Asianet Suvarna News Asianet Suvarna News

Bengaluru Crime: ಕೂಲಿಗಾಗಿ ಗುತ್ತಿಗೆದಾರನ ಕೊಂದು ನೇಪಾಳ ಗಡಿಗೆ ಹೋಗಿದ್ದವನ ಸೆರೆ

ಕೂಲಿ ಹಣ ನೀಡುವ ವಿಚಾರವಾಗಿ ನಡೆದ ಜಗಳದ ವೇಳೆ ಗಾರೆ ಕೆಲಸದ ಗುತ್ತಿಗೆದಾರನ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆಗೈದು ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಯಲಹಂಕ ಉಪ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

The arrest of the man who went to Nepal border after killing the contractor for wages at bengaluru rav
Author
First Published Jan 7, 2023, 1:28 PM IST

ಬೆಂಗಳೂರು (ಜ.7) : ಕೂಲಿ ಹಣ ನೀಡುವ ವಿಚಾರವಾಗಿ ನಡೆದ ಜಗಳದ ವೇಳೆ ಗಾರೆ ಕೆಲಸದ ಗುತ್ತಿಗೆದಾರನ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆಗೈದು ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಯಲಹಂಕ ಉಪ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳ(west bengal)ದ ಪ್ರಿಯೋನಾಥ್‌(Priyonath)(29) ಬಂಧಿತ. ಆರೋಪಿ ಡಿ.18ರಂದು ಯಲಂಹಕ(Yalahanka)ದ ಕೆಂಚೇನಹಳ್ಳಿ(Kenchenahalli) ಸಮೀಪದ ಪ್ರಕೃತಿ ಲೇಔಟ್‌(Prakriti layout)ನ ನಿರ್ಮಾಣ ಹಂತದ ಕಟ್ಟಡದಲ್ಲಿ ಗುತ್ತಿಗೆದಾರರ ಪಶ್ಚಿಮ ಬಂಗಾಳ ಮೂಲದ ಐನಲ್‌ ಹಕ್‌(30) ಎಂಬಾತನ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆಗೈದು ಕೊಲೆ ಮಾಡಿದ್ದ. ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

Sharath murder: ಬೆಂಗಳೂರು ಯುವಕ ಶರತ್ ಕೊಲೆ ಪ್ರಕರಣ; ಚಾರ್ಮಾಡಿ ಘಾಟ್‌ನಲ್ಲಿ‌ ಶೋಧಕಾರ್ಯ ಸ್ಥಗಿತ

ಪಶ್ಚಿಮ ಬಂಗಾಳ ಮೂಲದ ಗುತ್ತಿಗೆದಾರರ ಐನಲ್‌ ಹಕ್‌ ನಗರದಲ್ಲಿ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಪ್ಲಾಸ್ಟಿಂಗ್‌ ಕೆಲಸದ ಗುತ್ತಿಗೆ ಪಡೆದುಕೊಂಡು ಪಶ್ಚಿಮ ಬಂಗಾಳದಿಂದ ಕಾರ್ಮಿಕರನ್ನು ಕರೆಸಿ ಕೆಲಸ ಮಾಡಿಸುತ್ತಿದ್ದ. ಅದರಂತೆ ಕೆಂಚೇನಹಳ್ಳಿಯ ಪ್ರಕೃತಿ ಲೇಔಟ್‌ನ ಭೂಮಿ ವೆಂಚರ್‌ ಡೆವಲಪ​ರ್‍ಸ್ ನಿರ್ಮಾಣದ ಅಪಾರ್ಚ್‌ಮೆಂಟ್‌ನಲ್ಲಿ ಪ್ಲಾಸ್ಟಿಂಗ್‌ ಗುತ್ತಿಗೆ ಪಡೆದುಕೊಂಡಿದ್ದ. ಆರೋಪಿ ಪ್ರಿಯೋನಾಥ್‌ ಸೇರಿದಂತೆ ಹಲವು ಕಾರ್ಮಿಕರನ್ನು ಪ್ಲಾಸ್ಟಿಂಗ್‌ ಕೆಲಸಕ್ಕೆ ನಿಯೋಜಿಸಿದ್ದ

ಹಣಕ್ಕಾಗಿ ಸ್ನೇಹಿತನ ಕೊಂದಿದ್ದ ನಾಲ್ವರಿಗೆ ಜೀವಾವಧಿ ಕಾಯಂ: ಹೈಕೋರ್ಟ್‌ ಆದೇಶ

ಗುತ್ತಿಗೆದಾರ ಐನಲ್‌ ಹಕ್‌ ಡಿ.18ರಂದು ರಾತ್ರಿ 10ರ ಸುಮಾರಿಗೆ ಕಾರ್ಮಿಕರ ಶೆಡ್‌ ಬಳಿ ಬಂದು ಕಾರ್ಮಿಕರ ಜತೆಗೆ ಮಾತನಾಡುತ್ತಿದ್ದ. ಈ ವೇಳೆ ಪ್ರಿಯೋನಾಥ್‌ ಇಂದೇ ಹಣ ಕೊಡುವಂತೆ ಐನಲ್‌ ಹಕ್‌ ಜತೆಗೆ ಜಗಳ ತೆಗೆದು ಕಬ್ಬಿಣದ ರಾಡ್‌ನಿಂದ ಆತನ ತಲೆಗೆ ನಾಲ್ಕೈದು ಬಾರಿ ಹಲ್ಲೆ ನಡೆಸಿ ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಐನಲ್‌ ಹಕ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಡಿ.19ರಂದು ಮೃತಪಟ್ಟಿದ್ದ. ಐನಲ್‌ ಹಕ್‌ ಹತ್ಯೆಯ ಬಳಿಕ ಆರೋಪಿ ಪ್ರಿಯೋನಾಥ್‌ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ಸ್ವಂತ ಊರಾದ ಪಶ್ಚಿಮ ಬಂಗಾಳದ ಕೂಚ್‌ಬಿಹಾರಕ್ಕೆ ತೆರಳಿದ್ದ. ಕೆಲ ದಿನಗಳ ಬಳಿಕ ಪೊಲೀಸರು ಇಲ್ಲಿಗೆ ಹುಡುಕಿಕೊಂಡು ಬಂದು ಬಂಧಿಸುವ ಭೀತಿಯಲ್ಲಿ ನೇಪಾಳ ಗಡಿಯ ಡಾರ್ಜಲಿಂಗ್‌ಗೆ ತೆರಳಿ ತಲೆಮರೆಸಿಕೊಂಡಿದ್ದ. ಈ ಬಗ್ಗೆ ಸಿಕ್ಕ ಸುಳಿವು ಆಧರಿಸಿ ಪೊಲೀಸರು ನೇಪಾಳ ಗಡಿಗೆ ತೆರಳಿ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ.

Follow Us:
Download App:
  • android
  • ios