Asianet Suvarna News Asianet Suvarna News

ರಾಮನಗರ: ಗೋಡನ್ ಬೀಗ ಮುರಿದು ಕಳ್ಳತನ ಮಾಡಿದ್ದ ಖದೀಮನ ಬಂಧನ

ಕಳೆದ 15 ದಿನಗಳ ಹಿಂದೆ ಖತರ್ನಾಕ್ ಖದೀಮರ ತಂಡ ಬೀಗ ಹೊಡೆದು ಸುಮಾರು 30 ಲಕ್ಷ ಮೌಲ್ಯದ ಪಾನ್ ಮಸಾಲ ಪದಾರ್ಥಗಳನ್ನು ದೋಚಿ ಎಸ್ಕೇಪ್ ಆಗಿದ್ದರು. ಇದೀಗ ಪ್ರಕರಣ‌ಸ ಸಂಬಂಧ ಓರ್ವ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ. 
 

Accused Arrested For Theft Case in Ramanagara grg
Author
First Published Jan 4, 2023, 7:16 PM IST

ವರದಿ- ಜಗದೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ರಾಮನಗರ

ರಾಮನಗರ(ಜ.04): ಅದೊಂದು ಪಾನ್ ಮಸಾಲ,ಹಾಗೂ ತಂಬಾಕು ಪದಾರ್ಥಗಳನ್ನು ಶೇಖರಿಸುವ ಗೋಡನ್,  ಆ ಗೋಡನ್ ನಲ್ಲಿ ಕಳೆದ 15 ದಿನಗಳ ಹಿಂದೆ ಖತರ್ನಾಕ್ ಖದೀಮರ ತಂಡ ಬೀಗ ಹೊಡೆದು ಸುಮಾರು 30 ಲಕ್ಷ ಮೌಲ್ಯದ ಪಾನ್ ಮಸಾಲ ಪದಾರ್ಥಗಳನ್ನು ದೋಚಿ ಎಸ್ಕೇಪ್ ಆಗಿದ್ದರು. ಇದೀಗ ಪ್ರಕರಣ‌ಸ ಸಂಬಂಧ ಓರ್ವ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ. 

ಹೌದು, ರಾಮನಗರ ಟೌನ್ ನ ಬಿಳಗುಂಬ ರಸ್ತೆಯಲ್ಲಿ ಗೋಪಾಲ್ ಸಿಂಗ್ ಎಂಬುವವರಿಗೆ ಸೇರಿದ್ದ ಭವಾನಿ ಪಾನ್ ಮಸಾಲ ಏಜನ್ಸಿಯ ಗೋಡನ್ ನಲ್ಲಿ ಕಳೆದ ಡಿಸೆಂಬರ್ 17 ರಂದು ಗೋಡನ್ ನ ಬೀಗ ಹೊಡೆದು ಸುಮಾರು 30 ಲಕ್ಷ ಮೌಲ್ಯದ ಪಾನ್ ಮಸಾಲ ಪಧಾರ್ಥಗಳನ್ನು ದೋಚಿ ಎಸ್ಕೇಪ್ ಆಗಿರುತ್ತಾರೆ. ಈ ಸಂಬಂಧ ಐಜೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಪೋಲಿಸರು ತನಿಖೆ ನಡೆಸಲಾಗಿ ಆರೋಪಿ ಧನಿಯ ಅಲಿಯಾಸ್ ಧನರಾಮ್ ಎಂಬುವನನ್ನು ಬಂಧಿಸಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದ್ದು, ಕೃತ್ಯಕ್ಕೆ ಬಳಸಿದ್ದ ಕ್ಯಾಂಟರ್ ವಾಹನ ಹಾಗೂ ಕಳ್ಳತನವಾಗಿದ್ದ ಪಾನ್ ಮಸಾಲ ಪದಾರ್ಥಗಳನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.

Yashwanthpur Railway Station: ಡ್ರಮ್‌ನಲ್ಲಿ ಯುವತಿ ಶವ ಪತ್ತೆ: ಬೆಚ್ಚಿಬಿದ್ದ ಪ್ರಯಾಣಿಕರು

ಅಂದಹಾಗೆ ಬಂಧಿತ ಆರೋಪಿ ಧನಿಯ ಅಲಿಯಾಸ್ ಧನರಾಮ್ ರಾಜಸ್ಥಾನ ಮೂಲದವನಾಗಿದ್ದು, ಭವಾನಿ‌ ಪಾನ್ ಶಾಪ್ ನ ಮಾಲೀಕರಾದ ಗೋಪಾಲ್ ಸಿಂಗ್ ಜೊತೆ ಕಳೆದ ಕೆಲ ವರ್ಷಗಳ ಹಿಂದೆ ವ್ಯಾಪಾರ ಮಾಡಿ‌ ಕೈ‌ ಸುಟ್ಟು ಕೊಂಡಿದ್ದರು. ಗೋಪಾಲ್ ಸಿಂಗ್ ಗೋಡೊನ್ ನಲ್ಲಿ ಪಾನ್ ಮಸಾಲ ಇರುವುದನ್ನು ತಿಳಿದುಕೊಂಡಿದ್ದ ಆರೋಪಿ ಧನರಾಮ್ ಹೇಗಾದರೂ ಮಾಡಿ ಗೋಡನ್ ನಲ್ಲಿರುವ ಪಾನ್ ಮಸಾಲ ಪದಾರ್ಥಗಳನ್ನು ಕದ್ದು ಮಾರಾಟ ಮಾಡುವ ಪ್ಲಾನ್ ಮಾಡಿ ಅಂದು ರಾತ್ರಿ ಮೂರ್ನಾಲ್ಕು‌ ಜನರನ್ನು ಕರೆದುಕೊಂಡು ಹೋಗಿ ಗೋಡನ್ ನ ಬೀಗ ಹೊಡೆದು ಸುಮಾರು 30 ಲಕ್ಷ ಮೌಲ್ಯದ ಪದಾರ್ಥಗಳನ್ನು ದೋಚಿ ಚೆನ್ನೈ ನಲ್ಲಿ ಮಾರಾಟ ಮಾಡಲು ಪ್ಲಾನ್ ಮಾಡಿಕೊಂಡಿರುತ್ತಾನೆ. ಅಷ್ಟರಲ್ಲಿ ಪೋಲಿಸರು ಆರೋಪಿಯ‌ನ್ನು ಬಂಧಿಸಿ ಕಳ್ಳತನವಾಗಿದ್ದ ಪಾನ್ ಮಸಾಲ ಪದಾರ್ಥಗಳನ್ನು ಚೆನ್ನೈನಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ, ಇನ್ನೂ ಕೃತ್ಯಕ್ಕೆ ಬಳಸಿದ್ದ ಕ್ಯಾಂಟರ್ ವಾಹನ ಕೂಡ ಕಳ್ಳತನ ಮಾಡಿದ್ದರು ಎಂದು ತಿಳಿದಿದ್ದು, ಎರಡ್ಮೂರು ಕಡೆ ಈ ರೀತಿ ಅಪರಾಧ ಮಾಡಿರುವ ಅನುಮಾನವಿದ್ದು ತನಿಖೆ ನಡೆಸಲಾಗುತ್ತಿದೆ.

ಒಟ್ಟಾರೆ 30 ಲಕ್ಷ ಮೌಲ್ಯದ ಪಾನ್ ಮಸಾಲ ಪದಾರ್ಥಗಳನ್ನು ಕಳ್ಳತನ ಮಾಡಿದ್ದ ಖದೀಮ ಅಂದರ್ ಆಗಿದ್ದು, ಉಳಿದ ಆರೋಪಿಗಳ ಪತ್ತೆಗಾಗಿ ಪೋಲಿಸರು ಬಲೆ ಬೀಸಿದ್ದಾರೆ. 

Follow Us:
Download App:
  • android
  • ios