Asianet Suvarna News Asianet Suvarna News

Rajasthan ಉದ್ಯಮಿಯ ಕೋಟಿ ಕೋಟಿ ಹಣ ದೋಚಿ ಮಾಲೀಕರ ಕಾರಿನಲ್ಲೇ ಪಲಾಯನಗೈದ ಮನೆ ಕೆಲಸದವರು..!

ನಾಲ್ವರು ಮನೆ ಕೆಲಸದವರು ಪ್ರಮುಖ ಆರೋಪಿಗಳು. ಆದರೆ ಈ ಘಟನೆಯಲ್ಲಿ ಹೊರಗಿನವರ ಪಾಲ್ಗೊಳ್ಳುವಿಕೆಯನ್ನು ನಾವು ತಳ್ಳಿಹಾಕಲು ಸಾಧ್ಯವಿಲ್ಲ. ಹಾಗೂ, ಈ ಆರೋಪಿಗಳಲ್ಲಿ ಯಾವುದೇ ಪೊಲೀಸ್ ಪರಿಶೀಲನೆ ನಡೆದಿಲ್ಲ ಮತ್ತು ಎಲ್ಲರೂ ದೆಹಲಿಯಿಂದ ಏಜೆನ್ಸಿ ಮೂಲಕ ಬಂದಿದ್ದಾರೆ ಎಂದೂ ಅಮೃತಾ ದುಹಾನ್ ಹೇಳಿದ್ದಾರೆ. 

4 domestic helps rob rajasthan businessman of crores flee in his car ash
Author
First Published Nov 6, 2022, 10:17 PM IST

ಅನ್ನ ಕೊಟ್ಟವರನ್ನು ದೇವರು ಅಂತ ಕರೆಯುವುದುಂಟು. ಉದ್ಯೋಗ (Job) ಕೊಟ್ಟು ಸಂಬಳ (Salary), ಆಹಾರ ಮುಂತಾದ ಸೌಲಭ್ಯಗಳನ್ನು ಕೊಡುವ ಮಾಲೀಕರನ್ನು ಹಲವು ನೌಕರರು ದೇವರೆಂದೇ ಪರಿಗಣಿಸುತ್ತಾರೆ. ಆದರೆ, ಅನ್ನ ಹಾಕಿದ ಮನೆಗೆ ಕನ್ನ ಹಾಕಿದರು ಅನ್ನೋ ಹಾಗೆ, ರಾಜಸ್ಥಾನದಲ್ಲಿ (Rajasthan) ಉದ್ಯಮಿಯ (Businessman) ಮನೆಯಿಂದ ಕೋಟ್ಯಂತರ ರೂ. ದರೋಡೆ (Theft) ಮಾಡಿದ್ದಾರೆ ನಾಲ್ವರು ಮನೆಕೆಲಸದವರು (Domestic Helps). ಹಣದ ಜತೆಗೆ ಮಾಲೀಕರ ಕಾರನ್ನೂ (Car) ಹೊತ್ತೊಯ್ದಿದ್ದಾರೆ ಎಂದು ತಿಳಿದುಬಂದಿದೆ. ರಾಜಸ್ಥಾನದ ಜೋಧಪುರದಲ್ಲಿ (Jodhpur) ಈ ಘಟನೆ ನಡೆದಿದೆ. 

ಪೊಲೀಸ್ ಪರಿಶೀಲನೆಯಿಲ್ಲದೆ ನೇಮಕಗೊಂಡ ಮನೆಯ ಸಹಾಯಕರಾಗಿದ್ದ ನಾಲ್ವರು ಜೋಧ್‌ಪುರದಲ್ಲಿರುವ ತಮ್ಮ ಉದ್ಯೋಗದಾತರ ಮನೆಯವರಿಗೆ ಮತ್ತು ಬರಿಸುವ ಆಹಾರವನ್ನು ಬಡಿಸಿದ ನಂತರ ದರೋಡೆ ಮಾಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಮಹಿಳೆ ಸೇರಿದಂತೆ ನಾಲ್ವರು ಆರೋಪಿಗಳು ಶನಿವಾರ ಕರಕುಶಲ ಉದ್ಯಮಿ ಅಶೋಕ್ ಚೋಪ್ರಾ ಅವರ ಮನೆಯಿಂದ ಕೋಟ್ಯಂತರ ಮೌಲ್ಯದ ನಗದು ಮತ್ತು ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ. ಅಲ್ಲದೆ, ತಪ್ಪಿಸಿಕೊಳ್ಳಲು ಮಾಲೀಕರ ಕಾರನ್ನೇ ತೆಗೆದುಕೊಂಡು ಹೋಗಿದ್ದಾರೆ ಎಂದೂ ಪೊಲೀಸರು ಹೇಳಿದ್ದಾರೆ.

ಇದನ್ನು ಓದಿ: ದೇಗುಲದಿಂದ ಕದ್ದ ವಸ್ತುಗಳನ್ನು ಕ್ಷಮಾಪಣೆ ಪತ್ರದೊಂದಿಗೆ ವಾಪಸ್‌ ನೀಡಿದ ಕಳ್ಳ..!

ಇನ್ನು, ನಾಗೌರ್ ಜಿಲ್ಲೆಯ ಕುಚಾಮನ್ ಪ್ರದೇಶದಲ್ಲಿ ಕಾರು ಪತ್ತೆಯಾಗಿದೆ ಎಂದೂ ಅವರು ತಿಳಿಸಿದ್ದು, ಆರೋಪಿಗಳೆಲ್ಲರೂ ನೇಪಾಳದವರು ಎಂದು ತಿಳಿದುಬಂದಿದೆ. ಈ ಆರೋಪಿಗಳ ಪೈಕಿ ಇಬ್ಬರನ್ನು ಲಕ್ಷ್ಮೀ ಎಂಬ ಸೇವಕಿ ಉದ್ಯಮಿಯ ಮನೆಗೆ ಕರೆತಂದಿದ್ದರು ಮತ್ತು ನಕಲಿ ಗುರುತಿನೊಂದಿಗೆ ಅವರು ಕೆಲಸಕ್ಕೆ ಸೇರಿಕೊಂಡಿದ್ದರು ಎಂದೂ ಪೊಲೀಸರು ತಿಳಿಸಿದ್ದಾರೆ.

ದರೋಡೆ ನಡೆಸುತ್ತಿರುವಾಗ ಆರೋಪಿಗಳು ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಒಡೆದು ರಿಮೋಟ್ ಕಂಟ್ರೋಲ್ ಬಳಸಿ ಎಲ್ಲಾ ಗೇಟ್‌ಗಳಿಗೆ ಬೀಗ ಹಾಕಿದ್ದರು. ಅವರು ಉದ್ಯಮಿ ಮನೆಯ ಮೊಬೈಲ್ ಫೋನ್‌ಗಳನ್ನು ಸಹ ತೆಗೆದುಕೊಂಡು ಹೋಗಿದ್ದಾರೆ ಎಂದೂ ರಾಜಸ್ಥಾನ ಪೊಲೀಸರು ಹೇಳಿದ್ದಾರೆ.

ಉದ್ಯಮಿಯ ಮಗಳ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ ಎಂದು ಡಿಸಿಪಿ (ಪೂರ್ವ) ಅಮೃತಾ ದುಹಾನ್ ತಿಳಿಸಿದ್ದಾರೆ. ಉದ್ಯಮಿ ಮತ್ತು ಅವರ ಇಬ್ಬರು ಚಾಲಕರು ಮತ್ತು ಬರಿಸುವ ಔಷಧಿಯ ಪರಿಣಾಮದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದೂ ಅಮೃತಾ ದುಹಾನ್‌ ಹೇಳಿದರು. ಘಟನೆ ನಡೆದಾಗ ಇಬ್ಬರು ಚಾಲಕರನ್ನು ಹೊರತುಪಡಿಸಿ ಅಶೋಕ್‌ ಚೋಪ್ರಾ ತನ್ನ ಕಿರಿಯ ಮಗಳು ಅಂಕಿತಾ, ಅವರ ತಾಯಿ ಮತ್ತು ಮೊಮ್ಮಗನೊಂದಿಗೆ ಇದ್ದರು ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪ್ರಾಮಾಣಿಕನಾ... ಲ್ಯಾಪ್‌ಟಾಪ್ ಎಗರಿಸಿ ಮಾಲೀಕನಿಗೆ ಕ್ಷಮಿಸಿ ಎಂದು ಮೇಲ್ ಮಾಡಿದ ಕಳ್ಳ

ಉದ್ಯಮಿಯ ತಾಯಿ ಮತ್ತು ಮೊಮ್ಮಗನನ್ನು ಹೊರತುಪಡಿಸಿ ಒಬ್ಬ ಮಹಿಳೆ ಸೇರಿದಂತೆ ನಾಲ್ವರು ಮನೆ ಸಹಾಯಕರು ಶನಿವಾರ ರಾತ್ರಿ ಮನೆಯ ಉಳಿದವರಿಗೆ ಮತ್ತು ಬರಿಸುವ ಆಹಾರವನ್ನು ನೀಡಿದರು ಮತ್ತು ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ನಗದು ಸಹಿತ ಪರಾರಿಯಾಗಿದ್ದಾರೆ ಎಂದೂ ಅಮೃತಾ ದುಹಾನ್ ದೂರು ನೀಡಿದ್ದಾರೆ. 4 ವರ್ಷಗಳ ಹಿಂದೆ ಚೋಪ್ರಾ ಅವರ ತಾಯಿಯನ್ನು ನೋಡಿಕೊಳ್ಳಲು ಲಕ್ಷ್ಮೀ ಅವರನ್ನು ನೇಮಿಸಿಕೊಂಡಿದ್ದರು ಮತ್ತು ಇತರರು ಕೇವಲ 2 - 3 ತಿಂಗಳ ಹಿಂದೆ ನೇಮಕಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

"ನಾಲ್ವರು ಮನೆ ಕೆಲಸದವರು ಪ್ರಮುಖ ಆರೋಪಿಗಳು. ಆದರೆ ಈ ಘಟನೆಯಲ್ಲಿ ಹೊರಗಿನವರ ಪಾಲ್ಗೊಳ್ಳುವಿಕೆಯನ್ನು ನಾವು ತಳ್ಳಿಹಾಕಲು ಸಾಧ್ಯವಿಲ್ಲ. ಹಾಗೂ, ಈ ಆರೋಪಿಗಳಲ್ಲಿ ಯಾವುದೇ ಪೊಲೀಸ್ ಪರಿಶೀಲನೆ ನಡೆದಿಲ್ಲ ಮತ್ತು ಎಲ್ಲರೂ ದೆಹಲಿಯಿಂದ ಏಜೆನ್ಸಿ ಮೂಲಕ ಬಂದಿದ್ದಾರೆ ಎಂದೂ ಉದ್ಯಮಿಯ ಪುತ್ರಿ ಅಮೃತಾ ದುಹಾನ್‌ ಹೇಳಿದ್ದಾರೆ. 

ಇದನ್ನು ಓದಿ: ಬೆಂಗಳೂರು: ಕದ್ದ ಬೈಕ್‌ನಲ್ಲಿ ವ್ಹೀಲಿಂಗ್‌ ಮಾಡಿ ಜಾಲತಾಣದಲ್ಲಿ ವಿಡಿಯೋ..!

Follow Us:
Download App:
  • android
  • ios