ಸೌದೀಲಿ ಕಷ್ಟಕ್ಕೆ ಸಿಲುಕಿದವನ ರಕ್ಷಣೆ: ನೌಕರಿ ನಂಬಿ ಹೋಗಿದ್ದ ರಾಮನಗರದ ಯುವಕ
ಬೆಂಗಳೂರಿನ ಶಿವಾಜಿನಗರದ ಏಜೆಂಟ್ ಮೂಲಕ ಉದ್ಯೋಗ ಅರಸಿ ಸೌದಿ ಅರೇಬಿಯಾಕ್ಕೆ ತೆರಳಿ ಸಂಬಳ, ಊಟ, ವಸತಿ ಇಲ್ಲದೇ ಪರದಾಡುತ್ತಿದ್ದ ಮೊಹಮ್ಮದ್ ಅಲ್ಪಾಕ್‌ರನ್ನು ರಾಜ್ಯ ಅನಿವಾಸಿ ಭಾರತೀಯ ಸಮಿತಿಯು ವಾಪಸ್ ಕರೆ ತಂದಿದೆ.
ಬೆಂಗಳೂರು (ಜು.17): ಬೆಂಗಳೂರಿನ ಶಿವಾಜಿನಗರದ ಏಜೆಂಟ್ ಮೂಲಕ ಉದ್ಯೋಗ ಅರಸಿ ಸೌದಿ ಅರೇಬಿಯಾಕ್ಕೆ ತೆರಳಿ ಸಂಬಳ, ಊಟ, ವಸತಿ ಇಲ್ಲದೇ ಪರದಾಡುತ್ತಿದ್ದ ಮೊಹಮ್ಮದ್ ಅಲ್ಪಾಕ್‌ರನ್ನು ರಾಜ್ಯ ಅನಿವಾಸಿ ಭಾರತೀಯ ಸಮಿತಿಯು ವಾಪಸ್ ಕರೆ ತಂದಿದೆ. ರಾಮನಗರದ ಎಂಬ ಮಹಮ್ಮದ್ ಫೀರ್ ಏಜೆಂಟ್, ಸೌದಿಯಲ್ಲಿ ಅಮೆಜಾನ್ ಕಂಪನಿಯಲ್ಲಿ ಸಹಾಯಕ ಹುದ್ದೆ ಕೊಡಿ ಸುವುದಾಗಿ ೭1 ಲಕ್ಷ ಪಡೆದು ಕಳೆದ ಸೆಪ್ಟೆಂಬರ್‌ನಲ್ಲಿ ಸೌದಿಗೆ ಕಳುಹಿಸಿ ಕೊಟ್ಟಿದ್ದ.
ಸೌದಿಗೆ ತೆರಳಿದ ಬಳಿಕ ಏಜೆಂ ಟ್‌ಗಳು ಬೇರೆ ಬೇರೆ ಕೆಲಸಕ್ಕೆ ಕಳುಹಿಸಿದ್ದರು. ರಿಯಾತ್ ಎಂಬ ಪ್ರದೇಶದಲ್ಲಿ ಉಳಿಸಿದ ಅವಧಿಯಲ್ಲಿ ಸರಿಯಾದ ಊಟ, ವಸತಿ ವ್ಯವಸ್ಥೆಯನ್ನೂ ನೀಡದೆ ಗೃಹ ಬಂಧನದಲ್ಲಿರಿಸಿದ್ದರು. ಅಲ್ಲಿಂದ ತಪ್ಪಿಸಿಕೊಂಡು ಜೆದ್ದಾಗೆ ಬಂದು ಮಸೀದಿಯೊಂದರಲ್ಲಿ ಉಳಿದಿದ್ದರು. ಈ ವೇಳೆ ಜೆದ್ದಾ ಕನ್ನಡ ಸಂಘದ ಸದಸ್ಯ ಜಲಾಲ್ ಬೇಗ್ ಸಿಕ್ಕಿದ್ದು, ಅವರ ಬಳಿ ಎಲ್ಲ ವಿಷಯವನ್ನು ಹೇಳಿಕೊಂಡಿದ್ದರು.
ನಂತರ ಜೆದ್ದಾ ಕನ್ನಡ ಸಂಘದ ಮಾಜಿ ಅಧ್ಯಕ್ಷ ಮಹಮ್ಮದ್ ಸೈಫ್ ಉದ್ದಿನ್ ಮೂಲಕರಾಜ್ಯ ಅನಿವಾಸಿಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ| ಆರತಿ ಕೃಷ್ಣರನ್ನು ಸಂಪರ್ಕಿಸಲಾಯಿತು ಎಂದು ಸುದ್ದಿಗೋಷ್ಠಿಯಲ್ಲಿ ಸೌದಿಯಿಂದ ವಾಪಸ್ ಬಂದ ಮೊಹಮ್ಮದ್ ಅಶಾಕ್ ವಿವರಿಸಿದರು.
ದಕ್ಷಿಣ ಭಾರತದ ಪ್ರಥಮ ಡಬಲ್ ಡೆಕ್ಕರ್ ಫ್ಲೈಓವರ್ ಇಂದಿನಿಂದ ಸೇವೆಗೆ: ಯಾರಿಗೆ ಹೆಚ್ಚು ಅನುಕೂಲ?
ಗಲ್ಫ್ ರಾಷ್ಟ್ರದಲ್ಲಿ ಹೆಚ್ಚಿನ ಪ್ರಕರಣ: ಏಜೆಂಟ್‌ಗಳಿಂದ ಮೋಸ ಹೋಗಿ ವಿದೇಶದಲ್ಲಿ ಸಮಸ್ಯೆ ಒಳಗಾಗುವವರ ಸಂಖ್ಯೆ ಹೆಚ್ಚಾಗಿಗಲ್ಫ್ ರಾಷ್ಟ್ರದಲ್ಲಿ ಕಂಡು ಬರುತ್ತಿದೆ. ಉಳಿದಂತೆ ಕಾಂಬೋ ಡಿಯಾ, ವಿಯಾಟ್ನಾಂನಲ್ಲಿಯೂ ಇದೆ. ಕಳೆದ ಜನವರಿಯಿಂದ ಒಟ್ಟು 18 ಮಂದಿಯನ್ನು ರಕ್ಷಿಸಲಾಗಿದೆ.