Asianet Suvarna News Asianet Suvarna News

ಕ್ಷುಲ್ಲಕ ಕಾರಣಕ್ಕೆ ಯುವಕನ ಬರ್ಬರ ಹತ್ಯೆ; ಬೆಚ್ಚಿಬಿಳಿಸುತ್ತೆ ಸಿಸಿಟಿವಿ ದೃಶ್ಯ!

ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಸ್ನೇಹಿತರೇ ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣ, ಹತ್ಯೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಹತ್ಯೆ ಸಂಬಂಧ ಮಹದೇವಪುರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Rowdy sheeter Renukumar murder case captured on CCTV at mahadevapur bengaluru rav
Author
First Published Jun 6, 2023, 1:05 PM IST

ಬೆಂಗಳೂರು (ಜೂ.6) : ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಸ್ನೇಹಿತರೇ ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.ಈಗಾಗಲೇ ಹತ್ಯೆ ಸಂಬಂಧ ಮಹದೇವಪುರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

 ಪ್ರಶಾಂತ್ ಶ್ರೀಕಾಂತ್ ಹಾಗೂ ವಸಂತ್ ಬಂಧಿತ ಆರೋಪಿಗಳು. ಮೇ 25 ರಂದು ರೇಣುಕುಮಾರ್ ಹತ್ಯೆ ಮಾಡಿದ್ದರು. ಇವರಿಬ್ಬರೂ ಹತ್ಯೆಯಾದ ರೌಡಿಶೀಟರ್ ರೇಣುಕುಮಾರ್ ಸಹಚರರೇ ಆಗಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ರೇಣುಕುಮಾರ್. ಕೊಲೆ ಕೊಲೆಯತ್ನ ರಾಬರಿ ಹಲ್ಲೆ ಸೇರಿ 7 ಕ್ಕೂ ಹೆಚ್ಚು ಕೇಸ್ ನಲ್ಲಿ ಭಾಗಿಯಾಗಿ ಜೈಲು ಸೇರಿದ ರೌಡಿಶೀಟರ್.

ಜೈಲ್‌ನಿಂದ ಬಂದ ಬಳಿಕ ಅವಾಜ್ ಹಾಕಿದ್ದ ರೌಡಿಶೀಟರ್. ನಾನು ಜೈಲ್‌ಗೆ ಹೋಗಿಬಂದವನು, ನೀವೆಲ್ಲ ನಾನು ಹೇಳಿದ ಹಾಗೆ ಕೇಳಬೇಕು. ನಾನು ನಿಮಗೆ ಬಾಸ್. ನಾನು ಇಲ್ಲದೆ ಯಾವ ಕೆಲಸಕ್ಕೂ ಒಂಟಿಯಾಗಿ ಹೋದರೆ ನಾನು ನಿಮ್ಮನ್ನು ಸುಮ್ಮನೆ ಬಿಡೋದಿಲ್ಲ ಎಂದು ಅವಾಜ್ ಹಾಕಿದ್ದ ರೇಣುಕುಮಾರ. 

'ಏರಿಯಾದಲ್ಲಿ ನಿಂದು ಹವಾ ಜಾಸ್ತಿ ಆಗಿದೆ': ಕ್ಷುಲ್ಲಕ ಕಾರಣಕ್ಕೆ ಯುವಕನ ಹತ್ಯೆ!

ಇವನನ್ನು ಹೀಗೆ ಬಿಟ್ಟರೆ ನಮ್ಮನ್ನೇ ಮುಗಿಸಿಬಿಡ್ತಾನೆ ಎಂದು ಆರೋಪಿಗಳು ರೇಣುಕುಮಾರನ ಕೊಲೆ ಸ್ಕೆಚ್ ಹಾಕಿದ್ದರು. ಮೊದಲೇ ಮಾಡಿಕೊಂಡಿದ್ದ ಪ್ಲಾನ್‌ನಂತೆ ಮೇ 25 ರಂದು ರೇಣುಕುಮಾರನ ಬೆನ್ನುಹತ್ತಿದ್ದಾರೆ. ರಾತ್ರಿ ರಸ್ತೆ ಮಧ್ಯೆ ತಡೆದು ನಿಲ್ಲಿಸಿರುವ ಆರೋಪಿಗಳು. ಈ ಏರಿಯಾದಲ್ಲಿ ನಿಂದು ಹವಾ ಜಾಸ್ತಿಯಾಗಿದೆ ಎಂದವರೇ ಲಾಂಗ್ ಬೀಸಿ ಕೊಚ್ಚಿಕೊಂದಿದ್ದಾರೆ.  40 ಸೆಕೆಂಡ್ ನಲ್ಲಿ 26 ಬಾರಿ‌ ಚುಚ್ಚಿ ಬರ್ಬರವಾಗಿ ಕೊಂದು ಹಾಕಿರುವ ಆರೋಪಿಗಳು. ಹತ್ಯೆಯ ಬಳಿಕ ಪರಾರಿಯಾಗಿದ್ದರು. ಆದರೆ ಈ ಘಟನೆ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಸಿಸಿಟಿವಿ ದೃಶ್ಯ ಜಾಡು ಹಿಡಿದು ಆರೋಪಿಗಳ ಬೆನ್ನು ಬಿದ್ದಿದ್ದ ಮಹದೇವಪುರ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

Follow Us:
Download App:
  • android
  • ios