ವಿಮಾನನಿಲ್ದಾಣದಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಆತನ ಮಾಜಿ ಪತ್ನಿ ಭೀಕರವಾಗಿ ಕೊಂದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಬಳಿಕ ಗಂಡನ ಶವವನ್ನು ತುಂಡರಿಸಿದ ಮಹಿಳೆ, ಅದನ್ನು ಮರಳಲ್ಲಿ ಹುದುಗಿಸಿ ಇಟ್ಟಿದ್ದಾಳೆ.

ಬೆಂಗಳೂರು (ಏ.5):  ಚೆನ್ನೈನ ವಿಮಾನ ನಿಲ್ದಾಣದಲ್ಲಿ ಗ್ರೌಂಡ್ ಏರ್‌ಪೋರ್ಟ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ತಮಿಳುನಾಡಿನ ಪುದುಕೊಟ್ಟೈನಲ್ಲಿ ಆತನ ಪತ್ನಿಯೇ ಭೀಕರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. ಆತ ಸಾವು ಕಂಡ ಬಳಿಕ, ದೇಹವನ್ನು ತುಂಡುಗಳನ್ನಾಗಿ ಕತ್ತರಿಸಿದ್ದಲ್ಲದೆ, ಇದನ್ನು ಕೋವಲಂ ಬಳಿ ಸಾಗಿಸಿ ಅಲ್ಲಿನ ಮರಳಿನಲ್ಲಿ ಹುದುಗಿಸಿ ಇಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಮಾಡಿದ ಮಹಿಳೆಯನ್ನು ಭಾಗ್ಯಲಕ್ಷ್ಮೀ ಎಂದು ಗುರುತಿಸಲಾಗಿದೆ. ಭಾಗ್ಯಲಕ್ಷ್ಮೀಯೊಂದಿಗೆ ಆಕೆಯ ಸ್ನೇಹಿತನನ್ನೂ ಕೂಡ ಬಂಧಿಸಲಾಗಿದ್ದು, ಪೊಲೀಸರು ಮರಳಿನಲ್ಲಿ ಹುದುಗಿಸಿ ಇಡಲಾಗಿರುವ ಶವದ ತುಂಡುಗಳನ್ನು ತೆಗೆಯನ್ನೂ ಇನ್ನೂ ಹರಸಾಹಸಪಡುತ್ತಿದ್ದಾರೆ. ಕೊಲೆಯಾಗಿರುವ ಜಯಂಧನ್‌ ತಮಿಳುನಾಡಿನ ವಿಲ್ಲಪುರಂ ನಿವಾಸಿಯಾಗಿದ್ದು, ತನ್ನ ಸಹೋದರಿಯೊಂದಿಗೆ ನಂಗಾನಲ್ಲೂರ್‌ನಲ್ಲಿ ವಾಸವಾಗಿದ್ದರು. ಮಾರ್ಚ್‌ 18 ರಂದು ಮನೆಯನ್ನು ತೊರೆದಿದ್ದ ಜಯನಂಧನ್‌, ತನ್ನ ಸಹೋದರಿಗೆ ಊರಿಗೆ ಹೋಗಿ ಬರುವುದಾಗಿ ತಿಳಿಸಿದ್ದರು. ಆದರೆ, ಜಯನಂಧನ್‌ ಮನೆಗೆ ಹೋಗಿರಲಿಲ್ಲ ಹಾಗೂ ಅವರ ಫೋನ್‌ ಸ್ವಿಚ್‌ ಆಫ್‌ ಆಗಿತ್ತು. ಇದರಿಂದಾಗಿ ಮಾರ್ಚ್ 21 ರಂದು ಅವರ ಸಹೋದರಿ ಪೋಲೀಸರಿಗೆ ದೂರು ದಾಖಲು ಮಾಡಿದ್ದರು.

ಜಯನಂಧನ್‌ ಅವರ ಫೋನ್‌ಗೆ ಬಂದಿರುವ ಕರೆಗಳ ಮಾಹಿತಿಯನ್ನು ತೆಗೆದ ಬಳಿಕ ಸೆಮ್ಮಲಂಪಟ್ಟಿಯಲ್ಲಿರುವ 39 ವರ್ಷದ ಭಾಗ್ಯಲಕ್ಷ್ಮೀ ಬಳಿಕ ತನಿಖೆ ಕರೆದೊಯ್ದಿತ್ತು. ಭಾಗ್ಯಲಕ್ಷ್ಮೀ ತನ್ನ ಇನ್ನೊಬ್ಬ ಸ್ನೇಹಿತನ ಸಹಾಯದಿಂದ ಜಯನಂದನ್‌ನರನ್ನು ಕೊಲೆ ಮಾಡಿದ್ದಲ್ಲದೆ, ಬಳಿಕ ಆತನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದನ್ನು ಒಪ್ಪಿಕೊಂಡಿದ್ದಳು. ಮೊದಲು ಕೊಲೆ ಮಾಡಲು ಹಿಂಜರಿದಿದ್ದ ಭಾಗ್ಯಲಕ್ಮೀ ಬಳಿಕ ತಾನೇ ದೇಹವನ್ನು ಸ್ನೇಹಿತನ ಸಹಾಯದಿಂದ ಕತ್ತರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಧಾನಿ ಲಾಡ್ಜ್‌ ರೂಮ್‌ನಲ್ಲಿ ಎರಡೆರಡು ಶವ.. ಒಂದು ಮರ್ಡರ್.. ಮತ್ತೊಂದು ಸೂಸೈಡ್..!

ವೇಶ್ಯೆಯಾಗಿದ್ದ ಭಾಗ್ಯಲಕ್ಮೀ ಹಾಗೂ ಜಯನಂದನ್‌ ಹಲವು ವರ್ಷಗಳ ಹಿಂದೆ ತಾಂಬರಂನ ಹೋಟೆಲ್‌ನಲ್ಲಿ ಭೇಟಿಯಾಗಿದ್ದರು. ಬಳಿಕ ಅವರಿಬ್ಬರೂ 2020ರಲ್ಲಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಆದರೆ, 2021ರ ವೇಳೆಗೆ ಅವರು ಬೇರೆಬೇರೆಯಾಗಿದ್ದರು.

ಸೌಂಡ್‌ ಕಡಿಮೆ ಮಾಡಿ ಎಂದ ಮನೆ ಮಾಲೀಕನನ್ನೇ ಹೊಡೆದು ಕೊಂದ ಟೆಕ್ಕಿಗಳು: ದುರಂತ ಸಾವು

ಮಾರ್ಚ್ 19 ರಂದು ಜಯಂಧನ್ ತನ್ನನ್ನು ಭೇಟಿ ಮಾಡಲು ಬಂದಿದ್ದರು ಮತ್ತು ಇಬ್ಬರ ನಡುವೆ ಜಗಳ ನಡೆದು ಕೊಲೆಗೆ ಕಾರಣವಾಯಿತು ಎಂದು ಭಾಗ್ಯಲಕ್ಷ್ಮೀ ಹೇಳಿದ್ದಾರೆ. ಭಾಗ್ಯಲಕ್ಷ್ಮಿ ಅವರು ಕತ್ತರಿಸಿದ ದೇಹದ ಭಾಗಗಳನ್ನು ಸೂಟ್‌ಕೇಸ್ ಮತ್ತು ಗೋಣಿಚೀಲದಲ್ಲಿ ಸಾಗಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಅವರು ಕೋವಲಂ ಬಳಿಯ ನಗರದ ಹೊರವಲಯದಲ್ಲಿ ದೇಹದ ಭಾಗಗಳನ್ನು ಮರಳಿನಲ್ಲಿ ಹೂತಿದ್ದರು. ಎರಡು ಬಾರಿ ಅವರು ಕೋವಲಂಗೆ ಭೇಟಿ ನೀಡಿ ಮರಳಲ್ಲಿ ದೇಹದ ಭಾಗಗಳನ್ನು ಅಡಗಿಸಿಟ್ಟಿದ್ದರು. ಶವದ ತುಂಡಾದ ದೇಹದ ಭಾಗಗಳನ್ನು ಇನ್ನೂ ಹೊರತೆಗೆಯಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.