Murder Case: ಹೆಂಡತಿ ಜೊತೆ ಅನೈತಿಕ ಸಂಬಂಧ, ಫೈನಾನ್ಸ್‌ ಮಾಲೀಕನ ಹತ್ಯೆ

*  ಫೈನಾನ್ಸ್‌ ಮಾಲೀಕ ಮೆಹಬೂಬ್‌ಅಲಿ ಜಮಖಂಡಿ ಕೊಲೆ ರಹಸ್ಯ
*  ಹಣಕಾಸಿನ ವ್ಯವಹಾರ, ಅನೈತಿಕ ಸಂಬಂಧ ಕೊಲೆಗೆ ಕಾರಣ
*  ಮೆಹಬೂಬ್‌ಅಲಿ ಕೊಲೆಗೆ ಸಂಚು ರೂಪಿಸಿದ್ದ ಇಬ್ರಾಹಿಂ

Finance Owner Killed For Illicit Relationship at Mundgod in Uttara Kannada grg

ಮುಂಡಗೋಡ(ಡಿ.03):  ತಾಲೂಕಿನ ಹನುಮಾಪುರ-ಅಂದಲಗಿ ಮಾರ್ಗ ಮಧ್ಯದ ಕಲ್ಲೊಳ್ಳಿ ಸೇತುವೆ ಕೆಳಗಿನ ಹಳ್ಳದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ(Death) ಫೈನಾನ್ಸ್‌ ಮಾಲೀಕ ಮೆಹಬೂಬ್‌ಅಲಿ ಜಮಖಂಡಿ ಕೊಲೆ ರಹಸ್ಯವನ್ನು ಭೇದಿಸಿದ ಮುಂಡಗೋಡ ಪೊಲೀಸರು(Police) ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ತಾಲೂಕಿನ ಚವಡಳ್ಳಿ ಗ್ರಾಪಂ ವ್ಯಾಪ್ತಿಯ ಲಕ್ಕೊಳ್ಳಿ ಗ್ರಾಮದ ಇಬ್ರಾಹಿಂ ಮಹ್ಮದಸಾಬ್‌ ಶಿಗ್ಗಾಂವಿ (31) ಶರೀಫ್‌ ಮಹ್ಮದಸಾಬ್‌ ಶಿಗ್ಗಾಂವಿ (38) ಹಾಗೂ ನಾಜೀಯಾಬಾನು ಇಬ್ರಾಹಿಂ ಶಿಗ್ಗಾಂವಿ (26) ಈ ಮೂವರು ಬಂಧಿತ ಆರೋಪಿಗಳು(Accused).

ಶುಕ್ರವಾರ ಸಂಜೆ ಕಲ್ಲೊಳ್ಳಿ ಹಳ್ಳದ ದಡದಲ್ಲಿ ಬೈಕ್‌ನೊಂದಿಗೆ ಮೆಹಬೂಬ್‌ಅಲಿ ಜಮಖಂಡಿ ಮೃತದೇಹ(Deadbody) ಪತ್ತೆಯಾಗಿತ್ತು. ಮೃತದೇಹವನ್ನು ಪರಿಶೀಲಿಸಿದಾಗ ಕೊಲೆ(Murder) ಸಂಶಯ ಮೂಡಿತ್ತು. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ(Investigation) ಕೈಗೊಂಡರು. ಮೃತನ ಹಿನ್ನೆಲೆ ಹಾಗೂ ಆತ ಸಾಯುವ ಕೊನೆಯಲ್ಲಿ ಬಂದ ಕರೆಯನ್ನು ಆಧರಿಸಿ ಕೆಲವರ ವಿಚಾರಣೆ ಆರಂಭಿಸಿದಾಗ ಪ್ರಕರಣದ ಸತ್ಯಾಸತ್ಯತೆ ಹೊರಗೆ ಬಂದಿದೆ.

Sexual Harassment : ಅಕ್ರಮ ಸಂಬಂಧದ ಗುಟ್ಟು ಇಟ್ಟುಕೊಂಡು ಬ್ಲಾಕ್ ಮೇಲ್, ಗ್ಯಾಂಗ್ ರೇಪ್

ಕೊಲೆಯ ಹಿನ್ನೆಲೆ ವಿವರ:

ಆರೋಪಿ ಇಬ್ರಾಹಿಂ ಶಿಗ್ಗಾಂವಿ ಫೈನಾನ್ಸ್‌ ಮಾಲೀಕ ಜಮಖಂಡಿ ಜತೆ ಸೇರಿ ವ್ಯವಹಾರ(Business) ನಡೆಸುತ್ತಿದ್ದ ಎನ್ನಲಾಗಿದ್ದು, ವ್ಯವಹಾರದ ಲಕ್ಷಾಂತರ ರು. ಸ್ವಂತಕ್ಕೆ ಬಳಸಿಕೊಂಡಿದ್ದ. ಸಮಯಕ್ಕೆ ಸರಿಯಾಗಿ ಹಣ ಮರುಪಾವತಿ ಮಾಡದ ಕಾರಣ ಫೈನಾನ್ಸ್‌ ಮಾಲೀಕ ಮೆಹಬೂಬ್‌ಅಲಿ ಫೋನ್‌ ಕರೆ ಮಾಡಿದರೆ ಸ್ವೀಕರಿಸುತ್ತಿರಲಿಲ್ಲ. ಮೂರು ತಿಂಗಳು ಹಿಂದೆ ಹಣ ಕೇಳಲು ಪೋನ್‌ ಮಾಡಿದಾಗ ಇಬ್ರಾಹಿಂನ ಪತ್ನಿ ಕರೆ ಸ್ವೀಕರಿಸಿದ್ದು, ನಿಮ್ಮ ಪತಿ ಕರೆಯನ್ನು ಸ್ವೀಕರಿಸುವುದಿಲ್ಲ, ಹಣ ಪಾವತಿ ಮಾಡುವಂತೆ ನಿಮ್ಮ ಪತಿಗೆ ಹೇಳಿ ಎಂದು ಕೋರಿದ್ದ. ಅಲ್ಲದೆ ಆಕೆಯ ಫೋನ್‌ ನಂಬರ್‌ ಪಡೆದು, ಸಾಲ ಕೇಳುವ ನೆಪದಲ್ಲಿ ಸ್ನೇಹ ಬೆಳೆಸಿಕೊಂಡು, ಮನೆಯಲ್ಲಿ ಯಾರು ಇಲ್ಲದಾಗ ಮನೆಗೆ ಹೋಗಿ ಬರುತ್ತಿದ್ದ. ಈ ವಿಷಯ ತಿಳಿದ ಇಬ್ರಾಹಿಂ, ಪತ್ನಿ ಹಾಗೂ ಮೆಹಬೂಬ್‌ಅಲಿಗೆ ಎಚ್ಚರಿಕೆ ನೀಡಿದ್ದ. ಆದರೂ ಅವರಿಬ್ಬರ ಸಂಬಂಧ ಮುಂದುವರಿದಿತ್ತು ಎನ್ನಲಾಗಿದೆ. ಹೀಗಾಗಿ ಮೆಹಬೂಬ್‌ಅಲಿ ಕೊಲೆಗೆ ಇಬ್ರಾಹಿಂ ಸಂಚು ರೂಪಿಸಿದ. ತನ್ನ ಪತ್ನಿ ಮೂಲಕ ಮೆಹಬೂಬ್‌ಅಲಿಗೆ ಗುರುವಾರ ರಾತ್ರಿ ಪೋನ್‌ ಮಾಡಿಸಿ, ಮನೆಗೆ ಕರೆಯಿಸಿ ಕಬ್ಬಿಣದ ಸುತ್ತಿಗೆಯಿಂದ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿ, ಆನಂತರ ತನ್ನ ಅಣ್ಣ ಶರೀಫ್‌ ಶಿಗ್ಗಾಂವಿ ಸಹಾಯದೊಂದಿಗೆ ಮೃತನ ಬುಲೆಟ್‌ ಮೇಲೆ ಮೃತದೇಹ ತೆಗೆದುಕೊಂಡು ಹೋಗಿ ಹನುಮಾಪುರ-ಅಂದಲಗಿ ಮಾರ್ಗ ಮಧ್ಯದ ಕಳ್ಳೊಳ್ಳಿ ಹಳ್ಳದಲ್ಲಿ ಎಸೆದು ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಡಗೋಡ ಠಾಣೆ ಸಿಪಿಐ ಸಿದ್ದಪ್ಪ ಸಿಮಾನಿ, ಪಿಎಸ್‌ಐ ಎನ್‌.ಡಿ. ಜಕ್ಕಣ್ಣವರ, ಬಸವರಾಜ ಮಬನೂರ, ಪ್ರೊಬೇಷನರಿ ಪಿಎಸ್‌ಐ ಮಲ್ಲಿಕಾರ್ಜುನ, ಗಣಪತಿ ಹುನ್ನಳ್ಳಿ, ಧರ್ಮರಾಜ ನಾಯ್ಕ, ವಿನೋದಕುಮಾರ, ಅರುಣಕುಮಾರ, ಅಣ್ಣಪ್ಪ ಬಡಿಗೇರ, ಶರತ ದೇವಾಳಿ, ರಾಘು ಪಟಗಾರ, ತಿರುಪತಿ ಚೌಡಣ್ಣನವರ, ಮಹೇಶ ಹತ್ತಳ್ಳಿ ಮುಂತಾದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Asianet Suvarna FIR: ಅವಳು ಬೇಕು, ಅವಳ ಮಗಳು ಬೇಕು ಎಂದವ ಹೆಣವಾದ

ಅಕ್ಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದವನ ಕುರ್ಚಿಯಿಂದ ಜಜ್ಜಿ ಹತ್ಯೆ

ವಿವಾಹಿತ ಮಹಿಳೆಯೊಂದಿಗೆ (Woman)ಸಂಬಂಧ (Illicit Relationship) ಹೊಂದಿದ್ದ ಎಂಬ ಕಾರಣಕ್ಕೆ ಮೂವರ ತಂಡವೊಂದು 24 ವರ್ಷದ ಯುವಕನ ಥಳಿಸಿ ಚಾಕುವಿನಿಂದ ಇರಿದು (Murder)ಕೊಂದಿದೆ.  ಇಬ್ಬರು ಆರೋಪಿಗಳನ್ನು ಪೊಲೀಸರು (NewDelhi)ಬಂಧಿಸಿದ ಘಟನೆ ನವದೆಹಲಿಯಲ್ಲಿ ಡಿ.30 ರಂದು ನಡೆದಿತ್ತು.     

ಪೊಲೀಸರ ಪ್ರಕಾರ, ಮೃತನನ್ನು ಹಳೆ ಸೀಮಾಪುರಿಯ ಶಾರುಖ್ ಎಂದು ಗುರುತಿಸಲಾಗಿದೆ. ಆರೋಪಿಗಳಲ್ಲಿ  ಒಬ್ಬನ ಸಹೋದರಿ ಜತೆ ಹತ್ಯೆಗೀಡಾದವ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ.  ಇದೇ ಕಾರಣಕ್ಕೆ ಸರಿಯಾದ ಸಮಯಕ್ಕೆ ಹೊಂಚು ಹಾಕಿ ಸ್ನೇಹಿತರೊಂದಿಗೆ ಸೇರಿ ಹತ್ಯೆ ಮಾಡಿದ್ದಾನೆ. ಈ ಘೋರ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ.
 

Latest Videos
Follow Us:
Download App:
  • android
  • ios