ಬೆಂಗಳೂರಿನಲ್ಲಿ ಫುಡ್‌ ಡೆಲಿವರಿಗೆಂದು ಹೋದ ಯುವಕ ಲಿಫ್ಟ್‌ನಲ್ಲಿ ಒಬ್ಬಂಟಿಯಾಗಿ ಸಿಕ್ಕಿದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಪೊಲೀಸರ ಅತಿಥಿಯಾಗಿದ್ದಾನೆ.

ಬೆಂಗಳೂರು (ಜೂ.23): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ನಲ್ಲಿರುವ ಹಲವು ನಿವಾಸಿಗಳು ಹೋಟೆಲ್‌ಗಳಿಂದ ಫುಡ್‌ ಡೆಲಿವರಿ ಬಾಯ್‌ಗಳಿಂದ ಅಕ್ಕಿ ತರಿಸಿಕೊಳ್ತಾರೆ. ಆದರೆ, ಹೀಗೆ ಫುಡ್‌ ಡೆಲಿವರಿಗೆ ಬಂದಿದ್ದ ಯುವಕ ಲಿಫ್ಟ್‌ನಲ್ಲಿ ಒಬ್ಬಂಟಿಯಾಗಿ ಸಿಕ್ಕಿದ್ದ 10 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದನು. ಬಾಲಕಿ ಪೋಷಕರ ದೂರಿನ ಮೇರೆಗೆ ಈಗ ಪೊಲೀಸರ ಅತಿಥಿಯಾಗಿದ್ದಾನೆ. 

ನಗರದಲ್ಲಿ ಜೊಮೊಟೋ, ಸ್ವಿಗ್ಗಿ ಹಾಗೂ ಊಬರ್‌ ಈಟ್ಸ್‌ ಸೇರಿದಂತೆ ಹಲವು ಕಡೆಗಳಿಂದ ಆಹಾರ ಪಾರ್ಸಲ್‌ ತರಿಸಿಕೊಂಡು ಊಟ ಮಾಡುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇನ್ನು ಅಪಾರ್ಟ್‌ಮೆಂಟ್‌ ನಿವಾಸಿಗಳಲ್ಲಿ ಪಾರ್ಸಲ್‌ ಆಹಾರ ಸೇವನೆ ಮಾಡುವವರ ಸಂಖ್ಯೆಯೇ ಅಧಿಕವಾಗಿರುತ್ತದೆ. ಬೆಂಗಳೂರಿನ ತಲಘಟ್ಟಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿನ ಅಪಾರ್ಟ್‌ಮೆಂಟ್‌ಗೆ ಫುಡ್‌ ಡೆಲಿವರಿ ಮಾಡಲು ಹೋಗಿದ್ದ ಯುವಕನೊಬ್ಬ, ಲಿಫ್ಟ್‌ನಲ್ಲಿ ಹೋಗುವಾಗ ಬಾಲಕಿ ಒಬ್ಬಂಟಿಯಾಗಿ ಸಿಕ್ಕಿದ್ದಾಳೆ. 13ನೇ ಮಹಡಿಗೆ ಬಾಲಕಿ ಹೋಗುತ್ತಿದ್ದರಿಂದ ಲಿಫ್ಟ್‌ನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

Bengaluru: ಮಕ್ಕಳನ್ನು ಡೇ ಕೇರ್‌ ಸೆಂಟರ್‌ಗೆ ಸೇರಿಸೋ ಪೋಷಕರೇ ಎಚ್ಚರ.!

ಫುಡ್‌ ಡೆಲಿವಾರಿ ಬಾಯ್‌ ಬಂಧನ: ಅಪಾರ್ಟ್‌ಮೆಂಟ್‌ ಲಿಫ್ಟ್ ನಲ್ಲಿ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿ ಬಂಧನ ಮಾಡಲಾಗಿದೆ. ಆರೋಪಿ ಫುಡ್ ಡೆಲಿವರಿ ಬಾಯ್ ಚೇತನ್ ಬಂಧನವಾಗಿದೆ. ಬೆಂಗಳೂರಿನ ತಲಘಟ್ಟಪುರ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ಘಟನೆ ನಡೆದಿತ್ತು. ಅಪಾರ್ಟ್ಮೆಂಟ್ ನ ಲಿಫ್ಟ್ 13 ನೇ ಮಹಡಿಗೆ ತೆರಳ್ತಿದ್ದ 10 ವರ್ಷದ ಬಾಲಕಿಗೆ ಲೈಂಕಿಕ ಕಿರುಕುಳ ನೀಡಿ ಅಲ್ಲಿಂದ ಪರಾರಿ ಆಗಿದ್ದನು. ಈ ಬಗ್ಗೆ ಬಾಲಕಿ ಪೋಷಕರು ಕೂಡಲೇ ಅಪಾರ್ಟ್ಟ್ಮೆಂಟ್ ಸೆಕ್ಯೂರಿಟಿ ಗಮನಕ್ಕೆ ತಂದಿದ್ದರು. ಆರೋಪಿ ಚೇತನ್‌ನನ್ನು ಸ್ಥಳದಲ್ಲೇ ವಶಕ್ಕೆ ಪಡೆದು ಪೊಲೀಸರು ಬಂಧಿಸಿದ್ದಾರೆ. ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ದ ಪೋಕ್ಸೊ ಕಾಯ್ದೆ ಅಡಿ ಕೇಸ್ ದಾಖಲು ಮಾಡಲಾಗಿದೆ.

ಸ್ಕೂಟಿ ಕಲಿಸೋದಾಗಿ ಅಪ್ರಾಪ್ತೆ ಮೇಲೆ ಅತ್ಯಾಚಾರ: ಸಿಂಧನೂರು (ಜೂ.23): ತಾಲೂಕಿನ ಪುನರ್‌ ವಸತಿ ಕ್ಯಾಂಪ್‌-3 (ಆರ್‌ಎಚ್‌ಕ್ಯಾಂಪ್‌)3 ರಲ್ಲಿ ಯುವಕನೋರ್ವ ಅಪ್ರಾಪ್ತ ಬಾಲಕಿಗೆ ಸ್ಕೂಟಿ ಕಲಿಸುವ ನೆಪದಲ್ಲಿ ಅತ್ಯಾಚಾರ ವೆಸಗಿದ್ದು, ಈ ಕುರಿತು ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಚೆಗೆ ಆರ್‌ಎಚ್‌ ನಂ. 3ರ ಸಪನ್‌ ಮಂಡಲ್‌ ಎಂಬ 26 ವಯಸ್ಸಿನ ಯುವಕ ಅದೇ ಕ್ಯಾಂಪಿನ ನಾಲ್ಕನೇ ತರಗತಿ ಓದುತ್ತಿರುವ 11 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಗೆ ಚಾಕೊಲೇಟ್‌ ಕೊಡಿಸಿ ಕ್ಯಾಂಪಿನಿಂದ ಉದ್ಬಾಳ ರಸ್ತೆಯವರೆಗೆ ತನ್ನ ಸ್ಕೂಟಿಯಲ್ಲಿ ಕೂಡಿಸಿಕೊಂಡು ಕರೆದುಕೊಂಡು ಹೋಗಿದ್ದಾನೆ.

RAICHUR CRIME: ಸ್ಕೂಟಿ ಕಲಿಸುವ ನೆಪದಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ

ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು: ನಂತರ ದಾರಿಯ ಮಧ್ಯೆ ಸ್ಕೂಟಿ ಕಲಿಸುವುದಾಗಿ ಅಕೆಯನ್ನು ನಂಬಿಸಿ ಉದ್ಬಾಳ ಬಳಿ ಯಾರು ಇಲ್ಲದ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ವೆಸಗಿದ್ದಾನೆ ಎಂದು ಬಾಲಕಿಯ ತಾಯಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸ್‌ ಅಧಿಕಾರಿಗಳು ಆರೋಪಿ ಸಪನ್‌ ಮಂಡಲ್‌ನನ್ನು ಪತ್ತೆಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನೆ ಮಾಹಿತಿ ಪಡೆದ ಜಿಲ್ಲಾ ಪೊಲೀಸ್‌ ವರಿ​ಷ್ಠಾ​ಧಿ​ಕಾರಿ ನಿಖಿಲ್‌ ಬಿ. ಹಾಗೂ ಪೊಲೀಸ್‌ ಅಧಿ​ಕಾ​ರಿ​ಗಳು ಸ್ಥಳಕ್ಕೆ ಭೇಟಿ ನೀಡಿ ಪರಿ​ಶೀ​ಲನೆ ನಡೆಸಿ ಅಗತ್ಯ ಮಾಹಿ​ತಿ​ಯನ್ನು ಕಲೆ​ಹಾ​ಕಿ​ದ್ದಾ​ರೆ. ಈ ಕುರಿತು ತನಿಖೆ ನಡೆದಿದೆ ಎಂದು ಗ್ರಾಮೀಣ ಪೊಲೀಸ್‌ ಠಾಣೆಯ ಪಿಎಸ್‌ಐ ಮಣಿಕಂಠ ತಿಳಿಸಿದ್ದಾರೆ.