ಹಿಜಾಬ್ ತಿರ್ಪು ನೀಡಿದ ಜಡ್ಜ್‌ಗೆ ಜೀವ ಬೆದರಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ
* ಹಿಜಾಬ್ ತಿರ್ಪು ನೀಡಿದ ಜಡ್ಜ್‌ಗೆ ಜೀವ ಬೆದರಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ
* NIAಗೆ ನೀಡಲು ರಾಜ್ಯ ಸರ್ಕಾರ ಚಿಂತನೆ
* ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜತೆ ಮಾತನಾಡಿದ ಗೃಹ ಸಚಿವ
ವರದಿ: ಶರತ್ ಕಪ್ಪನಹಳ್ಳಿ
ಬೆಂಗಳೂರು, (ಮಾ.22): ಹಿಜಾಬ್ ತಿರ್ಪು (Hijab Verdict) ನೀಡಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ 9Judges) ಜೀವ ಬೆದರಿಕೆ ಹಾಕಿರುವ ಪ್ರಕರಣವನ್ನು ಕರ್ನಾಟಕ ಸರ್ಕಾರ (Karnataka Government) ಗಂಭೀರವಾಗಿ ಪರಿಗಣಿಸಿದೆ.
ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಿದವರು ಯಾರು ?ಅವರ ಹಿಂದೆ ಯಾವ ಸಂಘಟನೆ ಇದೆ ಇದ್ರೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು NIA ಗೆ ವಹಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಹಿಜಾಬ್ ವಿಚಾರದಲ್ಲಿ ನೀಡಿದ ತೀರ್ಪುಗೆ ಕೊಲೆ ಬೆದರಿಕೆ ಹಾಕ್ತಾರೆ ಅಂದ್ರೆ ಇದು ಯಾವ ಸಂದೇಶ ನೀಡಲಿದೆ.ಇದನ್ನ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಎಲ್ಲಾ ರೀತಿಯ ಕ್ರಮಕೈಗೊಳ್ಳಲು ಮುಂದಾಗಿದೆ. ಇದರ ಜೊತೆ NIA ನಿಂದಲ್ಲೂ ತೆನಿಖೆ ನಡೆಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಸಹ ನಡೆಯುತ್ತಿದೆ.
Hijab Verdict: ಜಡ್ಜ್‌ಗಳಿಗೆ ಜೀವ ಬೆದರಿಕೆ ಹಾಕಿದ್ದ ರೆಹಮತ್ ಉಲ್ಲಾ ಖಾಕಿ ವಶಕ್ಕೆ
ಈ ಪ್ರಕರಣವನ್ನ NIA ಗೆ ನೀಡುವ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra), ರಾಜ್ಯ ಸರ್ಕಾರ ಈ ವಿಷಯವನ್ನ ಗಂಭೀರವಾಗಿ ಪರಿಗಣಿಸಿದೆ. ಸಿಟ್ಟಿಂಗ್ ಜಡ್ಜ್ ಮೇಲೆ ಅವರು ಕೊಟ್ಟಂತ ತಿರ್ಪುಗೆ ಕೊಲೆ ಬೆದರಿಕೆ ಹಾಕ್ತಾರೆ ಅಂದ್ರೆ ಏನು ಅರ್ಥ. ಇದನ್ನ ಸಾಮಾನ್ಯವಾಗಿ ಪರಿಗಣಿಸೋದಿಲ್ಲ. ಇದರ ಬಗ್ಗೆ ಬೆಂಗಳೂರಲ್ಲಿ ಒಂದು ಕೇಸ್ ದಾಖಲಾಗಿದೆ. ತಮಿಳುನಾಡಿನಲ್ಲೂ ಕೇಸ್ ದಾಖಲಾಗಿದ್ದು ಇಬ್ಬರನ್ನ ವಶಕ್ಕೆ ಪಡೆಯಲಾಗಿದೆ ಎಂದರು.
ಇನ್ಮೇಲೆ ಇಂಥವರ ಧ್ವನಿ ಬರೆದಿರೋ ರೀತಿ ಕ್ರಮ ಕೈಗೊಳ್ಳುತ್ತೇವೆ. ದೇಶದ ನ್ಯಾಯಂಗ ವ್ಯವಸ್ಥೆಯನ್ನೇ ಮೊಸಕುಗೊಳಿಸುವ ಪ್ರಯತ್ನ ಯಾರು ಮಾಡಬಾರದು. ತೀರ್ಪು ಅವರಿಗೆ ತೃಪ್ತಿ ತಂದಿಲ್ಲ ಅಂದ್ರೆ ಸುಪ್ರೀಂ ಕೋರ್ಟ್ ಗೆ ಹೋಗುವ ಅವಕಾಶ ಇದೆ. ತೀರ್ಪು ಕೊಟ್ಟಿದಕ್ಕೆ ಜೀವ ತಗೀತಿನಿ ಅಂದ್ರೆ ಏನ್ ಅರ್ಥ ಎಂದು ಹೇಳಿದರು.
ನ್ಯಾಯಂಗ ಶಕ್ತಿಯನ್ನ ಯಾರು ಕುಂದಿಸುವ ಪ್ರಯತ್ನ ಮಾಡ್ತಾರೆ ಅಂಥವರ ಶಕ್ತಿಯನ್ನ ನಾವು ಕುಂದಿಸುತ್ತೇವೆ. ಸರ್ಕಾರ ಸುಮ್ಮನೆ ಕುರೋದಿಲ್ಲ, ಅವರ ಮೇಲೆ ಸರಿಯಾದ ಅಕ್ಷನ್ ತಗೆದುಕೊಳ್ಳುತ್ತೇವೆ..ಈ ಪ್ರಕರಣವನ್ನ NIA ಗೆ ಕೊಡೋದಕ್ಕೆ ಸಾಧ್ಯವಾ ಅನ್ನೋದು ಚಿಂತನೆ ಇದೆ.. ಪೊಲೀಸರ ಇದ್ರ ಬಗ್ಗೆ ನಿರ್ಣಯ ತಗೆದುಕೊಳ್ತಾರೆ ಎಂದು ತಿಳಿಸಿದರು.
ಆರೋಪಿಗಳು ತಮಿಳುನಾಡಿನಿಂದ ಬೆಂಗಳೂರಿಗೆ
ತಮಿಳುನಾಡಿನ ಮಧುರೈನಲ್ಲಿ ಹಿಜಾಬ್ ಪ್ರಕರಣ ತೀರ್ಪು ವಿರೋಧಿಸಿ ಭಾಷಣ ಮಾಡಿದ್ದಲ್ಲದೆ ಅವರ ಭಾಷಣದಲ್ಲಿ ತಿರ್ಪು ಪ್ರಕಟಿಸಿದ ಸಿಜೆ ರಿತುರಾಜ್ ಆವಸ್ತೆಗೆ ಜೀವ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಈಗಾಗಲೇ ತಮಿಳುನಾಡು ಪೊಲೀಸರು ರೆಹಮತ್ ಊಲ್ಲಾ ಸೇರಿದಂತೆ ಇಬ್ಬರು ವ್ಯಕ್ತಿಗಳನ್ನ ಬಂದಿಸಿದ್ದಾರೆ.
ಈ ಸಂಬಂಧ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಬಂಧಿತ ಆರೋಪಿಗಳನ್ನ ಬೆಂಗಳೂರಿಗೆ ಕರೆತಂದು ವಿಚಾರಣೆ ಮಾಡಲಿದ್ದಾರೆ. ಈಗಾಗಲೇ ಕೊರ್ಟ್ ನಿಂದ ಬಾಡಿ ವಾರೆಂಟ್ ಪಡೆದು ತಮಿಳುನಾಡಿನತ್ತ ಬೆಂಗಳೂರು ಪೊಲೀಸರು ಹೊರಟಿದ್ದಾರೆ. ಸಿಟ್ಟಿಂಗ್ ಜಡ್ಜ್ ಮೇಲೆ ಜೀವ ಬೆದರಿಕೆ ಹಾಕಿದ್ದರಿಂದ ಬೆಂಗಳೂರಿನಲ್ಲೂ ಅವರ ಮೇಲೆ ಕೇಸ್ ದಾಖಲಾಗಿದೆ. ಹೀಗಾಗಿ ಬೆಂಗಳೂರು ಪೊಲೀಸರು ತಮಿಳುನಾಡಿಗೆ ಹೋಗಿ ಈ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳನ್ನ ಬೆಂಗಳೂರಿಗೆ ಕರೆತಂದು ವಿಚಾರಣೆ ಮಾಡಲಾಗುತ್ತೆ ಎಂದಿದ್ದಾರೆ.
ಜಡ್ಜ್‌ಗಳಿಗೆ ಜೀವ ಬೆದರಿಕೆ ಹಾಕಿದವರ ವಿರುದ್ಧ ಶ್ರೀರಾಮ ಸೇನೆ ದೂರು!
ಶಾಲಾ-ಕಾಲೇಜಿನಲ್ಲಿ ಹಿಜಾಬ್ ಸಂಬಂಧ ತೀರ್ಪು ನೀಡಿದ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳಿಗೆ ಬಹಿರಂಗ ಜೀವ ಬೆದರಿಕೆ ಹಾಕಿರುವ ತಮಿಳುನಾಡು ಮುಸ್ಲಿಂ ಸಂಘಟನೆ ಮುಖಂಡರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಶ್ರೀರಾಮ ಸೇನೆ ಸಂಘಟನೆಯಿಂದ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಶ್ರೀರಾಮಸೇನೆ ಬೆಂಗಳೂರು ನಗರ ಘಟಕದ ಅಧ್ಯಕ್ಷ ಚಂದ್ರಶೇಖರ್ ಅವರು ಈ ದೂರು ನೀಡಿದ್ದಾರೆ. ರಾಜ್ಯದ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸುವ ಕುರಿತಂತೆ ಹೈಕೋರ್ಟ್‌ನ ಮೂವರು ನ್ಯಾಯಮೂರ್ತಿಗಳ ಪೀಠ ಐತಿಹಾಸಿಕ ತೀರ್ಪು ನೀಡಿದೆ. ವಿದ್ಯಾರ್ಥಿಗಳು ಹಿಜಾಬ್ ಧರಿಸಿ ತರಗತಿ ಪ್ರವೇಶ ಮಾಡಬಾರದು ಪೀಠದ ಮೂವರು ನ್ಯಾಯಮೂರ್ತಿಗಳುಆದೇಶದಲ್ಲಿ ತಿಳಿಸಿದ್ದಾರೆ. ಈ ತೀರ್ಪು ಹೊರಬಿದ್ದ ಎರಡೇ ದಿನಕ್ಕೆ ತಮಿಳುನಾಡಿನ ಮಧುರೈನಲ್ಲಿ ತೂಹೀರ್ ಜಮಾತ್ ಸಂಘಟನೆ ಮುಖಂಡರು ಸಾರ್ವಜನಿಕ ಸಭೆಯಲ್ಲಿ ಹಿಜಾಬ್ ಸಂಬಂಧ ತೀರ್ಪು ನೀಡಿದ ನ್ಯಾಯಾಧೀಶರಿಗೆ ಬಹಿರಂಗ ಜೀವ ಬೆದರಿಕೆ ಹಾಕಿದ್ದಾರೆ.