*  ಸಯ್ಯದ್‌ ಬಾಬಾ, ಕಲೀಂ ಖಾನ್‌ ಮತ್ತು ಸುರೇಶ್‌ ಬಂಧಿತ ಅರೋಪಿಗಳು*  ಆರೋಪಿಗಳಿಂದ 4.14 ಲಕ್ಷ ಮೌಲ್ಯದ 92 ಗ್ರಾಂ ತೂಕದ ಚಿನ್ನದ ಗಟ್ಟಿ ಜಪ್ತಿ *  ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸಿದಾಗ ಆರೋಪಿಗಳ ಮುಖಚಹರೆ ಪತ್ತೆ

ಬೆಂಗಳೂರು(ಜ.05):  ಜನದಟ್ಟಣೆ ಪ್ರದೇಶದಲ್ಲಿ ವ್ಯಕ್ತಿಯೊಬ್ಬರ ಜೇಬು ಕತ್ತರಿಸಿ ಚಿನ್ನಾಭರಣ(Gold) ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಸಿಟಿ ಮಾರ್ಕೆಟ್‌ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ. ಜೆ.ಜೆ.ನಗರದ ಸಯ್ಯದ್‌ ಬಾಬಾ, ಕಲೀಂ ಖಾನ್‌ ಮತ್ತು ಸುರೇಶ್‌ ಬಂಧಿತರು(Arrest). ಆರೋಪಿಗಳಿಂದ .4.14 ಲಕ್ಷ ಮೌಲ್ಯದ 92 ಗ್ರಾಂ ತೂಕದ ಚಿನ್ನದ ಗಟ್ಟಿಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಡಿ.21ರಂದು ಸಂಜೆ ಚಿನ್ನದ ವ್ಯಾಪಾರಿ ಶೇಖ್‌ ಹಬೀವುಲ್ಲಾ, ಹಾಲ್‌ ಮಾರ್ಕ್ ಹಾಕಿಸಿಕೊಳ್ಳಲು 92 ಗ್ರಾಂ ಚಿನ್ನಾಭರಣವನ್ನು ಚಿಕ್ಕ ಬಾಕ್ಸ್‌ನಲ್ಲಿ ಹಾಕಿಸಿಕೊಂಡು ಆ ಬಾಕ್ಸನ್ನು ಪ್ಯಾಂಟ್‌ ಜೇಬಿನಲ್ಲಿ ಇರಿಸಿಕೊಂಡು ಅವೆನ್ಯೂ ರಸ್ತೆಯಲ್ಲಿ ಹೋಗುತ್ತಿದ್ದರು. ಆ ರಸ್ತೆಯಲ್ಲಿ ಜನದಟ್ಟಣೆ ಹೆಚ್ಚಿದ್ದರಿಂದ ಆರೋಪಿಗಳು ಬ್ಲೇಡ್‌ನಿಂದ ಹಬೀವುಲ್ಲಾ ಅವರ ಜೇಬಿಗೆ ಕತ್ತರಿ ಹಾಕಿ ಚಿನ್ನಾಭರಣವಿದ್ದ ಬಾಕ್ಸ್‌ ಎಗರಿಸಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Murder Case: ಹೆಂಡತಿ ಜೊತೆ ಅನೈತಿಕ ಸಂಬಂಧ, ಫೈನಾನ್ಸ್‌ ಮಾಲೀಕನ ಹತ್ಯೆ

ಅವೆನ್ಯೂ ರಸ್ತೆಯ ಸಿಸಿಟಿವಿ ಕ್ಯಾಮರಾಗಳ(CC Camera) ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸಿದಾಗ ಆರೋಪಿಗಳ ಮುಖಚಹರೆ ಪತ್ತೆಯಾಗಿತ್ತು. ಈ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಕದ್ದ ಚಿನ್ನಾಭರಣಗಳನ್ನು ಕರಗಿಸಿ ಗಟ್ಟಿಮಾಡಿ ಮಾರಾಟ ಮಾಡುತ್ತಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಆರೋಪಿಗಳು ಈ ಹಿಂದೆ ನಗರದಲ್ಲಿ ಹಲವು ಅಪರಾಧ(Crime) ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿರುವುದರಿಂದ ವಿಚಾರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ರಮ ಮದ್ಯ ವಶ: ಆರೋಪಿ ಬಂಧನ

ಸುಳ್ಯ: ಜೂನಿಯರ್‌ ಕಾಲೇಜು ಬಳಿಯ ಮನೆಯೊಂದರ ಸಮೀಪ ಜೀಪಿನಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 53, 700 ರು. ಮೌಲ್ಯದ ಮದ್ಯವನ್ನು(Alcohol) ಸುಳ್ಯ(Sullia) ಪೊಲೀಸರು ವಶಪಡಿಸಿಕೊಂಡ ಘಟನೆ ನಡೆದಿದೆ. ಆರೋಪಿ ಡಿನೋಹಿ ಎಂಬುವರನ್ನು ಪೊಲೀಸರು ಸೆರೆಹಿಡಿದಿದ್ದು, ಉಳಿದ ಇಬ್ಬರು ಆರೋಪಿಗಳಾದ ಜ್ಞಾನಪ್ರಕಾಶ್‌ ಅಲಿಯಾಸ್‌ ಸಲಾಂ ಹಾಗೂ ಡಯಾನ ಎಂಬವರು ತಪ್ಪಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿ ಡಿನೋಹಿ ಎಂಬವರನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದರೆಂದು ತಿಳಿದುಬಂದಿದೆ. ಬಂಧಿತನಿಂದ 172. 800 ಎಂ ಎಲ್‌ ಮದ್ಯದ 20 ಬಾಕ್ಸ್‌, ಹಾಗೂ ಒಂದು ಜೀಪು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

Bengaluru Murder Case: ರೌಡಿ ಜೊತೆ ಅಕ್ರಮ ಸಂಬಂಧ, ಪುತ್ರನೆದುರೇ ಪತ್ನಿಯ ಕೊಲೆ, ಕೊನೆಗೂ ಪತಿ ಅರೆಸ್ಟ್!

ಕಳ್ಳರ ಬಂಧನ: 50 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಹಾಸನ(Hassan): ಅಂತರ ಜಿಲ್ಲಾ ಸುಲಿಗೆ ಮತ್ತು ಕಳ್ಳತನ(Theft) ಮಾಡುತ್ತಿದ್ದ 7 ಜನ ಆರೋಪಿಗಳನ್ನು ಬಂಧಿ​ಸಿ ಅವರಿಂದ 46 ಲಕ್ಷ ಬೆಳೆ ಬಾಳುವ ಚಿನ್ನಾಭರಣ ಹಾಗೂ ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂ​ಧಿಸಿ 4 ಲಕ್ಷದ 38 ಸಾವಿರ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಇನ್ನು ಪತಿಯನ್ನೇ ಕೊಲೆ(Murder) ಮಾಡಿ ಅಪಘಾತವೆಂದು(Accident) ಬಿಂಬಿಸಿದ್ದ ಆರೋಪಿಗಳನ್ನು ಬಂ​ಧಿಸುವಲ್ಲಿ ಜಿಲ್ಲೆಯ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.

ನಗರದ ಜಿಲ್ಲಾ ಪೊಲಿಸ್‌ ವರಿಷ್ಠಾ​ಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಹೊಳೆನರಸೀಪುರ ಪಟ್ಟಣದ ವಿದ್ಯುತ್‌ ನಗರದ ನಿವಾಸಿ ಗೌರಮ್ಮ ಎಂಬುವರು 2021 ಜು.23ರಂದು ಮನೆಯಲ್ಲಿ ಒಬ್ಬರೆ ಇದ್ದಾಗ ಪಾತ್ರೆ ತೊಳೆಯಲು ಮನೆಯಿಂದ ಹೊರಗೆ ಬಂದಾಗ ಮನೆ ಕಾಂಪೌಂಡ್‌ ಗೇಟ್‌ ತೆಗೆದು ಅಪರಿಚಿತರು ಬಂದು ಆಕೆಯ ಕೈಕಾಲು ಕಟ್ಟಿಹಾಕಿ ಸುಮಾರು 40 ಗ್ರಾಂ ಚಿನ್ನದ ಮಾಂಗಲ್ಯ ಸರ ಕಳ್ಳತನ ಮಾಡಿ ಪರಾರಿಯಾಗಿದ್ದರು. ಗೌರಮ್ಮ ಅವರ ದೂರಿನ ಮೇರೆಗೆ ಹೆಚ್ಚುವರಿ ಪæäಲೀಸ್‌ ಅಧಿ​ಕ್ಷಕರಾದ ನಂದಿನಿ ಮೇಲು ಉಸ್ತುವಾರಿಯಲ್ಲಿ ತನಿಖೆ ನಡೆಸಿ 7 ಜನ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.