Asianet Suvarna News Asianet Suvarna News

ಮಾಜಿ ಕಾರ್ಪೊರೇಟರ್​​ ಆತ್ಮಹತ್ಯೆಗೆ ಶರಣು, ಮನೆಯೊಂದರಲ್ಲಿ ಯುವತಿ-ಯುವಕನ ಶವ ಪತ್ತೆ

* ಬೆಂಗಳೂರಿನ ಮಾಜಿ ಕಾರ್ಪೊರೇಟರ್​​ ಆತ್ಮಹತ್ಯೆಗೆ ಶರಣು
* ಅತ್ತಿಗುಪ್ಪೆಯ ನಿವಾಸದಲ್ಲಿ ನೇಣು ಬಿಗಿದುಕೊಂಡು ಶಿವಪ್ಪ ಆತ್ಮಹತ್ಯೆ
* ಯುವತಿ ಕತ್ತು  ಕೊಯ್ದು ಕೊಲೆ ಮಾಡಿ ಬಳಿಕ ತಾನು ಹತ್ಮಹತ್ಯೆಗೆ ಶರಣಾದ ಯುವಕ
* ಜಿಗಣಿ ಸಮೀಪದ ನಿಸರ್ಗ ಬಡಾವಣೆಯಲ್ಲಿ ಘಟನೆ

Bengaluru Former corporator Commits suicide rbj
Author
Bengaluru, First Published Nov 18, 2021, 10:34 PM IST
  • Facebook
  • Twitter
  • Whatsapp

ಬೆಂಗಳೂರು, (ನ.18): ಮಾಜಿ ಕಾರ್ಪೊರೇಟರ್ ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ಇಂದು (ಗುರುವಾರ) ಬೆಂಗಳೂರಿನ (Bengaluru) ಅತ್ತಿಗುಪ್ಪೆಯಲ್ಲಿ ನಡೆದಿದೆ. 

55 ವರ್ಷದ ಶಿವಪ್ಪ ಆತ್ಮಹತ್ಯೆ ಶರಣಾದ ಮಾಜಿ ಕಾರ್ಪೊರೇಟರ್ ಆಗಿದ್ದಾರೆ. ಅತ್ತಿಗುಪ್ಪೆಯ ನಿವಾಸದಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಶಿವಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ.

ವೈದ್ಯನಿಂದ ಲೈಂಗಿಕ ಕಿರುಕುಳ: ಆಸ್ಪತ್ರೆ ಮಹಿಳೆ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ

  ಮೃತರ ಪುತ್ರ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಕೂಡಲೇ ಸಮೀಪದ ಗುರುಶ್ರೀ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಜನತಾದಳದಿಂದ ರಾಜಕೀಯ ಜೀವನ ಪ್ರಾರಂಭಿಸಿದ್ದ ಶಿವಪ್ಪ, 2005ರಲ್ಲಿ ಕಾಂಗ್ರೆಸ್ ನಿಂದ ಅತ್ತಿಗುಪ್ಪೆ ವಾರ್ಡ್ ಕಾರ್ಪೊರೇಟರ್ ಆಗಿ ಆಯ್ಕೆಯಾಗಿದ್ದರು. ಆ ಬಳಿಕ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ರು. ಬಳಿಕ ಬಿಡಿಎ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. 

ಶಿವಪ್ಪ ಅಲ್ಲದೇ ಅವರ ಪತ್ನಿ ಕೂಡ ಕಾರ್ಪೊರೇಟರ್ ಅಗಿದ್ದರು. ಅಲ್ಲದೇ ಶಿವಪ್ಪ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಚಂದ್ರಾಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಯುವತಿ ಕತ್ತು ಕೊಯ್ದು ಕೊಲೆ
ಲವ್ ಮಾಡಲು ನಿರಾಕರಿದಳು ಎನ್ನುವ ಕಾರಣಕ್ಕೆ ಯುವತಿಯ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಬಳಿಕ ತಾನೂ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇಂದು (ಗುರುವಾರ) ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಸಮೀಪದ ನಿಸರ್ಗ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.  ಮನೆಯ ಮೊದಲ ಮಹಡಿಯಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ.

ಟಿ ಜಾನ್ ಕಾಲೇಜಿನಲ್ಲಿ ಓದುತ್ತಿದ್ದ ಯುವ ಸಿಂಚನಾ ಕೊಲೆಯಾದ ದುರ್ದೈವಿ. ಮೃತ ಯುವಕನ ಗುರುತು ಪತ್ತೆಯಾಗಿಲ್ಲ.  ಸ್ಥಳಕ್ಕೆ ಹೆಬ್ಬಗೋಡಿ ಮತ್ತು ಜಿಗಣಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರೇಮ ನಿರಾಕರಣೆ ಹಿನ್ನೆಲೆ ಯುವತಿಯನ್ನು ಕೊಲೆ ಮಾಡಿ, ಬಳಿಕ ಯುವಕ ನೇಣಿಗೆ ಶರಣಾಗಿದ್ದಾನೆ ಎಂದು ಶಂಕಿಸಲಾಗಿದೆ.

Follow Us:
Download App:
  • android
  • ios