ತಮಿಳುನಾಡು ಎಟಿಎಂ ದರೋಡೆ ಪ್ರಕರಣ, ಆರೋಪಿಗಳು ಕೋಲಾರದಲ್ಲಿ ಅರೆಸ್ಟ್!

ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ರಾತ್ರೋರಾತ್ರಿ 4 ಎಟಿಎಂ ಕೇಂದ್ರಗಳಲ್ಲಿ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ತಮಿಳುನಾಡು ಪೊಲೀಸರು ಕೋಲಾರದಲ್ಲಿ ಬಂಧಿಸಿದ್ದಾರೆ.

Tamil Nadu ATM robbery case accused arrested in Kolara gow

ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್

ಕೋಲಾರ (ಫೆ.16): ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ರಾತ್ರೋರಾತ್ರಿ 4 ಎಟಿಎಂ ಕೇಂದ್ರಗಳಲ್ಲಿ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ತಮಿಳುನಾಡು ಪೊಲೀಸರು ಕೋಲಾರದಲ್ಲಿ ಬಂಧಿಸಿದ್ದಾರೆ. ಇದೇ ತಿಂಗಳ 12 ರಂದು ತಿರುವಣ್ಣಾಮಲೈನ ಮಾರಿಯಮ್ಮನ್ ದೇವಾಲಯದ 10 ನೇ ಬೀದಿಯಲ್ಲಿರುವ ಎಸ್‌ಬಿಐ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ನುಗ್ಗಿದ ದುಷ್ಕರ್ಮಿಗಳು ಎಟಿಎಂ ಯಂತ್ರವನ್ನು ಒಡೆದು ನಗದು ದೋಚಿದ್ರು. ಅದೇ ರೀತಿ ತೇನಿಮಲೈ ಮತ್ತು ಪೋಲೂರು ಪ್ರದೇಶಗಳಲ್ಲಿ ಎಸ್‌ಬಿಐ ಬ್ಯಾಂಕ್ ಮಾಲೀಕತ್ವದ ಎಟಿಎಂಗಳನ್ನು ಧ್ವಂಸಗೊಳಿಸಿ ಲೂಟಿ ಮಾಡಲಾಗಿತ್ತು. ಒಂದೇ ರಾತ್ರಿಯಲ್ಲಿ 4 ಎಟಿಎಂ ಕೇಂದ್ರಗಳಲ್ಲಿ ಒಟ್ಟು 80 ಲಕ್ಷ ರೂಪಾಯಿ ಕಳ್ಳತನವಾಗಿತ್ತು. ದರೋಡೆಕೋರರು ಬಳಸಿದ ಕಾರು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಆದರಿಸಿ ದರೋಡೆಕೋರರ ಬೆನ್ನು ಬಿದ್ದ ತಮಿಳುನಾಡು ಪೊಲೀಸರು ಕೋಲಾರದಲ್ಲಿ ಇಬ್ಬರು ಶಂಕಿತರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ದರೋಡೆಕೋರರು ಎಟಿಎಂ ಯಂತ್ರ ಮತ್ತು ಸಿಸಿಟಿವಿಗಳಿಗೆ ಬೆಂಕಿ ಹಚ್ಚಿದರ ಬೆನ್ನಲ್ಲೆ ಬೆರಳಚ್ಚು ಮತ್ತು ವಿಡಿಯೋ ರೆಕಾರ್ಡಿಂಗ್ ಅನ್ನು ಪತ್ತೆಹಚ್ಚಲು ಕಷ್ಟವಾಗಿತ್ತು. ವೆಲ್ಡಿಂಗ್ ಮಷಿನ್ ನಿಂದ ಎಟಿಎಂ ಯಂತ್ರಕ್ಕೆ ಬೆಂಕಿ ಹಚ್ಚಿ, ಎಟಿಎಂ ಕೇಂದ್ರದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾ ಹಾಗೂ ಹಾರ್ಡ್ ಡಿಸ್ಕ್ ಸುಟ್ಟು ಭಸ್ಮ ಮಾಡಿ ಪರಾರಿಯಾಗಿದ್ರು. ಇದಾದ ಬಳಿಕ ಉತ್ತರ ರಾಜ್ಯದ ದರೋಡೆಕೋರರು ಎರಡು ಗುಂಪುಗಳಾಗಿ ಒಡೆದು ದರೋಡೆಯಲ್ಲಿ ತೊಡಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು.

ಅದರಂತೆ ವೆಲ್ಲೂರು ಮೂಲಕ ಕಳ್ಳರು ಆಂಧ್ರಪ್ರದೇಶ ನೋಂದಣಿ ಸಂಖ್ಯೆಯ ಟಾಟಾ ಸುಮೋ ಕಾರನ್ನು ಬಳಸಿರುವುದು ಪತ್ತೆಯಾಗಿತ್ತು.  ಹರಿಯಾಣದ ಮೇವಾತ್‌ನ ನೂಕ್ ಜಿಲ್ಲೆ ಮೂಲದ ತಂಡವೊಂದು ಎಟಿಎಂ ದರೋಡೆ ನಡೆಸಿದೆ ಎಂದು ತಮಿಳುನಾಡು ಪೊಲೀಸ್ ಡಿಜಿಪಿ ಶೈಲೇಂದ್ರ ಬಾಬು ತಿಳಿಸಿದ್ದಾರೆ.

Crime News: ಲಕ್ಷಾಂತರ ರೂ ಮೌಲ್ಯದ ಆನೆ ದಂತ ಕಲಾಕೃತಿ ಮಾರಾಟ- ಐವರು ಪೊಲೀಸರ

ಇನ್ನೂ ದರೋಡೆಯಲ್ಲಿ ಭಾಗಿಯಾಗಿರುವ ಪ್ರಮುಖ ಅಪರಾಧಿ ಹರಿಬ್ ಹರಿಯಾಣದ ನೂಕ್ ಜಿಲ್ಲೆಯ ಮೇವಾತ್ ಮೂಲದವನೆನ್ನಲಾಗಿದ್ದು, ಇಬ್ಬರು ಕೋಲಾರದಲ್ಲಿ ತಲೆ ಮರೆಸಿಕೊಂಡಿದ್ದು ಅಮೀರ್ ಹಾಗೂ ನೌಶೀರ್ ಎಂಬುವವರನ್ನ ನ್ಯಾಮತ್ ಬಿ ದರ್ಗಾ ದಲ್ಲಿ ಅಡಗಿದ್ದವರನ್ನ ಬಂಧಿಸಲಾಗಿದೆ. ಇನ್ನೂ ಲಾನ್ಕು ಜನರು ಕೋಲಾರ ಹಾಗೂ ಕೆಜಿಎಫ್ ನಲ್ಲಿ ಅಡಗಿದ್ದಾರೆ ಎನ್ನಲಾಗಿದ್ದು,ತಮಿಳುನಾಡು ಪೊಲೀಸರು ಮತ್ತಷ್ಟು ಶೋಧ ಕಾರ್ಯ ಆರಂಭಿಸಿದ್ದಾರೆ.

ಆನ್‌ಲೈನ್‌ನಲ್ಲಿ ಚಂದದ ಹುಡುಗಿ ನೋಡಿ ಮದುವೆಯಾದ, ರೌಡಿಶೀಟರ್‌ ಎಂದು ಗೊತ್ತಾಗಿ ದಂಗಾದ!

ಅದರಂತೆ ನಿನ್ನೆ ರಾತ್ರಿ ತಿರುವಣ್ಣಾಮಲೈ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕಾರ್ತಿಕೇಯನ್,ಎಟಿಎಸ್ಪಿ ವಿಗ್ನೇಶ್ವರಯ್ಯ ಮತ್ತು ಇನ್ಸ್‌ಪೆಕ್ಟರ್ ಸೊಲೊಮನ್ ರಾಜ ಅವರನ್ನೊಳಗೊಂಡ 20 ಕ್ಕೂ ಹೆಚ್ಚು ಜನರ ಪೊಲೀಸ್ ತಂಡ ಕೋಲಾರದಲ್ಲಿ ಶಂಕಿತ ಇಬ್ಬರನ್ನ ಬಂಧಿಸಿದ್ದಾರೆ.

Latest Videos
Follow Us:
Download App:
  • android
  • ios