Asianet Suvarna News Asianet Suvarna News

Crime News: ನಿಧಿ ಆಸೆಗಾಗಿ ಐತಿಹಾಸಿಕ ಸಿದ್ದೇಶ್ವರ ದೇಗುಲ ಅಗೆದ ಕಳ್ಳರು!

 ಗ್ರಾಮದ ಐತಿ ಹಾಸಿಕ ಸಿದ್ದೇಶ್ವರ ದೇಗುಲದಲ್ಲಿ ನಿಧಿ ಆಸೆಗಾಗಿ ಕಳ್ಳರು ಗುಂಡಿ ಅಗೆದು ಶೋಧಿಸಿರುವ ಘಟನೆ ನಡೆದಿದೆ. ಇನ್ನೊಂದೆಡೆ ಬಸವಕಲ್ಯಾಣದಲ್ಲಿ ಮನೆಯೊಂದಕ್ಕೆ ನುಗ್ಗಿರುವ ಕಳ್ಳರು ಬೀಗ ಮುರಿದು ಅಲಮಾರಾದಲ್ಲಿದ್ದ 17 ತೊಲೆ 4 ಗ್ರಾಂ. ಅಂದಾಜು ರು.9.63 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳನ್ನು ಕಳುವು ಮಾಡಿದ ಘಟನೆ  ನಡೆದಿದೆ.

Thieves dug historical Siddeshwar temple for treasure in dambala at gadag rav
Author
First Published Jan 12, 2023, 11:50 AM IST

ಡಂಬಳ (ಜ.12) : ಗ್ರಾಮದ ಐತಿ ಹಾಸಿಕ ಸಿದ್ದೇಶ್ವರ ದೇಗುಲದಲ್ಲಿ ನಿಧಿ ಆಸೆಗಾಗಿ ಕಳ್ಳರು ಗುಂಡಿ ಅಗೆದು ಶೋಧಿಸಿರುವ ಘಟನೆ ನಡೆದಿದೆ. ಡಂಬಳ ಗ್ರಾಮದ ಕೋಟೆ, 450 ಎಕರೆ ವಿಸ್ತಾರವುಳ್ಳ ವಿಕ್ಟೋರಿಯಾ ಮಹಾರಾಣಿ ಕೆರೆ ಮತ್ತು ಋುಷಿಮುನಿಗಳು ಜಪಗೈದಿರುವ ಐತಿಹಾಸಿಕ ಜಪದ ಬಾವಿ ಪಕ್ಕದಲ್ಲಿ ಸಿದ್ದೇಶ್ವರ ದೇವಾಲಯವಿದೆ. ಇದೊಂದು ಐತಿಹಾಸಿಕ ದೇಗುಲ. ರಾಜಮಹಾರಾಜರು ಆರಾಧಿಸುತ್ತಿದ್ದರು ಎಂಬ ಇತಿಹಾಸ ಇದೆ.

ದೇವಾಲಯದ ಒಳಭಾಗದಲ್ಲಿ ಲಿಂಗ ಹಾಗೂ ಮುಂದಿನ ಆವರಣದಲ್ಲಿ ನಂದಿಯ ಮೂರ್ತಿ ಇವೆæ. ನಿಧಿಗಳ್ಳರು ಮೂರ್ತಿಯ ಕೆಳ ಭಾಗ ಮತ್ತು ಮುಂದಿನ ಮಂಟಪದ ಕೆಳಭಾಗವನ್ನು ಅಗೆದು ನಿಧಿ ಹುಡುಕಿದ್ದಾರೆ. ಇದೇ ದೇವಾಲಯದ ಮುಂಭಾಗದಲ್ಲಿ ಕೆಲ ತಿಂಗಳ ಹಿಂದೆ ನಿಧಿ ಆಸೆಗಾಗಿ ದೊಡ್ಡ ಗಾತ್ರದ ಗುಂಡಿ ತೆಗೆದಿದ್ದರು. ಈಗ ಮತ್ತೆ ದೇವಾಲಯದ ಒಳ ಭಾಗದಲ್ಲಿ ಗುಂಡಿ ತೆಗೆದಿದ್ದಾರೆ.

ಹುಬ್ಬಳ್ಳಿಯಲ್ಲಿ ಹೆಚ್ಚಾದ ಕಳ್ಳರ‌ ಕಾಟ: ಒಂದೇ ರಾತ್ರಿ ಮೂರು ಮನೆ ದೋಚಿದ ಖದೀಮರು

ತಕ್ಷಣ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ಮತ್ತು ಸಂಬಂಧಿಸಿದ ಇಲಾಖೆಯವರು ದೇವಾಲಯವನ್ನು ಮರು ನಿರ್ಮಿಸಬೇಕು. ಸಂರಕ್ಷಣೆ ಮಾಡಬೇಕು. ಮುಂಡರಗಿ ಪೊಲೀಸರು ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ನಿಧಿ ಆಸೆಗಾಗಿ ಈ ಐತಿಹಾಸಿಕತೆ ದೇವಾಲಯ ಹಾಳು ಮಾಡಿರುವುದು ಅಕ್ಷಮ್ಯಅಪರಾಧ. ಇದನ್ನು ತಡೆಯಬೇಕು.

ರಾಮಪ್ಪ ಡಂಬಳ, ಗ್ರಾಮಸ್ಥ.

ಮನೆ ಬೀಗ ಮುರಿದು 17 ತೊಲೆ ಬಂಗಾರ ಕಳವು: ಓರ್ವ ಬಂಧನ

ಬಸವಕಲ್ಯಾಣ: ಪಟ್ಟಣದ ಮನೆಯೊಂದರ ಬೀಗ ಮುರಿದ ಕಳ್ಳರು ಅಲಮಾರಾದಲ್ಲಿದ್ದ 17 ತೊಲೆ 4 ಗ್ರಾಂ. ಅಂದಾಜು ರು.9.63 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳನ್ನು ಕಳುವು ಮಾಡಿದ ಘಟನೆ ಜ.7 ಮಧ್ಯ ರಾತ್ರಿ ಜರುಗಿದೆ.

ಪಟ್ಟಣದ ಬುಧವಾರಪೇಟ ಕಾಲೋನಿಯ ಕುಲದೀಪ ಹೇಮಾ ಎಂಬುವವರು ಜ.7ರಂದು ರಾತ್ರಿ ಮನೆಗೆ ಬೀಗ ಹಾಕಿ ಹೊರಗೆ ಹೋಗಿದ್ದಾಗ ಯಾರೋ ಅಪರಿಚಿತರು ಮನೆ ಕಳುವು ಮಾಡಿ ಚಿನ್ನಾಭರಣಗಳನ್ನು ಕಳುವು ಮಾಡಿದ್ದಾರೆ ಎಂದು ಬಸವಕಲ್ಯಾಣ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಎಸ್‌ಪಿ ಹಾಗೂ ಎಎಸ್‌ಪಿ ಹಾಗೂ ಹುಮನಾಬಾದ್‌ ಡಿಎಸ್‌ಪಿ ಮಾರ್ಗದರ್ಶದಲ್ಲಿ ಸಿಪಿಐ ಸುಶೀಲಕುಮಾರ, ಪಿಎಸ್‌ಐ ಅಮರ ಕುಲಕರ್ಣಿ, ರೇಣುಕಾ, ಹಾಗೂ ಇನ್ನಿತರ ಪೊಲೀಸ್‌ ಸಿಬ್ಬಂದಿ ತಂಡ ಘಟನಾ ಸ್ಥಳಕ್ಕೆ ತೆರಳಿ ತನಿಖೆ ನಡೆಸಿದ್ದಾರೆ. 3 ದಿನಗಳ ನಂತರ ಘಟನೆಗೆ ಸಂಬಂಧಿಸಿದಂತೆ ಆರೋಪಿ ಪಟ್ಟಣದ ಬುನಕರ ಕಾಲೋನಿಯ ಸೈಯದ್‌ ಅಜಗರ ಕನ್ನೋಳ್ಳಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಕಳುವಾದ 17 ತೋಲೆ 4 ಗ್ರಾಂ ಚಿನ್ನಾಭರಣ ಪತ್ತೆ ಮಾಡಿದ್ದಾರೆ. 3 ದಿನದಲ್ಲಿ ಪ್ರಕರಣ ಪತ್ತೆ ಮಾಡಿದಕ್ಕೆ ಜಿಲ್ಲಾ ಪೊಲೀಸ್‌ ಬೆರಳಚ್ಚು ಘಟಕ, ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಎಸ್‌ಪಿ ಅವರು ಶ್ಲಾಘಿಸಿದ್ದಾರೆ.

ಅಪಾರ್ಚ್‌ಮೆಂಟ್‌ಗಳಿಗೆ ಈಗ ಶೂ ಕಳ್ಳರ ತಲೆ ನೋವು ಶುರು!

ಬೆಂಗಳೂರು: ನಗರದ ಹೊರಮಾವು ಸಮೀಪದ ಎರಡು ಅಪಾರ್ಚ್‌ಮೆಂಟ್‌ಗಳ ನಿವಾಸಿಗಳಿಗೆ ಶೂಕಳ್ಳನ ತಲೆನೋವು ಶುರುವಾಗಿದ್ದು, ರಾತ್ರಿ ವೇಳೆ ಕಾಂಪೌಂಡ್‌ ಜಿಗಿದು ಅಪಾರ್ಚ್‌ಮೆಂಟ್‌ ಪ್ರವೇಶಿಸಿ ಫ್ಲ್ಯಾಟ್‌ ಹೊರಗೆ ಬಿಟ್ಟಿದ್ದ ಶೂಗಳನ್ನು ಕದ್ದು ಕಿಡಿಗೇಡಿ ಪರಾರಿಯಾಗಿದ್ದಾನೆ.

ರಾಮನಗರ: ಗೋಡನ್ ಬೀಗ ಮುರಿದು ಕಳ್ಳತನ ಮಾಡಿದ್ದ ಖದೀಮನ ಬಂಧನ

ಹೊರಮಾವು ಸಮೀಪದ ನಭಾ ವೈಭವ್‌ ಹಾಗೂ ವಜ್ರ ಅಪಾರ್ಚ್‌ಮೆಂಟ್‌ಗಳಲ್ಲಿ ಶೂ ಕಳ್ಳತನ ನಡೆದಿದ್ದು, ಈ ಸಂಬಂಧ ಟ್ವಿಟರ್‌ನಲ್ಲಿ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಅಪಾರ್ಚ್‌ಮೆಂಟ್‌ ಶೂಗಳನ್ನು ಕದ್ದು ಗೋಣಿ ಚೀಲದಲ್ಲಿ ತುಂಬಿಕೊಂಡು ಕಳ್ಳ ಪರಾರಿಯಾಗುವ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ ಈ ಸಂಬಂಧ ನಿವಾಸಿಗಳು ಯಾರೊಬ್ಬರೂ ಲಿಖಿತ ದೂರು ನೀಡಿಲ್ಲ. ಟ್ವಿಟರ್‌ನ ದೂರು ಆಧರಿಸಿ ಘಟನಾ ಸ್ಥಳಕ್ಕೆ ಹೆಣ್ಣೂರು ಪೊಲೀಸರು ತೆರಳಿ ಪರಿಶೀಲಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Follow Us:
Download App:
  • android
  • ios