Asianet Suvarna News Asianet Suvarna News

Bengaluru Police ನಿದ್ದೆ ಕೆಡಿಸಿದ ಕಳ್ಳತನ ಪ್ರಕರಣ: ಪಾಲಿಗ್ರಾಫ್ ಪರೀಕ್ಷೆಗೆ ಮುಂದಾದ ಸಿಲಿಕಾನ್ ಸಿಟಿ ಪೊಲೀಸರು

ಮನೆ ಯಜಮಾನಿ ಮಾತ್ರ ಕಾವ್ಯನೇ ಮಾಡಿದ್ದು ಎಂದು ಬಲವಾದ ಅನುಮಾನ ವ್ಯಕ್ತಪಡಿಸುತ್ತಾಳೆ. ಈ ನಿಟ್ಟಿನಲ್ಲಿ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಕೆಲಸದಾಕೆ ಕಾವ್ಯರನ್ನು ಪಾಲಿಗ್ರಾಫ್ ಪರೀಕ್ಷೆಯ ಮಾಡಲು‌ ಮುಂದಾಗುತ್ತಾರೆ.

theft case in mahalakshipuram bengaluru polygraph test done on accused ash
Author
First Published Nov 9, 2022, 4:11 PM IST

ಸಿಲಿಕಾನ್ ಸಿಟಿ (Silicon City) ಬೆಂಗಳೂರಿನಲ್ಲಿ (Bengaluru) ಮನೆ ಕಳ್ಳತನ ಪ್ರಕರಣಗಳು (Theft Cases) ಮಾಮೂಲಿಯಾಗಿದೆ. ಆದ್ರೆ ಇಲ್ಲೊಂದು ಮನೆಕಳ್ಳತನ ಪ್ರಕರಣ ಬೆಂಗಳೂರು ಪೊಲೀಸರಿಗೆ (Bengaluru Police) ದೊಡ್ಡ ತಲೆ ನೋವಾಗಿದೆ. ಏನಿದು ಪೊಲೀಸರಿಗೆ ತಲೆನೋವಾದ ಮನೆಕಳ್ಳತನ ಪ್ರಕರಣ, ಅದ್ರಲ್ಲಿ ಅಂತದ್ದು ಏನಿದೆ ನೋಡಿ. 

ಮಹಾಲಕ್ಷ್ಮೀ ಲೇಔಟ್ ಠಾಣಾ (Mahalakshmi Layout Police Station) ವ್ಯಾಪ್ತಿಯಲ್ಲಿಯಲ್ಲಿರುವ  ಮಹಾಲಕ್ಷ್ಮೀಪುರಂನಲ್ಲಿರುವ ವರಲಕ್ಷ್ಮೀ ಎಂಬುವವರ ಮನೆಯಲ್ಲಿ ಇದೇ ವರ್ಷ ಜನವರಿಯಲ್ಲಿ ಮನೆಕಳ್ಳತನವಾಗಿರುತ್ತದೆ. ಮನೆಯಲ್ಲಿರುವ ಸುಮಾರು  24 ಲಕ್ಷ ಮೌಲ್ಯದ ಚಿನ್ನಾಭರಣ (Gold Ornaments) ಹಾಗೂ‌‌ ನಗದು (Cash) ಕಳ್ಳತನವಾಗಿರುತ್ತದೆ. ನಂತರ ಈ ಸಂಬಂಧ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ವರಲಕ್ಷ್ಮೀ ಪ್ರಕರಣ ದಾಖಲು ಮಾಡ್ತಾರೆ.

ಇದನ್ನು ಓದಿ: Bengaluru Crime: ಒಂದೇ ಅಂಗಡಿಗೆ ಪದೇ ಪದೇ ಹೋಗಿ ಚಿನ್ನ ಕದ್ದ ಕಳ್ಳಿ

ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಕಳ್ಳರ ಸುಳಿವು ಮಾತ್ರ ಸಿಗಲ್ಲ. ಹಾಗಾಗಿ ಎಲ್ಲಾ ಅಯಾಮದಲ್ಲಿ ತನಿಖೆ‌ ಮಾಡಿ ಪೊಲೀಸರು ಸುಮ್ಮನಾಗಿದ್ದರು. ಆದ್ರೆ, ಮನೆ ಮಾಲಕಿ ವರಲಕ್ಷ್ಮೀ ಮಾತ್ರ ತನ್ನ ಮನೆಯಲ್ಲಿ ಕೆಲಸದಾಕೆಯಾದ ಕಾವ್ಯ ಮೇಲೆ ಬಲವಾದ ಅನುಮಾನ‌ ವ್ಯಕ್ತಪಡಿಸುತ್ತಾರೆ.

ಎಫ್‌ಐಆರ್‌ನಲ್ಲೂ ಕಾವ್ಯ ಮೇಲೆ ವರಲಕ್ಷ್ಮೀ ಅನುಮಾನ
ಸುಮಾರು ಒಂದೂವರೆ ವರ್ಷಗಳಿಂದ ಮನೆ ಕೆಲಸ ಮಾಡುತ್ತಿದ್ದ ಮಂಡ್ಯ ಜಿಲ್ಲೆಯ ಕಿಲಾರ ಗ್ರಾಮದ ಕಾವ್ಯ ಫಿರ್ಯಾದುದಾರರ ಮನೆಯಲ್ಲಿದ್ದ ನಗದು ಹಣ ಮತ್ತು ಸುಮಾರು 480 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಆಗಾಗ್ಗೆ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಳು. ನಂತರ ಅದನ್ನು ತಮ್ಮ ಸ್ವಂತ ಊರಿನ ಸೇಟು ಅಂಗಡಿಯಲ್ಲಿ ಗಿರವಿ ಹಾಗೂ ಸಂಬಂಧಿ ಬಳಿ ಕೊಟ್ಟಿರುವುದಾಗಿ ತಿಳಿಸಿದ್ದಾಳೆ. ಈ ಹಿನ್ನೆಲೆ ಫಿರ್ಯಾದುದಾರರ ಮನೆಯಲ್ಲಿ ರೂಮಿನಲ್ಲಿಟ್ಟಿದ್ದ ನಗದು ಹಣ 20,000 ರೂ. ಸೇರಿದಂತೆ 24 ಲಕ್ಷ ರೂ. ಬೆಲೆ ಬಾಳುವ 480 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಕಾವ್ಯ ಎಂಬುವಳನ್ನು ಪತ್ತೆ ಮಾಡಿ ಅವಳೀಂದ ನಗದು ಹಣ ಮತ್ತು ಚಿನ್ನದ ಒಡವೆಗಳನ್ನು ಕೊಡಿಸಿಕೊಡಬೇಕೆಂದು ದೂರು ನೀಡಿದ್ದಳು. 

ಇದನ್ನು ಓದಿ: ಡ್ರಗ್ ಕೇಸ್‌ ಕಿಂಗ್‌ ಪಿನ್ ವೀರೇನ್ ಖನ್ನಾಗೆ ಮತ್ತೊಂದು ಶಾಕ್, ಈಗ ಈತ ಬಾಯಿ ಬಿಡ್ಲೆ ಬೇಕು

ಅದ್ರೆ ಪೊಲೀಸರು‌ ಕಾವ್ಯರನ್ನು ವಿಚಾರಣೆ ಮಾಡಿದ ಸಂದರ್ಭದಲ್ಲಿ ಆಕೆಯೇ ಕಳ್ಳತನ ಮಾಡಿದ್ದಾಳೆ ಎಂದು ಯಾವುದೇ ಸಾಕ್ಷ್ಮಿ ಮಾತ್ರ ಸಿಗಲ್ಲ. ಈ ಕಡೆ ಮನೆ ಯಜಮಾನಿ ಮಾತ್ರ ಕಾವ್ಯನೇ ಮಾಡಿದ್ದು ಎಂದು ಬಲವಾದ ಅನುಮಾನ ವ್ಯಕ್ತಪಡಿಸುತ್ತಾಳೆ. ಈ ನಿಟ್ಟಿನಲ್ಲಿ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಕೆಲಸದಾಕೆ ಕಾವ್ಯರನ್ನು ಪಾಲಿಗ್ರಾಫ್ ಪರೀಕ್ಷೆಯ ಮಾಡಲು‌ ಮುಂದಾಗುತ್ತಾರೆ.

ಸಾಮಾನ್ಯವಾಗಿ ಇಂತಹ ಸಣ್ಣ ಸಣ್ಣ ಪ್ರಕರಣದಲ್ಲಿ ಪಾಲಿಗ್ರಾಪ್ ಪರೀಕ್ಷೆಯನ್ನು ಪೊಲೀಸರು ಮಾಡುವುದು‌ ಬಹುತೇಕ ವಿರಳ ಆದರೂ,.ಈ ಪ್ರಕರಣದಲ್ಲಿ ಪೊಲೀಸರು‌ ಕೋರ್ಟ್‌ ಅನುಮತಿ ಪಡೆದು ಕಾವ್ಯಗೆ ಫಾಲಿಗ್ರಾಫ್ ಪರೀಕ್ಷೆಯನ್ನು ಮಾಡಿಸಿದ್ದು ವರದಿಗಾಗಿ ಕಾಯುತ್ತಿದ್ದಾರ ..ಕಳೆದ 7 - 8 ತಿಂಗಳಿಂದ ಪೊಲೀಸರಿಗೆ ತಲೆನೋವಾಗಿರುವ ಈ ಕಳ್ಳತನ‌ ಪ್ರಕರಣಕ್ಕೆ ಪಾಲಿಗ್ರಾಫ್ ಪರೀಕ್ಷೆಯಿಂದ ಉತ್ತರ ಸಿಗುತ್ತಾ ಅಂತಾ ಕಾದುನೋಡಬೇಕಾಗಿದೆ. 

ಇದನ್ನೂ ಓದಿ: Rajasthan ಉದ್ಯಮಿಯ ಕೋಟಿ ಕೋಟಿ ಹಣ ದೋಚಿ ಮಾಲೀಕರ ಕಾರಿನಲ್ಲೇ ಪಲಾಯನಗೈದ ಮನೆ ಕೆಲಸದವರು..!

Follow Us:
Download App:
  • android
  • ios