 ಎ ಅಡಿಯಲ್ಲಿ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಅಪರಾಧದ ಸ್ವರೂಪವನ್ನು ಪರಿಗಣಿಸಿ, ಆರೋಪಿಗೆ ರಿಯಾಯಿತಿ ನೀಡುವುದು ಸಮರ್ಥನೀಯವಲ್ಲ ಎಂದು ನ್ಯಾಯಾಲಯದ ಆದೇಶವು ಹೇಳಿದೆ. ಅವರ ಅಪರಾಧವು ಐಪಿಸಿಯ ಸೆಕ್ಷನ್ 377 ರ ಅಡಿಯಲ್ಲಿ ಬರುತ್ತದೆ. ಹಾಗೂ, ಇದು ಶಿಕ್ಷಾರ್ಹ ಅಪರಾಧವಾಗಿದೆ. ಅವರಿಗೆ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಅಡಿಯಲ್ಲಿ ಒಂದು ವರ್ಷದ ಶಿಕ್ಷೆ ಮತ್ತು 1,000 ರೂ. ದಂಡವನ್ನೂ ವಿಧಿಸಲಾಗದೆ. ಒಟ್ಟಾರೆ, 9 ವರ್ಷ ಶಿಕ್ಷೆಯನ್ನು ಏಕಕಾಲಕ್ಕೆ ಎದುರಿಸಬೇಕು ಎಂದೂ ಕೋರ್ಟ್‌ ಹೇಳಿದೆ.

ಅಕ್ರಮ ಬಾಂಗ್ಲಾದೇಶಿ ವಲಸೆ: ಕೇರಳದಲ್ಲಿ ಎನ್‌ಐಎ ಬಲೆಗೆ ಬೆಂಗಳೂರು ಕಿಂಗ್‌ಪಿನ್‌

ಇನ್ನೊಂದೆಡೆ, ಇದೇ ಆರೋಪದ ಮೇಲೆ ಅವರ ಪೋಷಕರಿಗೂ ತಲಾ 10 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿತ್ತು.

ಕ್ಲಾಸ್‌ನಲ್ಲಿ ವಿದ್ಯಾರ್ಥಿನಿಯರ ಡೇಟಿಂಗ್ ಪ್ರೊಫೈಲ್‌ ಪ್ರದರ್ಶಿಸಿದ ವಿವಿ ಪ್ರಾಧ್ಯಾಪಕಿ: ಕೇಸ್‌ ದಾಖಲು
ಹರಿಯಾಣ ರಾಜ್ಯ ಮಹಿಳಾ ಆಯೋಗದ (ಎಚ್‌ಎಸ್‌ಸಿಡಬ್ಲ್ಯು) ಅಧ್ಯಕ್ಷೆ ರೇಣು ಭಾಟಿಯಾ ನೀಡಿದ ದೂರಿನ ಮೇರೆಗೆ ಹರ್ಯಾಣದ ಸೋನಿಪತ್ ಪೊಲೀಸರು ನಗರದ ಓಪಿ ಜಿಂದಾಲ್ ಗ್ಲೋಬಲ್ ಯೂನಿವರ್ಸಿಟಿಯ ಪ್ರಾಧ್ಯಾಪಕಿ ಸಮೀನಾ ದಳವಾಯಿ ವಿರುದ್ಧ ಕೇಸು ದಾಖಲಿಸಿದ್ದಾರೆ.

ವಿದ್ಯಾರ್ಥಿನಿಯರ ನಮ್ರತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ರೇಣು ಭಾಟಿಯಾ ದೂರು ನೀಡಿದ್ದರು. ಈ ಸಂಬಂಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 509 (ಮಹಿಳೆಯರ ನಮ್ರತೆಗೆ ಧಕ್ಕೆ ಮಾಡುವ ಉದ್ದೇಶ) ಅಡಿಯಲ್ಲಿ ಶುಕ್ರವಾರ ರಾಯ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. 

Follow Us:
Download App:
  • android
  • ios