Asianet Suvarna News Asianet Suvarna News

Sharath murder: ಬೆಂಗಳೂರು ಯುವಕ ಶರತ್ ಕೊಲೆ ಪ್ರಕರಣ; ಚಾರ್ಮಾಡಿ ಘಾಟ್‌ನಲ್ಲಿ‌ ಶೋಧಕಾರ್ಯ ಸ್ಥಗಿತ

  • ಬೆಂಗಳೂರು ಯುವಕ ಶರತ್ ಕೊಲೆ ಪ್ರಕರಣ
  • ಚಾರ್ಮಾಡಿ ಘಾಟ್‌ನಲ್ಲಿ‌ ಶೋಧಕಾರ್ಯ ಸ್ಥಗಿತ 
  • ಮೃತದೇಹ ಸಿಗದೇ ವಾಪಸಾದ ಬೆಂಗಳೂರು ಪೊಲೀಸರು
  • ಕಳೆದ ಮೂರು ದಿನಗಳ ಕಾಲ ನಡೆದ ಶೋಧ ಕಾರ್ಯ
Bengaluru sharath murder case The police stopped the search at charmadighat rav
Author
First Published Jan 6, 2023, 3:20 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಜ.6) : ಕಳೆದ ಮೂರು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‌ನಲ್ಲಿ ಬೆಂಗಳೂರಿನ ಯುವಕ ಶರತ್ ಮೃತದೇಹ ಹುಡುಕುತ್ತಿದ್ದ ಪೊಲೀಸರು ಬರಿಗೈಲಿ ವಾಪಸ್ಸಾಗಿದ್ದಾರೆ. 10ಕ್ಕೂ ಹೆಚ್ಚು ಪೊಲೀಸರ ಜೊತೆ 20ಕ್ಕೂ ಹೆಚ್ಚು ಸ್ಥಳಿಯರ ನೇತೃತ್ವದಲ್ಲಿ ಮೂರು ದಿನಗಳಿಂದ ನಿರಂತರವಾಗಿ ಹುಡುಕಿದರೂ ಶವ ಸಿಗದ ಹಿನ್ನೆಲೆ ಮತ್ತೆ ಬರೋದಾಗಿ ಹೇಳಿ ವಾಪಸಾಗಿದ್ದಾರೆ.

ಬೆಂಗಳೂರಿ(Bengaluru)ನ ಕೋಣನಕುಂಟೆ(Konanakunte) ಮೂಲದ ಶರತ್(Sharath) ಸಬ್ಸಿಡಿ(Subsidy) ದರದಲ್ಲಿ ಕಾರು(Car) ಕೊಡಿ ಕೊಡಿಸುತ್ತೇನೆ ಎಂದು ಹಣ ಪಡೆದಿದ್ದ. ಬಳಿಕ ಕಾರು ಕೊಡಿಸದ ಹಿನ್ನೆಲೆ ಹಣ ಕೊಟ್ಟವರು ಶರತ್ ನನ್ನು ಅಪಹರಿಸಿ ಹಲ್ಲೆ ಮಾಡಿ ಕೊಲೆಗೈದಿದ್ದರು(murder). ಕೊಲೆ ಬಳಿಕ ಮೃತ ದೇಹವನ್ನು ಚಿಕ್ಕಮಗಳೂರು(Chikkamagaluru) ಜಿಲ್ಲೆ ಮೂಡಿಗೆರೆ(mudigere) ತಾಲೂಕಿನ ಚಾರ್ಮಾಡಿ ಘಾಟ್(Charmadi Ghat) ಅರಣ್ಯ ಪ್ರದೇಶದಲ್ಲಿ ಎಸೆದಿದ್ದರು.

Charmadi Ghat: ಸಿಗಲೇ ಇಲ್ಲ ಶರತ್ ಮೃತದೇಹ: ದಿಕ್ಕುತಪ್ಪಿಸುತ್ತಿದ್ದಾರಾ ಆರೋಪಿಗಳು..!

 ಒಂಬತ್ತು ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದು ಪೊಲೀಸರು ಆರೋಪಿಗಳನ್ನ ಬಂಧಿಸಿ ಮೃತ ದೇಹಕ್ಕಾಗಿ ಮೂರು ದಿನಗಳಿಂದ ಶೋಧ ನಡೆಸಿದರು. ಆದರೆ 9 ತಿಂಗಳ ಕಳೆದಿದ್ದರಿಂದ ಪೊಲೀಸರಿಗೆ ಮೃತದೇಹದ ಯಾವುದೇ ಕುರುಹು ಪತ್ತೆಯಾಗಿಲ್ಲ. ಅಲ್ಲದೆ ಆರೋಪಿಗಳನ್ನ ಕೋರ್ಟಿಗೆ ಹಾಜರುಪಡಿಸಬೇಕಾದ ಹಿನ್ನೆಲೆ ಮೃತ ದೇಹವನ್ನ ಶೋಧಿಸುವ ಕಾರ್ಯಾಚರಣೆಗೆ ಬ್ರೇಕ್ ಹಾಕಿ ಬೆಂಗಳೂರಿಗೆ ಬರಿಗೈಲಿ ಹಿಂದಿರುಗಿದ್ದಾರೆ. 

Bengaluru Crime: ಸಾಲ ಮರಳಿಸಿಲ್ಲವೆಂದು ಮನಸೋ ಇಚ್ಛೆ ಥಳಿಸಿ ಕೊಲೆ: ನರಕವನ್ನೂ ಮೀರಿಸುವಂತಿದೆ ಹಿಂಸೆ

ಸಾವಿರಾರು ಅಡಿ ಪ್ರಪಾತ, ಲಕ್ಷಾಂತರ ಹೆಕ್ಟರ್ ಅರಣ್ಯ ಪ್ರದೇಶದಲ್ಲಿ 9 ತಿಂಗಳ ಹಿಂದಿನ ಮೃತ ದೇಹ ಹುಡುಕುವುದು ಕಲ್ಲನ್ನು ಗುದ್ದಿ ನೀರು ತೆಗೆದಂತೆ. ಅಲ್ಲಿ ಮೃತದೇಹ ಹುಡುಕುವುದು ಅಸಾಧ್ಯವೇ ಸರಿ. ಚಾರ್ಮಾಡಿಘಾಟ್ ಅರಣ್ಯ ಪ್ರದೇಶದಲ್ಲಿ ಕಾಡುಪ್ರಾಣಿಗಳು ಹೆಚ್ಚಾಗಿದ್ದು, ಅದರಲ್ಲೂ ಕಾಡುಹಂದಿ, ಸೀಳುನಾಯಿ ಪ್ರಮಾಣ ಹೆಚ್ಚಿದೆ. ಆರೋಪಿಗಳು ಕೊಲೆ ಬಳಿಕ ಮೃತದೇಹವನ್ನು ಗೋಣಿಚೀಲದಲ್ಲಿ ಹಾಕಿ ಎಸೆದಿದ್ದರೆ ಪೊಲೀಸರ ಬಳಿ ಹೇಳಿದ್ದಾರೆ. ಹೀಗಾಗಿ ಕಾಡುಪ್ರಾಣಿಗಳು ಗೋಣಿಚೀಲವನ್ನು ಎಳೆದೊಯ್ದಿರುವ ಸಾಧ್ಯತೆಯೂ ಇದೆ. ಕೊಲೆ ಮಾಡಿ ಮೃತದೇಹವನ್ನು ರಾತ್ರಿ ಎಸೆದಿರುವುದರಿಂದ ಆರೋಪಿಗಳಿಗೂ ಯಾವ ಸ್ಥಳವೆಂಬುದು ಪಕ್ಕಾ ತಿಳಿಯುತ್ತಿಲ್ಲ. ಆದರೂ ಪೊಲೀಸರು ಮೂರು ದಿನಗಳ ಕಾಲ ನಿರಂತರವಾಗಿ ಹುಡುಕಿ ಇಂದು ಬೆಂಗಳೂರಿಗೆ ಬರಿಗೈಲಿ ವಾಪಸ್ಸಾಗಿದ್ದಾರೆ.

Follow Us:
Download App:
  • android
  • ios