ಸೋಶಿಯಲ್ ಮೀಡಿಯಾದಲ್ಲಿ ಕಂಡಕ್ಟರ್ ಫೋಟೋ ಮತ್ತು ಟಿಕೆಟ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ.

ಹೈದರಾಬಾದ್: ಸರ್ಕಾರಿ ಬಸ್‌ನಲ್ಲಿ (Telangana State Road Transport Corporation) ಅನುಭವಿಸಿದ ಲೈಂಗಿಕ ಕಿರುಕುಳದ (Sexual Harassment) ಬಗ್ಗೆ ಮಹಿಳೆಯೊಬ್ಬರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ತೆಲಂಗಾಣದ (Telangana) ಸರ್ಕಾರಿ ಬಸ್‌ ನಲ್ಲಿ ಮಹಿಳೆ (Woman Passenger) ಮನಿಕೊಂಡದಿಂದ ಹಿಮಾಯತ್ ನಗರಕ್ಕೆ ತೆರಳುತ್ತಿದ್ದರು. ಬಸ್‌ ನಲ್ಲಿ ಕಂಡಕ್ಟರ್ (Ticket Collector) ತನ್ನ ಎದೆ ಮತ್ತು ಪ್ರೈವೇಟ್ ಪಾರ್ಟ್ (Chest And Private Part) ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಂಡಕ್ಟರ್ ಫೋಟೋ ಮತ್ತು ಟಿಕೆಟ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಶಾ ಕಾರ್ಯಕರ್ತೆಯರ ಟ್ಯಾಬ್ ಕದ್ದ ಆಂಬುಲೆನ್ಸ್ ಚಾಲಕ: ಇತ್ತ ಏಳು ಡ್ರಗ್ಸ್ ದಂಧೆಕೋರರ ಸೆರೆ

21 ವರ್ಷದ ಮಹಿಳೆ 65M/123 ಮೆಹಧಿಪಟ್ಟಣಂ ಬಸ್‌ ಹತ್ತಿದ್ದಾರೆ. ಬಸ್ ಪ್ರಯಾಣಿಕರಿಂದ ತುಂಬಿತ್ತು. ಜನಸಂದಣಿ ಬಸ್‌ನಲ್ಲಿದ್ದ ಕಂಡಕ್ಟರ್ ಲೈಂಗಿಕ ದೌರ್ಜನ್ಯ ನೀಡಿದ್ದಾನೆ. ಮುಂದೆ ಯಾವುದೇ ಮಹಿಳೆ ದೌರ್ಜನ್ಯದಿಂದ ಒಳಗಾಗಬಾರದು ಎಂದು ಧ್ವನಿ ಎತ್ತುತ್ತಿದ್ದೇನೆ. 65M/123 ಬಸ್ ಪ್ರಯಾಣಿಕರಿಂದ ತುಂಬಿರೋದನ್ನು ತನ್ನ ಲಾಭಕ್ಕೆ ಕಂಡಕ್ಟರ್ ಬಳಸಿಕೊಂಡಿದ್ದಾರೆ. ಆತ ಎದೆ ಮತ್ತು ಪ್ರೈವೇಟ್ ಪಾರ್ಟ್ ಟಚ್ ಮಾಡುತ್ತಿದ್ದಂತೆ ನಾನು ಜೋರಾಗಿ ಕಿರುಚಿಕೊಂಡೆ. ತೆಲಂಗಾಣ ಸಾರಿಗೆ ಸಂಸ್ಥೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮಹಿಳೆ ಮನವಿ ಮಾಡಿದ್ದಾರೆ. ಈ ಟ್ವೀಟ್‌ನನ್ನು ಸಿಎಂ ರೇವಂತ್ ರೆಡ್ಡಿಯವರಿಗೂ ಟ್ಯಾಗ್ ಮಾಡಲಾಗಿದೆ. 

ಮಹಿಳೆಯ ಟ್ವೀಟ್‌ಗೆ ತೆಲಂಗಾಣ ಸಾರಿಗೆ ಸಂಸ್ಥೆಯ ಎಂಡಿ ಪ್ರತಿಕ್ರಿಯೆ ನೀಡಿದ್ದಾರೆ. ನಿಮಗೆ ಉಂಟಾದ ಅನಾನುಕೂಲತೆಗೆ ಕ್ಷಮೆ ಕೇಳುತ್ತೇವೆ. ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆಯನ್ನು ನೀಡಿದ್ದಾರೆ. ಜುಲೈ 15ರಂದು ಈ ಘಟನೆ ನಡೆದಿದೆ.

ಸೌದೀಲಿ ಕಷ್ಟಕ್ಕೆ ಸಿಲುಕಿದವನ ರಕ್ಷಣೆ: ನೌಕರಿ ನಂಬಿ ಹೋಗಿದ್ದ ರಾಮನಗರದ ಯುವಕ