ಕಳ್ಳತನ ಮಾಡುತ್ತಿದ್ದುದ್ದನ್ನು ನೋಡಿದ 9 ವರ್ಷದ ಪುಟ್ಟ ಬಾಲಕಿಯನ್ನು ದುಷ್ಕರ್ಮಿಯೋರ್ವ ಕೊಲೆ ಮಾಡಿದ್ದಾನೆ. ಉತ್ತರಪ್ರದೇಶದ ಆಗ್ರಾದಲ್ಲಿ ಈ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ.
ನವದೆಹಲಿ: ಕಳ್ಳತನ ಮಾಡುತ್ತಿದ್ದುದ್ದನ್ನು ನೋಡಿದ 9 ವರ್ಷದ ಪುಟ್ಟ ಬಾಲಕಿಯನ್ನು ದುಷ್ಕರ್ಮಿಯೋರ್ವ ಕೊಲೆ ಮಾಡಿದ್ದಾನೆ. ಉತ್ತರಪ್ರದೇಶದ ಆಗ್ರಾದಲ್ಲಿ ಈ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಬಾಲಕಿ ನಾಪತ್ತೆಯಾದ ಬಳಿಕ ಮನೆ ಎಲ್ಲಾ ಹುಡುಕಾಟ ನಡೆಸಿದಾಗ ಮನೆಯೊಳಗಿನ ಸ್ಟೋರ್ ರೂಮ್‌ನಲ್ಲಿ ಬಟ್ಟೆಯಿಂದ ಸುತ್ತಿಟ್ಟ ಸ್ಥಿತಿಯಲ್ಲಿ ಮನೆಯ ಬೀರಿನ ಒಳಗೆ ಬಾಲಕಿ ಶವ ಪತ್ತೆಯಾಗಿದೆ. ಬಾಲಕಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಪ್ರಕರಣ ಬೆನ್ನಟ್ಟಿದ ಪೊಲೀಸರು 19 ವರ್ಷದ ತರುಣನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಬಾಲಕಿ (Girl) ಮನೆಯಲ್ಲಿ ಆರೋಪಿ ಯುವಕ ಹಣ ಕದಿಯುವುದನ್ನು ಬಾಲಕಿ ಗಮನಿಸಿದ ಬಳಿಕ ಕಳ್ಳ, ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದ್ದು, ಆತ ತಾನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಆಗ್ರಾ ಜಿಲ್ಲೆಯ ಜಗದೀಶ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದೇ ಕಟ್ಟಡದಲ್ಲಿ ಆರೋಪಿ ಹಾಗೂ ಬಾಲಕಿಯ ಕುಟುಂಬ ವಾಸವಿತ್ತು. ಕೊಲೆ ಮಾಡಿದ್ದು ಸಾಲದು ಎಂಬಂತೆ ಆರೋಪಿ ನಂತರ ಬಾಲಕಿ ನಾಪತ್ತೆಯಾದ ಸುದ್ದಿ ಊರೆಲ್ಲಾ ಹಬ್ಬುತ್ತಿದ್ದಂತೆ ಕುಟುಂಬದವರೊಂದಿಗೆ ಸೇರಿಕೊಂಡು ಹುಡುಕುವ ನಾಟಕವನ್ನು ಮಾಡಿದ್ದ.
ಹಾಡಿನ ವಿಷ್ಯಕ್ಕೆ ಶುರುವಾದ ಗಲಾಟೆ: ದುಡ್ಡು ಹಾಕಿ ಸಮಾರಂಭ ಆಯೋಜಿಸಿದ್ದವನೇ ಕೊಲೆಯಾದ ..!
ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಯುವಕನ ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ. ಸನ್ನಿ ಎಂಬ 19 ವರ್ಷದ ಯುವಕನೇ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಅಪಹರಣ ಕೊಲೆ ಸಾಕ್ಷ್ಯನಾಶ, ದರೋಡೆ, ಸಾವಿಗೆ ಕಾರಣವಾಗುವ ಕೃತ್ಯ ಸೇರಿದಂತೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 302, ಸೆಕ್ಷನ್ 201, ಸೆಕ್ಷನ್ 397, ಸೆಕ್ಷನ್ 306 ರ ಅಡಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ಆತನ ಬಳಿ ಇದ್ದ ಕಳವು ಮಾಡಿದ 20 ಸಾವಿರ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ. ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಹೇಳಿದ್ದಾರೆ.
ಈ ಅನಾಹುತದ ವೇಳೆ ಬಾಲಕಿಯ ಪೋಷಕರು ಕೆಲಸದ ನಿಮಿತ್ತ ಮನೆಯಿಂದ ಹೊರ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೆಲಸದ ಬಿಸಿಯಿಂದಾಗಿ ಅವರು ಮಗುವನ್ನು ಮನೆಯಲ್ಲಿ ಏಕಾಂಗಿಯಾಗಿ ಬಿಟ್ಟು ಹೋಗಿದ್ದರು. ಆರೋಪಿಯ ಮನೆಯವರ ಬಳಿ ಮಗುವನ್ನು ನೋಡಿಕೊಳ್ಳುವಂತೆ ಹೇಳಿ ಹೋಗುತ್ತಿದ್ದರು. ಆದರೆ ಈಗ ಮಗವನ್ನು ಕಳೆದುಕೊಂಡ ದಂಪತಿ ಕಣ್ಣೀರಿಡುವಂತಾಗಿದೆ.
ಕ್ಷುಲ್ಲಕ ಕಾರಣಕ್ಕೆ ಯುವಕನ ಬರ್ಬರ ಹತ್ಯೆ; ಬೆಚ್ಚಿಬಿಳಿಸುತ್ತೆ ಸಿಸಿಟಿವಿ ದೃಶ್ಯ!
