Asianet Suvarna News Asianet Suvarna News

ಬೆಂಗಳೂರಿಗನಿಗೆ ಶಾಕ್, 82,999 ರೂ ಆ್ಯಪಲ್ ವಾಚ್ ಜೊತೆ ಪರಾರಿಯಾದ ಸ್ವಿಗ್ಗಿ ಜೆನಿ ಡೆಲವರಿ ಬಾಯ್!

ಬೆಂಗಳೂರಿನ ವ್ಯಕ್ತಿಯೊಬ್ಬ ಸ್ವಿಗ್ಗಿ ಜೆನಿ ಸೇವೆ ನಂಬಿ ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ. ಗೆಳೆಯಲಿಗೆ ಆ್ಯಪಲ್ ವಾಚ್‌ನ್ನು ಸ್ವಿಗ್ಗಿ ಜೆನಿ ಮೂಲಕ ಕಳುಹಿಸಿದ್ದಾನೆ. ಆರ್ಡರ್ ಪಡೆದ ಡೆಲವರಿ ಬಾಯ್, ಪಾರ್ಸೆಲ್ ತಲುಪಿಸಿಲ್ಲ. ವಾಚ್ ಜೊತೆ ಪರಾರಿಯಾಗಿದ್ದಾನೆ.ಲೋಕೇಶ್ ಟ್ರೇಸ್ ಮೂಲಕ ಇಬ್ಬರು ಗೆಳೆಯರು ಕಳ್ಳನ ಹಿಡಿದಿದ್ದಾರೆ.

Swiggy Genie delivery boy runs away with Bengaluru users apple watch worth rs 82999 ckm
Author
First Published Jul 14, 2023, 1:21 PM IST

ಬೆಂಗಳೂರು(ಜು.14) ಸ್ವಿಗ್ಗಿ ಫುಡ್ ಡೆಲವರಿ ಜೊತೆಗೆ ತನ್ನ ವ್ಯವಹಾರ ವಿಸ್ತರಿಸಿರುವುದು ಹೊಸದೇನಲ್ಲ. ಸ್ವಿಗ್ಗಿ ಜೆನಿ ಸರ್ವೀಸ್ ಮೂಲಕ ಗ್ರಾಹಕರ ವಸ್ತುಗಳನ್ನು ತಲುಪಿಸುವ ಕೊರಿಯರ್ ರೀತಿ ಸೇವೆ ನೀಡುತ್ತಿದೆ. ಈ ಸೇವೆಯನ್ನು ನಂಬಿಕ ಬೆಂಗಳೂರಿನ ವ್ಯಕ್ತಿ ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ. ಗೆಳೆಯನಿಗೆ 82,999 ರೂಪಾಯಿ ಮೌಲ್ಯದ ಆ್ಯಪಲ್ ವಾಚ್‌ನ್ನು ಸ್ವಿಗ್ಗಿ ಜೆನಿ ಸರ್ವೀಸ್ ಮೂಲಕ ಕಳುಹಿಸಲಾಗಿದೆ. ಗೆಳೆಯನ ವಿಳಾಸಕ್ಕೆ ಆ್ಯಪಲ್ ವಾಚ್ ತಲುಪಿಸಲು ಸ್ವಿಗ್ನಿ ಜೆನಿ ಆ್ಯಪ್ ಬಳಸಿಕೊಂಡಿದ್ದಾನೆ. ಬುಕಿಂಗ್ ಮಾಡಿದ ಬೆನ್ನಲ್ಲೇ ಡೆಲಿವರಿ ಬಾಯ್ ಬಂದು ಆ್ಯಪಲ್ ವಾಚ್ ಪಾರ್ಸೆಲ್ ಆರ್ಡರ್ ಸ್ವೀಕರಿಸಿ ತೆರಳಿದ್ದಾನೆ. ಆದರೆ ಈ ಆ್ಯಪಲ್ ವಾಚ್, ಗೆಳೆಯನ ವಿಳಾಸ ತಲುಪಲೇ ಇಲ್ಲ. ಎಷ್ಟು ಹೊತ್ತಾದರೂ ವಾಚ್ ತಲುಪಿಲ್ಲ. ಇತ್ತ ಡೆಲಿವರಿ ಬಾಯ್‌ಗೆ ಕರೆ ಮಾಡಿದರೆ ಸ್ವಿಚ್ ಆಫ್.  ತಕ್ಷಣ ಎಚ್ಚೆತ್ತ ಇಬ್ಬರು ಗೆಳೆಯರು ಆ್ಯಪಲ್ ವಾಚ್‌ನ ಮೊಬೈಲ್ ಆ್ಯಪ್‌ನಲ್ಲಿ ಲೋಕೇಶ್ ಟ್ರೇಸ್ ಮಾಡಿ ನೇರವಾಗಿ ಕಳ್ಳನ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಗೆಳೆಯನ ಮನೆಗೆ ತೆರಳಿದ ವ್ಯಕ್ತಿ ತನ್ನ 82,999 ರೂಪಾಯಿ ಮೌಲ್ಯದ ಆ್ಯಪಲ್ ವಾಚ್ ಮರೆತು ಬಿಟ್ಟಿದ್ದರು. ಕಚೇರಿ ಕೆಲಸದಲ್ಲಿ ಬ್ಯೂಸಿಯಾಗಿರುವ ಕಾರಣ ವಾಚನ್ನು ತಲುಪಿಸುವ ಅಥವಾ ಮತ್ತೆ ಗೆಳೆಯನ ಮನೆಗೆ ತೆರಳಿ ವಾಚ್ ಪಡೆಯುವುದು ಕಷ್ಟವಾಗಿತ್ತು. ಹೀಗಾಗಿ ಗೆಳೆಯ ಸ್ವಿಗ್ಗಿ ಜೆನಿ ಆ್ಯಪ್ ಮೂಲಕ ಪಾರ್ಸೆಲ್ ಕಳುಹಿಸಲು ನಿರ್ಧರಿಸಿದ್ದ.

Bengaluru: ಲಿಫ್ಟ್‌ನಲ್ಲಿ 10 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಫುಡ್‌ ಡೆಲಿವರಿ ಬಾಯ್

ಆ್ಯಪ್ ತೆರೆದು ಪಾರ್ಸೆಲ್ ಆರ್ಡರ್ ಬುಕ್ ಮಾಡಿದ್ದ. ಇದಕ್ಕೆ ತಗಲುವು ವೆಚ್ಚವನ್ನು ಪಾವತಿಸಿದ. ವಾಚ್ ಪಡೆಯಬೇಕಾದ ವಿಳಾಸ, ತಲುಪಿಸಬೇಕಾದ ವಿಳಾಸ, ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಆರ್ಡರ್ ಪ್ಲೇಸ್ ಮಾಡಲಾಗಿತ್ತು. ಕೆಲ ಹೊತ್ತಲ್ಲೇ ಸ್ವಿಗ್ನಿ ಜೆನಿ ಡೆಲಿವರಿ ಬಾಯ್ ಸ್ಥಳಕ್ಕೆ ಆಗಮಿಸಿ ಪ್ಯಾಕ್ ಮಾಡಿದ್ದ ಆ್ಯಪಲ್ ವಾಚ್ ಪಡೆದು ತನ್ನ ಆ್ಯಪ್‌ನಲ್ಲಿ ಅಪ್‌ಡೇಟ್ ಮಾಡಿ ತೆರಳಿದ್ದ. 

ಏಷ್ಟೇ ಹೊತ್ತಾದರು ಆ್ಯಪಲ್ ವಾಚ್ ಗೆಳೆಯನಿಗೆ ತಲುಪಲೇ ಇಲ್ಲ. ಅನುಮಾನಗೊಂಡ ಗೆಳೆಯ ಡೆಲಿವರಿ ಬಾಯ್‌ಗೆ ಕರೆ ಮಾಡಿದ್ದಾನೆ. ಆದರೆ ಸ್ವಿಚ್ ಆಫ್. ಇತ್ತ ಆ್ಯಪ್‌ನಲ್ಲಿ ಆರ್ಡರ್ ಸ್ಟೇಟಸ್ ನೋಡಿದರೆ ಎಲ್ಲವೂ ಕ್ಯಾನ್ಸಲ್ ಆಗಿದೆ. ಬರೋಬ್ಬರಿ 82,999 ರೂಪಾಯಿ ಆ್ಯಪಲ್ ವಾಚ್ ಕಳುವಾಗಿರುವುದು ಖಚಿತಗೊಂಡಿದೆ. ಈ ಕುರಿತು ಸ್ವಿಗ್ಗಿ ಜೆನಿಗೆ ದೂರು ನೀಡಿದರೆ ನೀವು ಇಮೇಲ್ ಕಳುಹಿಸಿ ಎಂಬ ಉತ್ತರ ಬಂದಿದೆ.

ಸ್ವಿಗ್ಗಿಯ ವೆಜ್ ಬಿರಿಯಾನಿಯಲ್ಲಿ ಸಿಕ್ತು ಮಾಂಸದ ತುಂಡು..ಮಹಿಳೆ ಕಕ್ಕಾಬಿಕ್ಕಿ!

ತಡ ಮಾಡಿದರೆ ಡೆಲವರಿ ಬಾಯ್ ಬೆಂಗಳೂರು ಬಿಟ್ಟು ಹೋಗುವ ಸಾಧ್ಯತೆ ಇದೆ. ಹೀಗಾದರೆ ಆ್ಯಪಲ್ ವಾಚ್ ಮರಳಿ ಸಿಗುವ ಸಾಧ್ಯತೆ ಕಡಿಮೆ. ಹೀಗಾಗಿ ಆ್ಯಪಲ್ ವಾಚ್ ಮಾಲೀಕ ತನ್ನ ಮೊಬೈಲ್‌ನಲ್ಲಿರುವ ಆ್ಯಪಲ್ ಆ್ಯಪ್ ತೆರೆದು ವಾಚ್ ಲೊಕೇಶನ್ ಟ್ರೇಸ್ ಮಾಡಿದ್ದಾರೆ. ಈ ವೇಳೆ ಚಾಲಾಕಿ ಡೆಲಿವರಿ ಬಾಯ್ ಲೊಕೇಶನ್ ಪತ್ತೆಯಾಗಿದೆ. ರಾತ್ರಿ 2 ಗಂಟೆಗೆ ಡೆಲಿವರಿ ಬಾಯ್ ಲೋಕೇಶನ್‌ಗೆ ತೆರಳಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ವೇಳೆ ಡೆಲಿವರಿ ಬಾಯ್ ಪ್ಯಾಕ್ ಮಾಡಿದ್ದ ಆ್ಯಪಲ್ ವಾಚ್ ಪ್ಯಾಕ್ ಒಪನ್ ಮಾಡಿದ್ದ. 

ನಡೆದ ಘಟನೆಯನ್ನು ವಾಚ್ ಮಾಲೀಕನ ಗೆಳೆಯ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಈ ಪ್ರಕರಣದ ಕುರಿತು ಎಫ್ಐಆರ್ ದಾಖಲಾಗಿದೆಯಾ ಅನ್ನೋ ಕುರಿತು ಯಾವುದೇ ಮಾಹಿತಿ ಇಲ್ಲ. 

Follow Us:
Download App:
  • android
  • ios